ಪುಟ:Mrutyunjaya.pdf/೬೯೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೮೧

ನಿಮ್ಮೊಂದಿಗಿದ್ದು ಆಗಾಗ್ಗೆ ಅದನ್ನು ನೆನೀತೇನೆ. ”
ಬಟಾ . “ ಚಿಕ್ಕವರಿಗೆ ಪಾಠ ಹೇಳಿ ಬೆಳೆಸಬೇಕಾದವರು ನೀವೇ....”
ಮೆನ್ನ : “ ಲಿಪಿಕಾರನಾಗಿ ಇದ್ದೇನೆ ಬಟಾ, ಮಂತ್ರ ತಂತ್ರಗಳ
ಕಳ್ಳ ಅಯ್ಯನಲ್ಲ. ”
ಅವರು ಮಾತನಾಡುತ್ತಿದ್ದಂತೆ ನೆಖೆನ್ ಎದ್ದು ಅಲ್ಲಿಗೆ ನಡೆದು ಬಂದ.
ನೆಖೆನ್ : “ ಕರೆಯದೆ ಬಂದೆ. ಮುದುಕನನ್ನು ಕ್ಷಮಿಸಿ, ”
ಮೆನ್ನ : “ ಮಹಾಶಿಲ್ಪಿ, ನಿಮ್ಮ ನೀರಾನೆ ಮೂರ್ತಿನ ಬೆಳಿಗ್ಗೆ
ನೀರಾನೆ ಪ್ರಾಂತದ ದೋಣಿಕಟ್ಟೇಲಿ ಕಂಡೆ. ಅದ್ಭುತ ಶಿಲ್ಪ, ನಿಮ್ಮ
ಕೃತೀನ ಒಡೆಯೋದಕ್ಕೆ ಹೇಪಾಟ್ ಆಜ್ಞೆ ಕೊಟ್ಟನಂತೆ. ಪೀಠದಿಂದ ಸಡಿ
ಲಿದ ನೀರಾನೆ ಇಳಿಜಾರ: ಮಣ್ಣಿಗೆ ಬಿದ್ದು ಉರುಳಿ ನದಿಯಲ್ಲಿ ಮುಳು
ಗಿತಂತೆ. ”
ನೆಖೆನ್ : " ಹೂಂ ! ಅಲ್ಲಿಂದ ತಪ್ಪಿಸಿಕೊಂಡು ಬಂದ ಯೋಧರು
ಹೇಳಿದ್ರು ನನಗೂ ಕೇಳಿಸ್ತು. ”
ಮೆನ್ನ :"ಇಲ್ಲಿ ಕೇಳಿ, ಮಹಾಶಿಲ್ಪಿ, ಆ ನೀರಾನೆ ನದಿಯ ಆಳ
ದಿಂದ ಮತ್ತೆ ಎದ್ದು ಬರದೆ.... "
ನೆಖೆನ್ : “ ನನಗೂ ಆ ದಿವಸದವರೆಗೆ ಬದುಕೋ ಆಸೆ ಅಯ್ಯ.”
ಮೆನ್ನ : “ ನೀವು ಪಯೋವೃದ್ದರು. ನೀವಾದರೂ ನನ್ನನು ಬರೀ
ಮೆನ್ನ ಅಂತ ಕರೀರಿ, ”
ನೆಖೆನ್ : “ ಆಗಲಿ ಮೆನ್ನ .... ಬಟಾ, ಓ ನನ್ನ ಅಳಿಯ ಬಟಾ,
ಅಲ್ಲಿಂದ ಹೊರಡ್ತಿದ್ದಾಗ ' ನಾನೂ ಬರಲಾ' ? ಅಂತ ಕೇಳೆ ' ಎಲ್ಲಿ
ನೆಲೆಸೋದಕ್ಕೆ ನೀವು ಇಷ್ಟು ಪಡ್ತೀರೋ ಅಲ್ಲೇ ನಾನೂ ಇರಲಾ ? ' ಅಂತ
ಈಗ ಕೇಳಿದ್ದೇನೆ. ”
ಮೆನ್ನ : " ಬಟಾ ಅಣ್ಣ, ತಕ್ಷಣ ಒಮ್ಮೊಳೋಡಿ, ನನ್ನದೊಂದು
ಶರತೆ ಇದೆ. ಇವರ ಚಾಣ ಮಸೆಯೋದು ಮೊನೆ ಮಾಡೋದು ನನ್ನ
ಜವಾಬ್ದಾರಿ. ಇವರು ಒಪ್ಪೋದಾದ್ರೆ ನಮ್ಮ ಜತೆ ಇರಲಿ. ”
ನೆಖೆನ್ : ಈ ಸಮೂಹದ ಸಂಕಟದ ನಡುವಿನಲ್ಲಿ ಸುಕ್ಕುಗಟ್ಟದ
ಈ ಮುಖಕ್ಕೆ ಮೆರುಗಿನ ಲೇಪನ ಮಾಡ್ತಿದೀರಲ್ಲ ಮೆನ್ನ, ನೀವು ಎಂಥ