ಪುಟ:Mrutyunjaya.pdf/೬೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೭೬

ಮೃತ್ಯುಂಜಯ

“ನಾನು ಒಬ್ಬ ಹಾಗೆ ಕರೆದು ಏನು ಪ್ರಯೋಜನ? ಹೆಂಗಸರು
ನಿಮ್ಮನ್ನು ಮೆನ್ನ ಅಂತ ಕರೆದಾರಾ ? ನೀವು ಮಂತ್ರ ಹೇಳೊದು ಬಿಟ್ಟರೂ
ನಮಗೆಲ್ಲ ನೀವು ಮೆನ್ನಯ್ಯನೇ ಯಾವಾಗಲೂ ಮೆನ್ನಯ್ಯನೇ.”
ಮಂಪರು __ನಿದ್ದೆಗಳ ನಡುವೆ ಪ್ರೈಮ್ ಹೊಟೆಪನ ನರಳಾಟ ಕೇಳಿಸು
ತಿತ್ತು. ಜತೆಗೆ ಅವನ ಪತ್ನಿಯ ಸಂತೈಸುವ ಧ್ವನಿ......
ಅಹೂರಾಳ ಮಾತು ಕೇಳಿಸುತ್ತಿತ್ತು :
“ನೆಫಿಸ್ ಅಕ್ಕ, ಮುಜುಗರ ಆಗಿದ್ಯಾ? ಬೇಕಾದರೆ ಆ ಕಡೆ
ತಿರುಗಿ ಮಲಕ್ಕೋ. ಹೀಗೆ ಒರಗಿಕೋ.”
ನೆಫಿಸ್ ಕನಸು-ನೆನಪುಗಳ ಮಾಲೆ ಪೋಣಿಸುತ್ತಿದ್ದಳು ಅವ್ಯಾಹತವಾಗಿ,
ತಾಯಿಯ ಸಾವು, ಚಿಕ್ಕಮ್ಮನ ಹಳ್ಳಿಯಲ್ಲಿ ಕಂದಾಯ ವಸೂಲಿ.
“ಎಲ್ಲಿ ನಿನ್ನನ್ನ?” “ನನ್ನಮ್ಮ ಸತ್ತೋದ. ಅಬ್ಬುವಿನಲ್ಲಿ ಕರಡಿ ಜತೆ
ಕುಣಿದ ಆ ಹುಡುಗಿ.... ಸಹ ಯಾತ್ರಿಕರಿಗೆ ತಾನು ತೆರೆದು ತೋರಿಸಿದ ಲಿಪಿ
ಸುರುಳಿ. ಒಂದು ಬಾತುಕೋಳಿ, ಒಂದು ರೊಟ್ಟಿ, ಒಂದು ಚೀಲ ಕೊಟ್ಟೆ.'?
ತಮ್ಮ ಬದುಕಿನಲ್ಲಿ ಸಿರಿವಂತಿಕೆಯ ಖರಿದಿ ಎಂದರೆ ಅದೊಂದೇ. ತಮ್ಮ
ಹೊಲ ಉಳಲು ತಮ್ಮದೇ ಆದ ಒಂದು ಜತೆ ಹೋರಿ, ಯಾವುದರಲ್ಲೂ
ಅವಸರವಿಲ್ಲ ಮೆನೆಪ ಟಾಗೆ.... ನಾಳೆ-ನಾಳೆ.... ಐಸಿಸ್ ದೇವತೆಯ ನಕ್ಷತ್ರ
ವಾದ ಸೊಥಿಸ್ ಉದಿಸಿದ ಆ ರಾತ್ರೆ.... ಸಾರವತ್ತಾದ ತನ್ನ ನೆಲ. ಅವನು
ಬಿತ್ತಿದ ಬೀಜ, ಮಹಾಪೂರ.... ಮುಂದೆ ರಾಜಧಾನಿಗೆ ಹೋದ. ಎಲ್ಲರೂ
ಅಂದರು : ಕುಯಿಲಿನ ಹೊತ್ತಿಗೆ ನಾಯಕರು ಬಂದ್ವಿಡ್ತಾರೆ.' 'ಹೆರಿಗೆಯ
ವೇಳೆಗೆ ಬರಬೇಕು. ಆದರೆ ನೀನು ಬರಲಿಲ್ಲ, ಬರಲೇ ಇಲ್ಲ. ಪ್‌ಟಾ....
ಪ್‌ಟಾ .... ಊ ಊ ಊ.'
ನೆಫಿಸ್ ನರಳಿದಳೆಂದು ಅಹೂರಾಗೆ ಆತಂಕ. ಅವಳ ತೋಳನ್ನು
ಸವರುತ್ತ ಮೆಲ್ಲನೆ ಕರೆದಳು :
“ಅಕ್ಕಾ, ಅಕ್ಕಾ....”
ಉತ್ತರವಿಲ್ಲ. ನಿದ್ದೆಯಲ್ಲಿ ನರಳುತ್ತಿದ್ದಾಳೆಂದು ಸುಮ್ಮನಾದಳು.
ಅಹೂರಾಗೂ ಯೋಚನೆ ಇತ್ತು. ಗಂಡನದು. ಖ್ನೆಮ್ ಹೊಟೆಪ್
ಮತ್ತು ಔಟ ದಳದೊಡನೆ ಹೊರಟಾಗ ಅಬ್ಬು, ಯಾತ್ರಿಕರೂ ಕೋಲನ್ನೋ