ಪುಟ:Mrutyunjaya.pdf/೬೭೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಮುಖ್ಯಸ್ಥರು : ಕುಶಲ ಕರ್ಮಿ ಸ್ನೋಫ್ರು ಮತ್ತು ರೈತ ಸೆಬೆಕ್ಖು, ಅವರನೂ ಲೆಕ್ಕಿಗ ಇಪ್ಯುವರ್ ನನ್ನೂ ಕಟ್ಟಿಹಾಕಿದ್ದೇನೆ.” ಹೇಪಾಟ್ ನುಟ್ ಮೋಸ್ ನನ್ನು ತೋರಿಸಿ ಅಂದ  ; "ಭೂಮಾಲಿಕರ ಸಲಹೆ ಪಡೆದು ಬಂಡಾಯಗಾರರು ಬೇರೆ ಯಾರನ್ನ ದರೂ ಇದ್ದರೆ ಅವರನ್ನು ಹಿಡಿ.”ಬಟಾ ಒಬ್ಬ ಸಿಕ್ಕಿಲ್ಲ." “ದೋಣಿಕಾರ ಹುಂ!ಹುಡುಕು ! ಆ ನಾಯಕನ ಗೋರಿ ?" ಅದರ ಶೋಧೆಯನ್ನೂ ನಡೆಸಿದ್ದೇನೆ.” “ ನಾವು ದೇವಮಂದಿರಕ್ಕೆ ಹೋಗ್ತೇವೆ. ಆಗ ಹೇಳಿದ್ದೆಲ್ಲ ನೆನಪಿನ ಲ್ಲಿದೆಯಾ ?” "ಇದೆ ” ಒಳ್ಳೇದು. ನೀನಿಲ್ಲೇ ಇರು... ಸಂಪತ್ತು ಗಿಂಪತ್ತು ಕಣ್ಣಿಗೆ ಬಿದ್ದಾಗ ಅದೆಲ್ಲಾ ಅರಮನೆ-ಗುರುಮನೆಗಳಿಗೆ ಸೇರಿದು ಅನ್ನೋದು ನೆನಪಿರಲಿ.” ಇದ್ದ ಒಂದು ಕಣ್ಣ ನ್ನೇ ತುಸು ಕಿರಿದುಗೊಳಿಸಿ ಬಕಿಲನೆಂದ: "ಅಪ್ಪಣೆ." ಡಂಗುರದವರು ಸಾರಿದ: “ ಮಹಾ ಅರ್ಚಕರು ರಾಜಧಾನಿಯಿಂದ ಬಿಜಯ ಮಾಡಿಸಿದ್ದಾರೆ. ಪಟಾ ದೇವರಿಗೆ ವಿಶೇ‍‍‍‌ಷ ಪೂಜೆ. ಇದು ರಾಜಾಜ್ಞೆಯೆಂದೇ ಪರಿಗಣಿಸಿ ಪ್ರತಿ ಯೊಬ್ಬರೂ ಕತ್ತಲಾದ ಮೇಲೆ ದೇವಮಂದಿರಕ್ಕೆ ಬರಬೇಕು. " ರಾಜಗೃಹದ ಸವಿಾಪದಲ್ಲಿದ್ದ ತಾಳೆಮರಗಳನ್ನು ಬಕಿಲ ದಿಟ್ಟಸಿದ. ಆ ರಾತ್ರೆ ಆ ಮರಗಳಲ್ಲಿ ಒಂದನ್ನೇರಿ ಆ ಮೋಸಗಾರ ತನ್ನದೊಂದು ಕಣ್ಣನ್ನು ಕಿತ್ತಿದ್ದ. ಇನ್ನು ಆ ಕುರುಡನೆಂದೂ ಮರ ಏರಲಾರ. ಈ ಸಿಂಹ ನೀರು ಕುಡಿಯಲೆಂದು ಉಳಿದ ಕಿರಿಯ ದೇವಸೇವಕನೊಬ್ಬ ಹೇಳಿದ್ದ: “ ಒಕ್ಕಣ್ಣು ಕುರುಡ ಸಿಂಹಕ್ಕೆ ಬಕಿಲ ಅಂತ ಹೆಸರಿಟ್ಟಿದ್ದಾರೆ ಖೈಮ್ ಹೊಟೆಪ್ ಹೊಡೆದದ್ದು' ಅಂತ ಕೆಳಗೆ ಬರೆದಿದೆ. ”