ಪುಟ:Mrutyunjaya.pdf/೬೮೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೨

ಎತ್ತರದ ಆಕೃತಿ ಬಟಾನನ್ನು ಸವಿಾಪಿಸಿತು.
ನೆಖೆನ್ ಕೇಳಿದ :
"ಈ ಪ್ರಾಂತದಲ್ಲಿ ನಾನು ಮಾಡುವಂಥದು ಈಗ ಏನೂ ಉಳಿದಿಲ್ಲ
ನೀವು ಹೋಗುವಲ್ಲಿಗೆ ನಾನೂ ಬರಲಾ? ”
ಆತನಿಗೆ ಉತ್ತರವೀಯದೆ ನೆಫಿಸಳಿಗೆ ಬಟಾನೆಂದ :
"ನೆಫಿಸ್ ಅತ್ತಿಗೆ, ನೆಖೆನ್ ಮಾವನೂ ಮೆನ್ನಯ್ಯನ ಜತೆ ಇಲ್ಲಿ ಇರ್ತಾರೆ.
ನಾವು ಬಂದ್ವಿಡ್ತೇವೆ. ”
ದೋಣಿಕಟ್ಟೆಯ ದಿಕ್ಕಿಗೆ, ಉತ್ತರಕ್ಕೆ, ಬಟಾನೂ ಅಂಬಿಗರೂ ನಡೆದರು..
ಕಟ್ಟೆಯಲ್ಲಿ ಎರಡು ದೊಡ್ಡ ದೋಣಿಗಳಿದ್ದುದು ಮಸಕಾಗಿ ದೂರದಿಂದ
ಕಂಡಿತು. ಅವುಗಳ ಮಧ್ಯೆ ಇರಬೇಕು ಅವರ ದೋಣಿ...
ಬಟಾ ಮತ್ತು ಅಂಬಿಗರು ನೀರಿಗಿಳಿದರು. ನಡುನದಿಯವರೆಗೂ ಈಸಿ
ಹೋದರು. ಪ್ರವಾಹವನ್ನು ಅನುಸರಿಸಿದರು. ಕಟ್ಟೆ ಇದ್ದಲ್ಲಿಗೆ, ಎಡಕ್ಕೆ ಹೊರಳಿ
ದರು....
ಮಹಾ ಅರ್ಚಕರ ದೋಣಿ ಬರಿದಾಗಿತ್ತು. ಅದನ್ನು ಕಟ್ಟೆಯ ಕಂಬಕ್ಕೆ
ಕಟ್ಟಿದ್ದರು. ಮೇಲುಗಡೆ ದಂಡೆಗೆ ತಗಲಿದ್ದುದು ಹೇರುದೋಣಿ. ದೂರದಲ್ಲಿ
ಯಾರೋ ಮರದ ಕೆಳಗೆ ಕುಳಿತು ಮಾತನಾಡುತ್ತಿದ್ದರು, ಅರ್ಥವಾಗದ
ಧ್ವನಿಗಳು,
ಬಟಾ ತನ್ನ ದೋಣಿಯ ಮಗ್ಗುಲಿಗೆ ಬಂದು, ತೆವಳಿ ಮೇಲಕ್ಕೇರಿದ.
ಒಬ್ಬ ಅಂಬಿಗನನ್ನು ಕರೆದಕೊಂಡ. ಅವನು ಇನ್ನೊಬ್ಬನನ್ನು, ಬಟಾ ಮತ್ತಿ
ಬ್ಬರನ್ನು. ಇನ್ನು ಹುಟ್ಟು ಹಾಕಬೇಕು.
ಮರದ ಕೆಳಗಿಂದ ಗದರಿಕೆಯ ಧ್ವನಿ ಬಂತು :
"ಯಾರಪ್ಪಾ ಅದು ದೋಣಿ ಮುಟ್ತರೋದು ? ”
ಬಟಾನ ಉಸಿರಾಟ ನಿಂತಿತು. ಅಂಬಿಗರು ಕಂಗಾಲಾದರು.
ಅಷ್ಟರಲ್ಲಿ ಕಟ್ಟೆಯ ಸವಿಾಪದಿಂದಲೆ ಪ್ರಶ್ನೆಗೆ ಉತ್ತರ ಬಂತು.
“ನಾನು ಕಣಪ್ಲೋ, ಈ ಸುಡುಗಾಡು ದೋಣಿ ಒಂದು ಅಡ್ಡವಾಗಿದೆ.
ಆಚೆಗೆ ಸರಿಸ್ತಿದ್ದೇನೆ. ”
ಬಟಾಗೆ ಆಶ್ಚರ್ಯ ! ಯಾರಿದು ? ಏನಿದು ?