ಪುಟ:Mrutyunjaya.pdf/೬೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ ಆಕ್ರಮಣಕಾರರ ಮುಂದಿನ ಕಾರ್ಯಕ್ರಮ ಏನೆಂಬುದು ಸಭಾಮಂದಿರದ ಮೂಲೆಯ ಕೊಠಡಿಗೆ ತಳ್ಳಲ್ಪಟ್ಟ ಹಿರಿಯರಿಗೆ,ಸ್ನೊಫ್ರು-ಸೆಬೆಕ್ಖು-ಇಪ್ಯು ವರ್ ರಿಗೆ ಸ್ವಲ್ಪ ಸ್ವಲ್ಪವಾಗಿ ತಿಳಿಯಿತು. ಈಸುವುದು ಒಟ್ಟಿಗೆ: ಮುಳುಗುವುದಿದ್ದರೂ ಒಟ್ಟಿಗೆ. ಸೆಮನಿಗೆ ಅನಿಸಿತು; ಇದು ಮುಳುಗುವ ಹೊತ್ತು, ಹೆಮ್ಟಿಯ ಮೈಯಿಂದ ರಕ್ತ ಚಿಮ್ಮುತ್ತಿತ್ತು. ಇಪ್ಯುವರ್ ಅವನ ತಲೆಯನ್ನು ತನ್ನ ತೊಡೆಯ ಮೇಲಿರಿಸಿ ಕೊಂಡ. ಹೆಮ್ಟಿಗೆ ಹೊಡೆಯುತ್ತ ಬಕಿಲ ಕಿರಿಚಿದ್ದ: ನಿಮ್ಮ ದಂಪತಿಯ ಎರಡ ಕಣ್ಣೂ ಕಿತ್ತಿದ್ದೇನೆ. ಸೆತ್ ನನ್ಮಗ !” ಸೆಬೆಕ್ಕುವಿನ ಮುಖ ಕಸ್ಸಿಟ್ಟೀತು.ಅವನೆಂದುಕೊಂಡ:ಖ್ನೆಮು ನನ್ನ ಅಳಿಯ ಎನ್ನುವುದು ಈ ಸೆತ್ ಗೆ ತಿಳಿಯದು, ತಿಳಿದಿದ್ದರೆ ನನ್ನನ್ನು ಹೀಗಳೆದು ಇನಷ್ಟು ಕುಣಿದಾಡುತ್ತಿದ, ಸ್ವಂತದ ಬಗೆಗೆ ಅವನು ಯೋಚಿಸಲಿಲ್ಲ, ಆದರೆ, ತಬಬುವಾಳ ನೆನಪು ಗರಿಗೆದರಿತು. ನೆಫಿಸ್ ಜತೆ ಇರ ಬಹುದು. ಖೈಮು ಮನೆಯಲ್ಲಿ ತನ್ನ ಮಗಳು ಒಬ್ಬಳೇ ಇರುವಳೇನೋ? ಅವರಿಗೇನಾದರೂ ಅಪಾಯ? ಸೆಬೆಕ್ಕು ಒಬ್ಬನೇ ಅಲ್ಲ, ಉಳಿದ ಯಾರೂ ಸ್ವಂತದ ಚಿಂತೆಯಿಂದ ತೊಳಲಲಿಲ್ಲ. ಸೆಮನ ಮಗ-ಆಗಲೇ ಮಧ್ಯ ವಯಸ್ಸು ದಾಟಿದವನು-ಒಳನಾಡಿನಲ್ಲಿ ರೈತನಾಗಿದ್ದ ಸೆಮನ ವೃದ್ಧೆ ಪತ್ನಿ ಅವನೊಂದಿಗಿದ್ದಳು. ಹೆಮೊನ್-ಥಾನಿಸರ ಪತ್ನಿಯರೂ ವಯಸಾದವರು. ಮಕ್ಕಳು ದೊಡ್ಡವರು. ಉಳಿದ ಜನತೆಗೆ ಒದಗಿದ ಕಷ್ಟ ಇವರಿಗೂ.ಸ್ನೊಫ್ರು ಹಂಬಲಿಸಿದ : ನೆಜಮುಟ್ ನೆಫಿಸ್ ಜತೆಗೇ ಇರಲಿ, ಅಹೂರಾ, ಅನ್ನುವಿನ ವಿಧವೆ, ನೆಫರುರಾ-ಅವರೂ ಅಲ್ಲಿದ್ದಾರೆ ಪುಟ್ಟ ರಾಮೆರಿ ಕೂಡಾ. ಅವರನ್ನೆಲ್ಲ ಬಟಾ ರಕ್ಷಿಸುವುದು ಸಾಧ್ಯವಾದರೆ-.ಇವರು ಊರಿಗೆ ಬೆಂಕಿ ಹಚ್ಚುತ್ತಾರೆ. ಹೊಲಗಳನ್ನು ಸುಡುತ್ತಾರೆ. ಅದಕ್ಕೆ ಮುಂಚೆ-ಅದಕ್ಕೆ ಮುಂಚೆ-.ಇಪ್ಯುವರ್ನ ತಾಯಿ,ಹೆಂಡತಿ,ತಂಗಿ, ಮಕ್ಕಳು-ಎಲ್ಲರೂ ಬಯಲಿನಲ್ಲಿ ಸಾವಿನ ಊಟದ ರೊಟ್ಟಿ ತಟ್ಟಲು ಕುಳಿತಿದ್ದರು. ಅವರನ್ನೆಲ್ಲ ಈಗ ಹಿಡಿದು ಕಟ್ಟಿರಬಹುದು. ದಂಡೆಯ ಮೇಲೆ ಮಾಡಿದರಂತಲ್ಲ? ಹಾಗೆ