ಪುಟ:Mrutyunjaya.pdf/೬೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೬೩

“ಛೇ! ಛೇ ! ಇದೊಳ್ಳೆ ಫಜೀತಿ. ಈ ಸತ್ತವರನ್ನು ಇಲ್ಲಿಂದ ಎಳೆದು
ಹಾಕೀಪ್ಪಾ, ಬಾಣ ತಗಲಿದವರಿಗೆ ನನ್ನ ಹೆಂಡತಿ ಶುಕ್ರೂಷೆ ಮಾಡ್ತಾಳೆ.
ನನ್ನ ಮಗನಿಗೂ ವೈದ್ಯಕೆ ಬರದೆ. ನೀವು ಒಂದು ನಾಲ್ಕು ಜನ ನನ್ನ ಜತೆ
ಬನ್ನಿಪ್ಪಾ, ನನಗೇನೂ ಹೆದರಿಕೆ ಇಲ್ಲ. ಒಬ್ಬನೇ ಹೋಗಬಲ್ಲೆ. ಆದರೂ…”
ಅಪೆಬ್ ಬೇಗಬೇಗನೆ ರಾಜಗೃಹದತ್ತ ಹೆಜ್ಜೆ ಇರಿಸಿದ, ವೇಗ ಜಾಸ್ತಿಯಾಗಿ
ಏದುಸಿರು ಬಿಡತೊಡಗಿದ. ನಿಧಾನಿಸಿದ. ಬಯಲು ಹತ್ತಿರ ಬಂದೊಡನೆ
ಮತ್ತೆ ಓಡತೊಡಗಿ, “ಪೆರೋನ ಆಯುರಾರೋಗ್ಯ ವರ್ಧಿ ಸಲೀ ! ” ಎನ್ನುತ್ತ,
ಮಹಾ ಅರ್ಚಕನ ಮುಂದೆ ಬೋರಲು ಬಿದ್ದು, ಒಂದು ಕೈಯಿಂದ
ಹೇಪಾಟ್ನ ಪಾದವನ್ನೂ ಇನ್ನೊಂದರಿಂದ ಮಹಾ ಅರ್ಚಕನ ಅಧಿಕಾರದ
ಕೋಲನ್ನೂ ಹಿಡಿದುಕೊಂಡ,
“ಏಳು,” ಎಂದ ಹೇಪಾಟ್.
ಹರ್ಷಾಶ್ರು ಸುರಿಸುತ್ತ ಅಪೆಟ್ ಏಳುವುದಕ್ಕೂ ಪಲ್ಲಕಿಯಿಂದ ನಾಲ್ಕು
ಹೆಜ್ಜೆ ದೂರದಲ್ಲೇ ಇಳಿದು ಇನೇನಿ ಮತ್ತು ನುಟ್ಮೋಸ್ ನಡೆದು ಬರುವು
ದಕ್ಕೂ ಸರಿ ಹೋಯಿತು.
ಇನೇನಿಯ ತೊಡೆಯಿಂದ ಇನ್ನೂ ರಕ್ತ ಒಸರುತ್ತಿದ್ದುದನ್ನು ಕಂಡು
ಮಹಾ ಅರ್ಚಕನ ಸಿಟ್ಟು ತುಸು ತಣಿಯಿತು. ಇನ್ನೇನಿ ಮತ್ತು ಅಸೆಟ್
ಪರಸ್ಪರ ನೋಡದೆ ಅದೆಷ್ಟು ವರ್ಷಗಳಾಗಿದ್ದುವು ! ರಾಜಧಾನಿಯಲ್ಲಿ
ಮಹಾ ಅರ್ಚಕನಿಗೆ ಹತ್ತಿರದ ಪ್ರತಿಷ್ಠಿತನಾಗಿದ್ದ ಮಿತ್ರರ ಪಕ್ಕಕ್ಕೆ ಹೋಗಿ
ಅಸೆಟ್ ಮೌನವಾಗಿ ನಿಂತ, ಕುಶಲ ಪ್ರಶ್ನೆಗಳನ್ನಾಡಲು ಯೋಗ್ಯ ಸನ್ನಿವೇಶ
ಅದಲ್ಲವಲ್ಲ.
ಮಹಾ ಅರ್ಚಕನಿಂದ ಆಜ್ಞಪ್ತನಾಗಿ ಇನೇನಿ ಜನಸ್ತೋಮವನು
ಉದ್ದೇಶಿಸಿ ನುಡಿದ :
"ಇಲ್ಲಿ ಕೇಳಿ ! ನಮ್ಮ ದೇಶದ ಶ್ರೇಷ್ಠತಮ ಧರ್ಮಗುರು ಹೇಪಾಟ್
ರವರು ನೀರಾನೆ ಪ್ರಾಂತದ ಪ್ರಜೆಗಳ ದೈವಭಕ್ತಿಯನ್ನು ಕಂಡು ಪರನು
ಸಂತುಷ್ಟರಾಗಿದ್ದಾರೆ.”
ಹೇಪಾಟ್ ಬಲತೋಳನ್ನೆತ್ತಿದ. ಇನೇನಿ ಮುಂದುವರಿದ :