ಪುಟ:Mrutyunjaya.pdf/೬೮೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೩

ಕರಿಯ ಆಕೃತಿ ಹತ್ತಿರ ಬಂತು. ಅಂಬಿಗ ಗೂಟದಿಂದ ಕಟ್ಟು ಬಿಚ್ಚು
ತಿದ್ದುದನ್ನು ಒಂದು ಕೈ ತಡೆಯಿತು.
ಅಡ್ಡಿ ಮಾಡುತ್ತಿದ್ದಾನೆ. ಬಟಾ ಅತ್ತ ಸರಿದ. ಅವನ ಗಂಟಲು
ಹಿಚುಕಲೆ ?
ಕೇಳಿಯೂ ಕೇಳಿಸದ ಪಿಸುದನಿ ನುಡಿಯಿತು:
“ನಿಮ್ಮ ದಳಪತೀನ ಇಲ್ಲಿ ಬಯಲಲ್ಲಿ ಕೆಡವಿದ್ದಾರೆ. ಜೀವ ಇದೆ.
ತಗೊಂಡು ಹೋಗಿ.”
ಬಟಾಗೆ ದಿಗ್ಭ್ರಮೆ; ಹರ್ಷಾ ತಿರೇಕ. ಮಾತನಾಡುವಂತಿಲ್ಲ. ಆತ ತೋಳು
ಗಳನ್ನು ಚಾಚಿದ. ಕರಿಯ ಆಕೃತಿ ಪ್ರಯಾಸಪಟ್ಟು ಏನನ್ನೋ ಹೊತ್ತು ತಂದಿತು.
ಬಟಾನೂ ಅಂಬಿಗರೂ ಅದನ್ನು ಪಡೆದರು. ಬಲೆಯೊಳಗಿದ್ದು ದು ಮಿಸುಕಿತು.
ಆ ಆಕೃತಿಯೇ ಗೂಟಕ್ಕೆ ಕಟ್ಟದ್ದ ಹಗ್ಗವನ್ನು ಬಿಚ್ಚಿ ತು. ಪುನಃ
ಮೊದಲಿನಂತೆಯೇ ಪಿಸುನುಡಿಯಿತು :
"ಅಮನ್ ದೇವರು ಕಾಪಾಡ್ತಾನೆ. ಹೋಗಿ.... ನಾನು ಶೀಬಾಳ
ಗಂಡ....”
ಅವನನ್ನು ತಬ್ಬಿಕೊಳ್ಳಬೇಕು, ಅಳಬೇಕು ಎನಿಸಿತು ಬಟಾಗೆ, ಅಂಬಿ
ಗರು ಕನಿಷ್ಠ ಸದ್ದಾಗುವಂತೆ ಹುಟ್ಟು ಹಾಕಿದರು. ದೋಣಿ ನಡುನೀರನ್ನು
ತಲಪಿ ದಕ್ಷಿಣಕ್ಕೆ ಹೊರಳಿತು.
ನಕ್ಷತ್ರಗಳ ಮಬ್ಬು ಬೆಳಕು.
ಅವರು ಕಾಯುತ್ತ ಕುಳಿತಿದ್ದರು. ದೋಣಿ ದಡ ಮುಟ್ಟಿದೊಡನೆ
ನೆಫಿಸ್‌ಳನ್ನು ಎಚ್ಚರಿಕೆಯಿಂದ ಅದರೊಳಕ್ಕೆ ಇಳಿಸಿದರು. ಉಳಿದವರೂ
ಇಳಿದರು, ಹಾಯಿಯನ್ನು ಏರಿಸಿದ್ದಾಯಿತು. ನಾಯಕನ ಕಳೇಬರವನ್ನು
ಮಲಗಿಸಿದ್ದ ಜಾಗದಲ್ಲಿದ್ದ ದಳಪತಿ, ಬಟಾ ದೋಣಿಯ ಸಾಮಾನುಗಳ
ಮೂಲೆಯಲ್ಲಿದ್ದ ಬಾಕು ಬಳಸಿ ಬಲೆಯನ್ನು ಕತ್ತರಿಸಿದ. ಖೈಮು ಕೈಕಾಲು
ಗಳನ್ನು ಚಾಚುವುದು ಸಾಧ್ಯವಾಯಿತು. ಪಿಸುದನಿಗಳು. ಕನಸಿನ ಮಾತು
ಗಳು, ಮೂರ್ಛ ತಿಳಿದು ಎದ್ದವನಂತೆ ಖೈ ಮು, “ನೀರು, ನೀರು” ಎಂದ.
ಅಂಗೈಯನ್ನು ಬೊಗಸೆಮಾಡಿ ನದಿಯಿಂದ ನೀರನ್ನೆತ್ತಿ ಬಟಾ ಖ್ನೆಮ್
ಹೊಟೆಪ್‌ಗೆ ಕುಡಿಸಿದ.