ಪುಟ:Mrutyunjaya.pdf/೬೭೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬೪

ಮೃತ್ಯುಂಜಯ


"ಮಹಾ ಅರ್ಚಕರು ನಿಮ್ಮನ್ನೆಲ್ಲ ಆಶೀರ್ವದಿಸಿದ್ದಾರೆ.ನೀವೆಲ್ಲ ಇನ್ನು
ಏಳಬಹುದು."
ಜನಸಮುದಾಯ ಎದ್ದು ನಿಂತು ಉಸಿರಾಡಿತು.
ಅಪೆಟ್ ನನ್ನು ಕರೆದು ಇಳಿದನಿಯಲ್ಲಿ ಹೇಪಾಟ್ ಕೆಲವು ಸೂಚನೆಗಳ
ನ್ನಿತ್ತ. ಅವುಗಳನ್ನು ಆಧರಿಸಿ ಅಪೆಟ್ ಗಟ್ಟ ಧ್ವನಿಯಲ್ಲಿ ಅಂದ:
“ನಮ್ಮೆಲ್ಲರ ಮಹಾ ಕುರುಬನೇ ಇಲ್ಲಿಗೆ ಬರುವುದರ ಬದಲು ಮಹಾ
ಅರ್ಚಕರು ದಯಮಾಡಿಸಿದ್ದಾರೆ. ಇದು ಧರ್ಮಸಂಸ್ಥಾಪನಾ ಕಾರ್ಯ.
ಸ್ವಲ್ಪ ಕಾಲ ಸೆತ್ ನ ಆರಾಧನೆಯನ್ನು ನಾವು ಮಾಡಿದ್ದು ನಿಜ. ನಮ್ಮ ಆ
ತಪ್ಪುಗಳನ್ನು (ಜನಸಮುದಾಯದಲ್ಲಿ ಹಲವರಿಗೆ 'ಯಾವ ತಪ್ಪುಗಳು?'
ಎಂದು ಕೇಳಬೇಕೆನ್ನಿಸಿತು.ಆದರೆ ಗಂಟಲು ಕಟ್ಟಿದಂತಾಗಿ ಮಾತು ಇಂಗಿತು.)
ಮಹಾ ಅರ್ಚಕರು ದೊಡ್ದ ಮನಸ್ಸು ಮಾಡಿ ಮನ್ನಿಸಿದ್ದಾರೆ.ಮಹಾದೇವ
ಪ್ ಟಾನ ಜತೆ ನಮ್ಮೂರಿನ ಬಡ ದೇವಮಂದಿರದಲ್ಲಿ ಮಹಾ ಅರ್ಚಕರು ಈ
ರಾತ್ರೆ ಮತ್ತು ನಾಳೆ ವಸತಿ ಮಾಡ್ತಾರೆ. ಮಂದಿರದಲ್ಲಿ ಈ ರಾತ್ರೆ ವಿಶೇಷ
ಪೂಜೆ.ನೀರಾನೆ ಪಟ್ಟಣದ ಭಕ್ತಾದಿಗಳಿಗೆಲ್ಲ ಅವರು ಹಿತವಚನ ಹೇಳ್ತಾರೆ.
ದೈವಭೀರುಗಳಾದ ಸಜ್ಜನರಾದ ನೀವು ಯಾರೂ ರಾಜಧಾನಿಯ ದಂಡಿಗೆ
ಹೆದರಬೇಕಾಗಿಲ್ಲ. ನಮ್ಮೂರಿಗೆ ಪರಿಚಿತರಾದ ಬಕಿಲರೇ ದಂಡನಾಯಕರಾಗಿ
ಬಂದಿದ್ದಾರೆ.
ಹೇಪಾಟ್ ಮತ್ತೊಮ್ಮೆ ತೋಳನ್ನೆತ್ತಿ, "ನೀವಿನ್ನು ಹೊರಡಬಹುದು"
ಎಂದ.
"ನೀವಿನ್ನು ಚೆದರಬಹುದು," ಎಂದು ಅಪೆಟ್ ಗಟ್ಟಿಯಾಗಿ ಪುನರು
ಚ್ಚರಿಸಿದ....
ಬಯಲು ನಿರ್ಜನವಾಗತೊಡಗಿತು. ಬಕಿಲ ಬಂದು ಅರಿಕೆ ಮಾಡಿದ :
“ಹಿರಿಯರ ಸಮಿತಿಯ ಸೆಮ, ಹೆಮೊನ್, ಥಾನಿಸ್ ಮತ್ತು ಹೆಮ್ಟ
ಇವರನ್ನು ಬಂಧಿಸಿದ್ದೇನೆ. ಹೆಮ್ ಟ ನಿವೃತ್ತ ಸೈನಿಕ. ಇಲ್ಲಿನವರಿಗೆ ಯುದ್ಧ
ವಿದ್ಯೆ ಕಲಿಸಿದವನು. ಅವನಿಗೆ ತಮ್ಮ ಅನುಮತಿ ಇಲ್ಲದೆಯೇ ಕೊಠಡಿಯಲ್ಲಿ
ಕೂಡ ಹಾಕಿ ಚಾವಟಯ ರುಚಿ ತೋರಿಸಿದ್ದೇನೆ. ಕ್ಷಮಿಸಬೇಕು. ಬೇರೆ