ಪುಟ:Mrutyunjaya.pdf/೬೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೬೧

“ತೆಪ್ಪಗಿರಬೇಕೂಂತ. ಅವನಿಗೆ ಹೇಳು. ಭೂಮಾಲಿಕರ ರಾಸುಗಳು
ಎಷ್ಟೂಂತ ವಿಚಾರಿಸಿ ಕೊಟ್ಟುಬಿಡು. ಹತ್ತು ಹತ್ತು ಜನ ಜೀತದವರನ್ನು
ಕೊಡು, ಹ್ಞ. ಆ ನೀರಾನೆ ಕ್ರಿಮಿ ವಿಷಯ. ಶವಕ್ಕೆ ಭದ್ರ ಕಾವಲಿಡೋದು
ಆ ಮೂರ್ಖ ಅಮಾತ್ಯನಿಂದ ಆಗದೆ ಹೋಯ್ತು. ಆ ಶವ ನನಗೆ ಬೇಕು.
ಕತ್ತರಿಸಿ ಮೊಸಳೆಗಳಿಗೆ ಎಸೀಬೇಕು. ಹುಡುಕು. ಗೋರಿ ಪ್ರದೇಶದಲ್ಲಿ
ಇದ್ದೀತು. ಆ ಹುಚ್ಚ ಮೆನ್ನ ಇಲ್ಲಿದ್ದಾನೇಂತ ತೋರದೆ, ಇನೇನಿ ಬಂದೂಡ್ಡೆ
ಹೇಳು. ಗುರುತಿಸ್ತಾನೆ. ಹಿಡೀಬೇಕು.... ಈ ಊರಿನ ಮಂದಿರದ
ಅರ್ಚಕನ ಗತಿ ಏನಾಯ್ತು ? ಸತ್ತ ? ಮಂದಿರಕ್ಕೆ ಸೈನಿಕರನ್ನು
ಕಳಿಸು....ಹೋಗು....ಹೋಗು....”
ಬಕಿಲ ರಾಜಗೃಹದತ್ತ ಓಡುತ್ತಲೇ, ಹೇಪಾಟ್ ಕಿರಿಯ ದೇವಸೇವಕ
ರತ್ತ ತಿರುಗಿ, "ಸ್ತೋತ್ರಗಾನ ನಿಲ್ಲಿಸ್ಬೇಡಿ. ಒಂದಾದ ಮೇಲೊಂದು ಹಾಡ್ತಾ
ಹೋಗಿ,” ಎಂದ
ಮಂಡಿಯೂರಿ ತಲೆಬಾಗಿದವರು, ತಮ್ಮನ್ನು ಆವರಿಸಿದ ಮೋಡಿಯಿಂದ
ಹೊರಬರಲಾಗದೆ ಹಾಗೆಯೇ ಕುಳಿತರು.
ದೇವತಾಮೂರ್ತಿಯ ಮಗ್ಗುಲಲ್ಲಿ ಬೆಳ್ಳಿಯ ಹಿಡಿಯ ಅಧಿಕಾರದ
ಕೋಲನ್ನು ಹಿಡಿದು ನಿಂತ ಹೇಪಾಟ್‌ಗೆ ತೋರಿತು :
'ಇದು ಭಕ್ತಿಯ ಕಾಳು ತಿನ್ನಲೆಂದು ಹೊಲಕ್ಕೆ ಎರಗಿರುವ ಹಕ್ಕಿಗಳ
ಹಿಂಡು.'

  • ***

ಅಪೆಟ್ ನನ್ನು ಕರೆತರಲು ದೇವಮಂದಿರಕ್ಕೆ ಧಾವಿಸಿದ ಹತ್ತು ಜನ ರಾಜ
ಭಟರನ್ನು ಮಂದಿರದ ಮಹಾದ್ವಾರದಲ್ಲಿದ್ದ ನೀರಾನೆ ಪ್ರಾಂತದ ಯೋಧ
ದ್ವಯರು ಇದಿರಿಸಿದರು.
“ಯಾರು ನೀವು ?”
“ನೀವು ಯಾರು ?"
ಅಪೆಟ್ ತಲೆ ಹೊರಹಾಕಿ, “ನಾನು ಅರ್ಚಕ. ನನ್ನನ್ನು ಬಿಡಿಸ್ಕೊಳ್ಳಿ.
ಬೆಳಿಗ್ಗೆಯಿಂದ ಬಂಧನದಲ್ಲಿದ್ದೇನೆ,” ಎಂದು ಕೂಗಿ ಹೇಳಿದ. ರಾಜಬೀದಿ