ಪುಟ:Mrutyunjaya.pdf/೬೮೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೧

ಬಟಾ ಮೆನ್ನನೊಡನೆ ಮೆನೆಪ ಟಾನ ಮನೆಗೆ ಬಂದಾಗ ಚೆನ್ನಾಗಿ ಕತ್ತ
ಲಾಗಿತ್ತು. ಹೋರಾಟದ, ಪರಾಭವದ, ಅನರ್ಥ ಪರಂಪರೆಯ ಸುದ್ದಿಗಳು
ಬಂದು ತಲಪಿದ್ದುವು. ಯಾರಾದರೂ ಬರಬಹುದೆಂಬ ಆಸೆಯಿಂದ ರಾಮೆ
ರಿಪ್ಟಾ ಬಾಗಿಲ ಸಂದಿಯಿಂದ ನೋಡುತ್ತ ನಿಂತಿದ್ದ. ಹೆಂಗಸರೆಲ್ಲ ತಾವಿನ್ನು
ಬಂದಿಗಳಾಗ್ತವೆ ಎಂದುಕೊಂಡಿದ್ದರು. ಆಕ್ರಮಣಕಾರರ ಬರವಿಗಾಗಿ
ಕಾದಿದ್ದರು.
ಆದರೆ ಬಂದುದು ಬಟಾ, ಮೆನ್ನಯ್ಯ....
ಬಟಾನೆಂದ : “ಹೊರಡಿ, ಬಟ್ಟೆಗಳನ್ನು ಹೊದ್ದುಕೊಳ್ಳಿ. ನನ್ನ
ಹಿಂದೆ ಬನ್ನಿ.
ನೆಫಿಸ್, ಅಹೂರಾ , ಅವಳ ಹೆಣ್ಣು ಮಗು, ರಾಮೆರಿ, ನೆಜಮುಟ್,
ನೆಫರುರಾ, ತಬಬುವಾ ಅವರ ಮಗಳು (ಕರೆದುಕೊಂಡು ಬಂದಿದ್ದಳು), ಅನ್ಪು
ವಿನ ವಿಧವೆ, ಬಟಾನ ಹೆಂಡತಿ, ಮಕ್ಕಳಲ್ಲಿ ಒಬ್ಬ ಹುಡುಗ ಒಬ್ಬಳು
ಹುಡುಗಿ (ಓ! ಓ!)....
ಮತ್ತೆ ಬಟಾ ಅಂದ :
“ಹೊರಡಿ ! ಹೊರಡಿ !”
ಹೊರಗಿನ ಕತ್ತಲಲ್ಲಿ ಸಂದಿ ಗೊಂದಿಗಳನ್ನು ಹಾದು, ಹೊಲಗಳನ್ನು
ದಾಟಿ ನದಿಯ ದಂಡೆಗೆ,
ಈ ತಂಡಕ್ಕೆ ಹಿಂದಿನಿಂದ ರಕ್ಷಕರಾಗಿ ಬಂದರು ಬಟಾನ ಅಂಬಿಗರು....
ದೂರದಲ್ಲಿದ್ದ ನೆಖೆನ್..
ಹಪುವಿನ ಮನೆ ಉರಿಯುತ್ತಿತ್ತು. ಅದರಾಚೆಗಿನ ಸಾಲಿಗೂ ಬೆಂಕಿ
ಬಿದ್ದಿತ್ತು. ಮೆನೆಪ್ಟಾನ ಗೋರಿಯ ಸುತ್ತಲೂ ಬೆಂಕಿಯ ನಾಲಿಗೆಗಳು.
ಉರಿಯ ಪ್ರಭೆಯಿಂದ ಆದಷ್ಟು ದೂರ ಕತ್ತಲೆಯಲ್ಲೇ ಇರುತ್ತ ದಕ್ಷಿಣಾಭಿ
ಮುಖವಾಗಿ ಈ ಜನ ನಡೆದರು, ಹೊಲಗಳನ್ನು ದಾಟಿದರು. ನದಿಯ ದಂಡೆ
ಯನ್ನು ಮುಟ್ಟಿದರು.
ಬಟಾ ಅಂದ :
"ಈ ಕತ್ತಲೇಲಿ ಬಚ್ಚಿಟ್ಟುಕೊಳ್ಳಿ. ಮೆನ್ನ ನಿಮ್ಮ ಜತೆ ಇರ್ತಾನೆ. ನಾನೂ
ಅಂಬಿಗರೂ ದೋಣಿಕಟ್ಟೆಗೆ ಹೋಗಿ ನನ್ನ ದೋಣಿ
ತತ್ತೇವೆ....”