ಪುಟ:Mrutyunjaya.pdf/೬೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೬೭೯

ಬೇಕು, ನ್ಯಾಯದ ಪಕ್ಷ ವಹಿಸಬೇಕು. ಹೆದರಬಾರದು ಯಾರಿಗೂ.
ಅಪ್ಪ ಅಂದಿದ್ದ : 'ಅಮ್ಮನ ಹತ್ತಿರ ಇರು. ತನಗೊಬ್ಬ ತಮ್ಮ ಬರುತ್ತಾನೆ;
ಇಲ್ಲವೆ, ತಂಗಿ ಬರುತ್ತಾಳೆ. ಬಸಿರು ದೊಡ್ಡದಾಗುವುದರ ಅರ್ಥ ಇದು. ಆ
ತಮ್ಮನೋ ತಂಗಿಯೋ ನಮ್ಮ ತಂದೆಯನ್ನು ನೋಡಿಯೇ ಇರುವುದಿಲ್ಲ.
ಅಪ್ಪನ
ವಿಷಯ ಅಣ್ಣನಾದ ತಾನು ಹೇಳಿಕೊಡಬೇಕು.

ದೋಣಿಯ ಹಿಂಭಾಗದ ಮೂಲೆಯಲ್ಲಿ, ಅಂಬಿಗರ ಹಿಂದೆ ದೋಣಿಯ
ಒಳಮೈಗೆ ಒರಗಿ, ನೆಖೆ ಕುಳಿತಿದ್ದ, ಆದುದು ಏನೆಂಬುದನ್ನು ಎವೆ
ಮುಚ್ಚಿ, ನಿಧಾನವಾಗಿ ಅರ್ಥ ಮಾಡಿಕೊಳ್ಳಲು ಅವನು ಯತ್ನಿಸಿದ. ಎವೆಗಳು
ಮಾತ್ರ ಒಂದಕ್ಕೊಂದು ಅಂಟಲು ನಿರಾಕರಿಸಿದುವು. ಬದುಕಿನ ಪಯಣದ
ಕೊನೆಗೆ ತಾನು ಬಂದಂತಾಯಿತೆ ? ಅಥವಾ, ಎಲ್ಲವೂ ಮುಗಿದಂತಾಯಿತು
ಎನಿಸುತ್ತಿರುವಾಗ, ಹೊಸ ಬದುಕು ಆರಂಭವಾಗುತ್ತಿದೆಯೆ ? ಇವರು ಎಲ್ಲಿಗೆ
ಹೋಗುತ್ತಿದ್ದಾರೆ ? ಒಂದು ಮುಷ್ಟಿಯಿಂದ ಪಾರಾಗಿ ಇನ್ನೊಂದಕ್ಕೆ ?
ಹತ್ತು ದೇಶ ಸುತ್ತಿದ್ದೇನೆ. ಸುಲಿಯುವ ವಿಧಾನ ಎಲ್ಲ ಕಡೆಗಳಲ್ಲೂ ಒಂದೇ.
ಸುಲಿಗೆ ಇಲ್ಲದ ಸಮಾಜ ಇಲ್ಲಿತ್ತು. ಅದನ್ನು ಧ್ವಂಸ ಮಾಡಿದರು. ಮತ್ತೆ
ಇನ್ನೊಂದನ್ನು ಕಟ್ಟಬೇಕು. ಯಾರು ಕಟ್ಟುವವರು ? ತನಗೆ ತಿಳಿಯದು.
ತನಗೆ ತಿಳಿದಿರುವುದು ಒಂದೇ ವಿದ್ಯೆ, ಕಲ್ಲಿನ ಮೂರ್ತಿಗಳನ್ನು ಕೊರೆಯುವುದು.
ಹಪುವಿನ ಒಬ್ಬ ಮಗ ಶಿಲ್ಪಿಯಾಗಲು ಬಯಸಿದ್ದ, ಆ ಹುಡುಗ ಏನಾದನೋ ?
ಅನ್ಬುವೀರನ ಚಿತ್ರವೀಗ ಬಟ್ಟೆಯ ಮೇಲೆ ತಾನು ರಚಿಸಿದ ಆಧಾರ ಕೃತಿ
ಹಪು ಮನೆಯಲ್ಲಿ ಸುಟ್ಟು ಹೋದರೂ ಮನಸ್ಸಿನಲ್ಲಿ ಅಚೊತ್ತಿದೆ. ಹಾಗೆಯೇ
ಜನನಾಯಕ ಮೆನೆಪ್‌ಟಾನೂ ತನಗೆ ಈಗ ಪರಿಚಿತ, ಅದು ಮರೆಯಲಾಗದ
ಭವ್ಯ ಆಕೃತಿ, ಲೇಪಿತ ಶವದ ರೂಪವನ್ನೇ ಕೊರೆಯಬಹುದು. ಅಥವಾ
ನಿಜರೂಪವನ್ನೇ ಕಲ್ಪಿಸಿಕೊಂಡು ಸೃಷ್ಟಿಬಹುದು. ಹೀಗೆಯೇ ಮುಂದೆಹೋದರೆ
ಈ ದೋಣಿ ಸೈನೆಯನ್ನು ಮುಟ್ಟುತ್ತದೆ. ಅಲ್ಲಿ ಶಿಲೆಗಳು ಹೇರಳವಾಗಿವೆ.
ಉತ್ಕೃಷ್ಟವಾದುದನ್ನೇ ಆರಿಸಬಹುದು....ಆದರೆ ಈ ಜನ-ನಾನು ಕೂಡಾ
ಐಗುಪ್ತದಾಚೆಗೆ ಹೋಗಬೇಕು. ಬೇರೆ ದೇಶಕ್ಕೆ, ಆ ದೇಶ ಎಂಥದೇ ಇರಲಿ
ತಾನು ಈ ಜನರ ಜತೆಯಲ್ಲೇ ಇರಬೇಕು....