ಪುಟ:Mrutyunjaya.pdf/೬೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮ್ರುತ್ಯುಂಜಯ ಮಹಾ ಅರ್ಚಕನ ಹಾಗೆ ఆ ಶವ ದೊರೆತೇ ತೀರಬೇಕೆನ್ನುವ ಹಟ ಬಕಿಲ ನಿಗಿರಲಿಲ್ಲ, ಅರಮನೆಯು ವಧಸ್ಥಾನದಲ್ಲಿ ಈಟಿಎತ್ತಿ ಸನ್ನೆಮಾಡಿ ಆ ನಾಯಕನ ತಲೆ ಕಡಿಸಿದಾಗ ಅವನಿಗೆ ಪೂರ್ತಿ ತೃಪ್ತಿ ದೊರೆತಿತ್ತು. ಜೇನು ಈ ಕುಡಿದು ನಾಗಿದ್ದ ಬಕಿಲ, “ ಈ ಮಹಾ ಅರ್ಚಕರು ಒಮ್ಮೊಮ್ಮೆ ಅನಗತ್ಯವಾಗಿ ಅತಿ ರೇಕಕ್ಕೆ ಹೋಗ್ತಾರೆ, ” ಎಂದು ಗೊಣಗಿದ, “ ಊರನ್ನು ಸುಟ್ಟಾಗ ಶವದ ಕಥೆಯು ಮುಗೀತದೆ, " ಎಂದ. ರಾಜಧಾನಿಯ ದಂಡಿನ ನೂರರ ದಳಪತಿಗಳಿಗೆ ಆ ಮಾತು ಕೇಳಿಸಿತು. ಅವರಲ್ಲಿ ಒಬ್ಬನೆಂದ : “ದಂಡನಾಯಕರೇ, ಪ್ರತಿ ಮನೆಯನ್ನೂ ಶೋಧಿಸ್ಬೇಕು." ಇನ್ನೊಬ್ಬನೆಂದ - “ಒಳ ನಾಡಿನ ಸಂಚಾರ, ಮರುಪ್ರಯಾಣ-ಇನ್ನೂ ಹತ್ತು ದಿನ ಹಿಡಿಯೋದಿಲ್ವೆ? ಸೈನಿಕರಿಗೆ ಸ್ತ್ರೀ ಸುಖ ಬೇಕು. ಮರೀಬೇಡಿ. ಸೆರೆ ಹಿಡಿದ ಮೇಲೆ ಹೆಂಗಸರನ್ನು ಪ್ರತ್ಯೇಕವಾಗಿಟ್ಟ ಸಂಗಕ್ಕೆ ಅವಕಾಶ ಕೊಟ್ರೂ ಸಾಕು” “ಹೂಂ. ಹೂಂ. ಜೇನು ಊಳಿದಿರಬೇ'ಕು. ನೀವೂ ಸ್ವಲ್ವ ತಗೊಳ್ಳಿ.” ಸಿನ್ಯುಹೆ, ತನ್ನ ಹೆಸರು ಹೇಳಿಕೊಂಡು, “ನಾನು ಭೂಮಾಲಿಕ,” ಎನ್ನುತ್ತ ಒಳಬಂದ ಕಂದಾಯ ವಸೂಲಿಗೆಂದು ಬಂದಿದ್ದಾಗ ನಡೆದಿದ್ದ ಸಭೆಯಲ್ಲಿ ಟೆಹುಟ ಕುಳಿತಿದ್ದ ಭಂಗಿಯಲ್ಲೇ ಬಕಿಲ ಈಗ ಆಸೀನನಾಗಿದ್ದ ಬಂದವನ ಮುಖ ಅಪರಿಚಿತವಾಗಿ ತೋರಲಿಲ್ಲ, ಅವನೆಂದ: “ನುಟ್ ಮೋಸ್ ಮಹಾ ಅರ್ಚಕರ ಜತೆ ಮಂದಿರದಲ್ಲಿದ್ದಾರೆ. ನೀವೂ ಅಲ್ಲಿಗೆ ಹೋಗಿ." “ನಮ್ಮ ಹೊಲ-ರಾಸು...” “ನಾಳೆ ಎಲ್ಲ ನಾಳೆ, ಮಹಾ ಅರ್ಚಕರು ಅದರ ಏರ್ಪಾಟು ಮಾಡ್ತಾರೆ.” - ನುಟ್ಮೋಸ್ ಬಂದಿದ್ದಾನೆ ಎಂದು ತುಸು ಧೈರ್ಯ ಸಿನ್ಯುಹೆಗೆ. ಆತ ಮಂದಿರದೆಡೆಗೆ ಸಾಗಿದ.