ಪುಟ:Mrutyunjaya.pdf/೬೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮೦

ಮೃತ್ಯಂಜಯ

ಹಾಯಿಕಂಬದ ಬಳಿ ಮತ್ತೆ ಮಾತುಕತೆ,
ಮೆನ್ನ : “ ಬೆಳಗಾಗುವ ಹೊತ್ತಿಗೆ ನಾವು ಜಿಂಕೆ ಪ್ರಾಂತದ ದಕ್ಷಿಣ
ಭಾಗದಲ್ಲಿದ್ದೇವೆ. ಸಂಜೆಯೊಳಗೆ ಅಬ್ಬು ತಲವೆ, ”
ಮೆನ್ನ : ( ಅಬ್ಬುವಿನ ಒಸೈರಿಸನ ಪವಿತ್ರ ಉತ್ಸವದಿಂದಲೇ ನ್ಯಾಯದ
ಬೆಳಕನ್ನು ಹಿಡಿದು ತಂದಿರಿ, ಅಲ್ಲವೆ ? "
ಬಟಾ : “ ಹೃ, ಇನ್ನೊಂದು ವಾರದೊಳಗೆ ಮತ್ತೆ ಅಚ್ಚು ಯಾತ್ರೆ.
ಆ ವೇಳೆಗೆ ಮಹಾ ಅರ್ಚಕ ಮೆಂಫಿಸಿಗೆ ಹೊರಟಾನು. ಈ ಸಲ ಅನ
ನಾಗಲೀ ಪೆರೋನಾಗಲೀ ಅಬ್ಬುಗೆ ಬರಲಾರರು. ಸೆಡ್ ಉತ್ಸವವಾಗಿದೆ ;
ಐಗುಪ್ತದಲ್ಲಿ ಶಾಂತಿ ನೆಲೆಸಿದೆ. ಇನ್ನು ಒಂದೆರಡು ವರ್ಷ ಒಸೈರಿಸನನ್ನು
ಅವರು ಮರೆತರೂ ಮರೀಬಹುದು. ಹೌದಲ್ಲವಾ ಎನ್ನ ? ”
ಮೆನ್ನ : “ ನಿಜ..... ಅಬ್ಬು ದಾಟಿದ ಮೇಲೆ ದೆಂದರೆ, ಅಲ್ಲಿ
ಹಾಥೋರ್
ದೇವತೆಯ ದೇಗುಲ ಇದೆ. ಆಮೇಲೆ ನೆಸಿ, ಅಮನ್ ದೇವಸ್ಥಾನ. ಹೀಗೆ
ರಾತ್ರೆ, ಹಗಲು ; ಮತ್ತೊಂದು ರಾತ್ರೆ ಕಳೆದ ಮೇಲೆ ಎದ್ದು ಹೋರಸ್
ಮಂದಿರ, ಆ ಅಪರಾಹ್ನ ಸೈನೆ. ಫಿಲೆದ್ವೀಪ ಬರೋದರೊಳಗೆ ನನ್ನ
ಪಯಣ ಮುಕ್ತಾಯವಾಗ್ತದೆ ಅಲ್ಲವೆ ? ”
ಬಟಾ : “ನಾನೂ ಹಾಗೆಯೇ ಅಂಡ್ಕೊಂಡಿದ್ದೇನೆ ಮೆನ್ನಯ್ಯ, ಕತ್ರ
ಲಾಗೋದರೊಳಗೆ ಎಡಕ್ಕೆ ಉಪನದಿಯೊಳಕ್ಕೆ ಹೋಗಿಬಿಡೋಣ. ನಿಧಾನ
ವಾಗಿ ಹೋದರಾಯ್ತ, ಬೆಳಕು ಹರಿಯುವಾಗ ಐಗುಪ್ತದಾಚ ನುಬಿಯು
ದಲ್ಲಿದ್ದೇವೆ. ”
ಮೆನ್ನ : “ ಈ. ಮುಂದೆ ಕತ್ತೆಗಳು ಒಂದೆರಡಾದರೂ ಬೇಕು,
ಒಳನಾಡಿನ ಪ್ರವಾಸಕ್ಕೆ."
ಬಟಾ : “ ಪರದೇಶಿಗಳಾಗಿ, ಯಾವುದಾದರೂ ಹಳ್ಳಿಯಲ್ಲಿ ನೆಲೆ
ಸೋಣ. ನಾಡಿನ ಕರೆ ಪುನಃ ಬರುವ ತನಕ. ”
ಮೆನ್ನ : “ ಆಶಾವಾದ ಆರೋಗ್ಯಕ್ಕೆ ಒಳ್ಳೇದು. ”
ಬಟಾ : “ಮೆನ್ನಯ್ಯ, ನೀವು ನಮ್ಮನ್ನು ಬಿಟ್ಟು ಹೋಗೋದಿಲ್ಲ,
ಅಲ್ಲವಾ ?"
ಮೆನ್ನ : “ನನ್ನ ಕನಸು ಮುರೀತು. ಆದರೆ ಅದರ ನೆನಪು ನನಗಿಷ್ಟ.