ಪುಟ:Mrutyunjaya.pdf/೬೮೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೫

ಬಟಾ ಹಾಯಿಕಂಬವನ್ನು ಸವಿಾಪಿಸಿ, ಮೆನ್ನನ ಹತ್ತಿರ ನಿಂತ, ಕೈ
ಯಿಂದ ತಮ್ಮ ದೋಣಿಯನ್ನು ಹೊರತರಲು, ಶೀಬಾಳ ಗಂಡ ನೆರವಾದು
ದನ್ನು ಮೆನ್ನನಿಗೆ ತಿಳಿಸಿದ.
ಇಳಿದನಿಯ ಮಾತುಕತೆ.
"ತಾವು ನೋಡೋಕೂ ಮುಂಚೆಯೇ ಶೀಬಾಳಿಗೆ ನಾಯಕರು 'ಮಹಾ
ತಾಯಿ' ಅಂತ ಹೆಸರಿಟ್ಟಿದ್ರು,” ಎಂದ ಮೆನ್ನ.
“ಖ್ನೆಮುವನ್ನು ಎತ್ತಿಕೊಟ್ಟದ್ದೂ ಶೀಬಾಳ ಗಂಡನೇ.”
“ಹೋರಸ್‌ನ ಬಲವಿರಬೇಕು. ಅವನ ತೋಳುಗಳಲ್ಲಿ.”
"ಈ ಸಲ ನಮ್ಮ ಪಯಣದ ಸುಳಿವು ಯಾರಿಗೂ ಸಿಗೋದಿಲ್ಲ. ಬೆಂಕಿ
ಯಲ್ಲಿ ನಾವೆಲ್ಲ ಸುಟ್ಟು ಹೋದೆವೂಂತ ಅವರು ತಿಳಕೋತಾರೆ.”
“ಶರೀರ ನಷ್ಟವಾದರೂ ಮತ್ತೆ ರೆಕ್ಕೆ ಬಡಿಯುವ ಬೆನ್ನು ಪಕ್ಷಿಗಳು
ನಾವು....”
ಮೌನ .ನಿಟ್ಟುಸಿರು. ಪುನಃ__
“ಖ್ನೆಮು ಕಣ್ಣಿನ ವಿಷಯ....”
“ಬೆಳಿಗ್ಗೆ ಎಲ್ಲಾದರೂ ನಿಲ್ಲಿಸ್ತೇವಲ್ಲ.... ಆಗ ಕಣ್ಣುಗಳಿಗೆ ಔಷಧಿ
ಹಾಕೋಣ. ಗಾಯ ಬೇಗನೆ ಗುಣವಾಗ್ತದೆ.”
"ದ್ರಷ್ಟಿ"
"ತಿವಿತದ ಆಳ ತೀಕ್ಷ್ಮತೆ ಎರಡೂ ನೋಡಿದ್ದೇಲೆ ಹೇಳೇನೆ.”
ಮತ್ತೆ ಸುಮ್ಮನಿದ್ದ ಬಳಿಕ....
"ಅಣ್ಣನ ಗೋರಿ ಅವರು ಕಂಡುಹಿಡೀಲಾರರು.”
"ಅಗ್ನಿಗೆ ಆಹುತಿಯಾದ ಊರಿನಲ್ಲಿರೋ ಗೋರಿ, ಹಾದು, ಅವರ
ಕಣ್ಣಿಗೆ ಅದು ಬೀಳಲಾರದು.”
"ಅಯ್ಯ ! ಶನಲೇಪನದ ವಿಷಯ ತಿಳಿದಾಗ ಮಹಾ ಅರ್ಚಕನಿಗೋ
ಆ ಇನೇನಿಗೋ ನಿಮ್ಮ ಮೇಲೆ ಸಂಶಯ ಬರಬಹುದು.”
“ಹೀಗಾಯಿತಲ್ಲಾ ಅಂತ ಇನ್ನು ತಮಗೆ ತಾವೇ ಬರೆ ಎಳೆದುಕೊಳ್ಳಿ !
....ಅಂದಹಾಗೆ ಬಟಾ ಅಣ್ಣ. ಇನ್ನು ಈ ಅಯ್ಯತನ ಸಾಕು. ನನ್ನನ್ನು ಬರೇ
ಮೆನ್ನ ಅಂತ ಕರಿ".