ಪುಟ:Mrutyunjaya.pdf/೬೭೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬೦- ಮ್ರುತ್ತ್ಯುಂಜಯ ಸ್ತೋತ್ರ ಗಾನದ ಮಧುರ ಅಲೆಗಳಿಗೆ ಕಿವಿಗೊಡುತ್ತ ಮಂತ್ರಮುಗ್ಧ ರಂತೆ ಜನರು ಮಂಡಿಯೂರಿ ಹಾಗೆಯೇ ಇದ್ದರು. ಅವರಲ್ಲಿ ಹಲವರ ಕೈ ಗಳಲ್ಲಿನ್ನೂ ಸಾವಿನ ಊಟವಿತ್ತು. ಅದನ್ನವರು ನಡುವಸ್ತ್ರದ ಮಡಿಕೆಗಳ ಮರೆಗೆ ತಳ್ಳಿದರು. ಸ್ತೋತ್ರಗಾನ ನಡೆದಿದ್ದಂತೆ ಹೇಪಾಟ್ ಬಕಿಲನನ್ನು ಕರೆದ;ಪಿಸುದನಿಯಲ್ಲಿ ನಿರ್ದೇಶಗಳನ್ನಿತ್ತ: ಹಿರಿಯರ ಸಮಿತಿ ಸದಸ್ಯರನ್ನೂ ಇತರ ಪ್ರಮುಖರನ್ನೂ ಹಿಡಿದು ಹಾಕು. ರಾ ಅಸ್ತಮಿಸಿದ ಮೇಲೆ ದೇವಮಂದಿರದಲ್ಲಿ ವಿಶೇಷ ಪೂಜೆ, ಊರಿನ ಎಲ್ಲ ಜನ ಅಲ್ಲಿಗೆ ಬರಬೇಕೂಂತ ಡಂಗುರ ಸಾರಿಸು. ಪೂಜೆಗೆ ಬಂದಾಗ ಹೃಷ್ಟ ಪುಷ್ಟರಾದ ಗಂಡಸರನ್ನೂ ಹೆಂಗಸರನ್ನೂ ಬೇರ್ಪಡಿಸಿ ಸೆರೆ ಹಿಡೀಬೇಕು. ಒಟ್ಟು ಹತ್ತು ಸಾವಿರ ದಾಸದಾಸಿಯರಾದರೂ ಇಲ್ಲಿಂದ ಗುರುಮನೆಗೆ ಸಿಗಬೇಕು." ವಿನೀತನಾಗಿ ಬಕಿಲ ಕೇಳಿದ : “ದಂಡಿಗೆ ಯೋಧರು ?” “ನಾಳೆಯಿಂದ ಪ್ರಾಂತದ ಒಳನಾಡಿನಲ್ಲಿ ಸಂಚಾರಮಾಡಿ, ಬೇಕಾದವ ರನ್ನು ಆರಿಸಿಕೊ.” “ಎಲ್ಲರನ್ನೂ ಕ್ಷಮಿಸಿದ್ದೇವೆ ಅಂತ ತಾವು ಅಪ್ಪಣೆ ಕೊಡಿಸಿದರೆ ಪ್ರತಿಭಟನೆ ಇರೋದಿಲ್ಲ . “ಹಹ್ಲ ! ರಾಜನೀತಿ ಪಾಠ ಹೇಳಿಕೊಡ್ತಿದೀಯೇನೋ ಭಡವಾ ?” “ತಪ್ಪಾಯಿತು.” “ಯಾರೂ ಪ್ರತಿಭತಿಸೋದಿಲ್ಲ. ಹೃಷ್ಟಪುಷ್ಟರನ್ನು ಬಂಧಿಸೋದಕ್ಕೆ ಅರ್ಧ ದಂಡು ದೇವಮಂದಿರದಲ್ಲಿ ಬಿಡು. ಕೆಲವರು ಇಲ್ಲಿರಲಿ, ಉಳಿದವರು ನೀರಾನೆ ಪಟ್ಟಣಕ್ಕೆ ಬೆಂಕಿ ಹಚ್ಚಲಿ, ಈ ಸಲದ ಫಸಲೂ ಅಷ್ಟೆ ಇದು ಪಾಪದ ಬೆಳೆ, ಪಟ್ಟಣದ ಸುತ್ತ ಮತ್ತು ಒಳನಾಡಿನಲ್ಲಿ ಒಂದು ಹೊಲದಲ್ಲಾ ಕುಯಿಲು ಬೇಡ. ಬೆಮ್ಕಿ ಹಚ್ಚಿ ಸುಟ್ಟು ಬಿಡಿ." "ಆಗಲಿ. ನುಟ್ಮೋಸ್ ತನಗೆ ಅದು ಬೇಕು ಇದು ಬೇಕು ಅಂತ ಕೇಳಬಹುದು."