ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ
ಹೆಮಟಿಯ ಎರಡು ಕೈಗಳೂ ನೀಳವಾಗಿ ಚಾಚಿಕೊಂಡವು. ಬಾಯಿ ತೆರೆದುಕೊಂಡಿತು. "ರಾ," ఎంದಂತಾಯಿತು ఆತ. ಸೆಬೆಕ್ಖು ಕೂಗಾಡಿದ: "ಸೆತ್ ! ಸೆತ್ ! ನಮ್ಮ ಹೆಮಟೀನ ಬಲಿ ತಗೊಂಡೆ !" “ಜೋಕೆ! ನಿನ್ನನ್ನೂ ಈಗ ಮುಗಿಸೇನು!” ಎಂದು ಅರಚಿ, ಬಕಿಲ ದೂರ ಸರಿದ. ಅಗಲಿದ ಬಂಧುವನ್ನು ನೆಲದ ಮೇಲೆ ಮಲಗಿಸಿದರು. ಹೆಪ್ಪುಗಟ್ಟಿದ ಎಲ್ಲರ ಶೋಕ ತುಸು ದ್ರವಿಸಿತು. ಆ ಹನಿಗಳು ಹೆಮಟಯ ಮೈಗೆ ಕಾಣೆಕೆ ಯಾದುವು. ಅನುಜ್ಞೆಗಳಿಗೆ ಸೈನಿಕರ ಓಡಾಟಗಳಿಗೆ ಬಹಳ ಹೊತ್ತು ಕಿವಿಗೊಟ್ಟ್ ಮೇಲೆ ಸ್ನೋಫ್ರು ಅಂದ : “ಮಂದಿರದಲ್ಲೀಗ ದಾಸದಾಸಿಯರನ್ನು ಮಾಡಲು ನಮ್ಮವರನ್ನು ಸೆರೆಹಿಡೀತಾರೆ. బಲೆಗಳ ఒళగిన ಹಕ್ಕಿಗಳಾಗ್ತಾರೆ ನಮ್ಮ ಜನ. ನಾವೂ ಅವರ ಜತೆ ಇರಬೇಕಾಗಿತ್ತು.....ಅವರೀಗ ಸಾಮಾನ್ಯ ಬಂದಿಗಳಾಗ್ತಾರೆ. ನಾವೊ ರಾజబందిಗಳೆನಿಸಿಕೊಳ್ತೇವೆ. ಹೀಗಾಗಬಾರದು.... ನಾಳೆಯಾದರೂ ಸೆరిಯೆ ಹೇಗಾದರೂ ಮಾಡಿ ನಾವು ಅವರನ್ನು ಸೇರಿಕೊಳ್ಬೇಕು. ಎಲ್ಲರಿಗೂ ಸಮ್ಮತವಾದ ವಿಚಾರಗಳೇ. ಯಾರೂ ಹೂಂ ಎನ್ನ ಬೇಕಾగిರಲಿಲ್ಲ.
ವಿಶೇಷ ಪೂಜೆ ಮಂದಿರದಲ್ಲಿ ನಡೆಯುತ್ತಿದ್ದ್ಂತೆ, ರಾజಧಾనిಯ ಸೈನಿಕರಿಂದ ಕೊಳ್ಳೆ ಹೊಡೆಯುವ ಅತ್ಯಾಚಾರ ನಡೆಸುವ ఆಟ ఆరంభವಾయుತು. ఆದರೆ ಕತ್ತಲು. ಪಂಜು ಹಿಡಿದುಕೊಂಡು ನೆಗೆದಾಡಿದರು. ಒಂದೆಡೆಯಿಂದ ಮನೆಗಳ ಶೋಧೆ ಮುಗಿದಂತೆ ಛಾವಣಿಗಳಿಗೆ ಕೊಳ್ಳಿ ಇಡತೊಡಗಿದರು. ಕೆಡವಿದ ಪ್ರಾಣಿಯನ್ನು ಬೇಯಿಸುತ್ತ ಆ ಬೆಂಕಿಯ ಸುತ್ತಲೂ ನಡೆದ ಕಿರಾತ ನತನವಾಯಿತು ಅದು.
-k × *: *