ಪುಟ:Mrutyunjaya.pdf/೬೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೭೪

ಮೃತ್ಯುಂಜಯ

ಧ್ವನಿಯನ್ನು ಗುರುತಿಸಿದ ಖ್ನೆಮ್ಹೊಟಿಪನ ಹೆಂಡತಿ "ಅಮ್ಮ,
ಅಮ್ಮ” ಎಂದಳು. ತಬಬುವಾಗೂ “ನೀರು” ಎಂದವನು ತನ್ನ ಅಳಿಯನಲ್ಲವೆ
ಎನಿಸಿತ್ತು.
ಬಟಾನೆಂದ :
“ನಮ್ಮ ಖ್ನೆಮು. ನಿದ್ರಿಸಲಿ. ಅವನಿಗೆ ವಿಶ್ರಾಂತಿ ಬೇಕು. ತಂಗಿ,
ನಿನ್ನ ಗಂಡನ ತಲೇನ ತೊಡೆಯ ಮೇಲಿಟ್ಟುಕೋ.”

****

ಊರನ್ನು ಬಿಟ್ಟು ದೂರ ಹೋಗುತ್ತಿದ್ದವರು ಹೊರಳಿನೋಡಿದರು.
ಪಟ್ಟಣದಿಂದ ಅಗ್ನಿಜ್ವಾಲೆಗಳು ಆಕಾಶಕ್ಕೆ ಏರುತ್ತಿದ್ದಂತೆ ಕಂಡಿತು. ಸುತ್ತಲಿನ
ಹೊಲಗಳೂ ಉರಿಯುತ್ತಿದ್ದುವು. ಉರಿದು ಕರಕಾಗುತ್ತಿದ್ದುವು. ತೆನೆಭಾರ
ದಿಂದ ಬಾಗಿದ್ದ ಸಸಿಗಳು,
ತಬಬುವಾಳ ಮಗಳು ಗಂಡ ದೊರೆತನೆಂದು ಹರ್ಷಿತಳಾದರೂ, ಉರಿಯು
ತಿದ್ದ ಊರನ್ನು ಕಂಡು ಅತ್ತಳು.
“ನಮ್ಮ ಯಾವ ದುಃಖವೂ ಅತ್ತು ಮುಗಿಯುವಂಥದೇ ಅಲ್ಲ,” ಎಂದ
ಬಟಾ.
ಹಾಯಿ ಕಂಬಕ್ಕೊರಗಿ ನಿಂತು ಮೆನ್ನ ಹೇಳಿದ :
"ಬಾನನ್ನು ಮೋಡ ಆವರಿಸಿದೆ. ನಕ್ಷತ್ರಗಳು ಕೆಳಕ್ಕೆ ಸುರಿಯುತ್ತಿವೆ.
ಬಾಣಗಳನ್ನು ಎಸೆಯುತ್ತಿದ್ದಾರೆ. ಭೂಮಿದೇವತೆಯ ಮೂಳೆಗಳು ಕಂಪಿಸು
ತಿವೆ. ಬಾನಿನ ಬಾಗಿಲುಗಳನ್ನು ಮುಚ್ಚಿರೋ ಮುಚ್ಚಿರಿ !”
ಧ್ವನಿಯಲ್ಲಿ ಇಂಗದ ಅಳಲು, ಕೊನೆಗಾಣದ ಯಾತನೆ.
ನೆಖೆನ್ ಉಗುಳುನುಂಗಿದ.

೧೭

ಬಳಲಿಕೆಯನ್ನು ಅರಿಯದ ಅಂಬಿಗರು, ಬಟಾನ ಸಹಾಯಕರು, ತುಂಬಿ
ಕೊಂಡ ಹಾಯಿ. ವೇಗವರ್ಧನಕ್ಕಾಗಿ ದುಡಿದ ಹುಟ್ಟುಗಳು.