ಪುಟ:Mrutyunjaya.pdf/೬೯೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮೨

ಮೃತ್ಯುಂಜಯ

ಯಾತನೆಯನ್ನೂ ಹಗುರಗೊಳಿಸುವ ಅಪ್ರತಿಮ ವೈದ್ಯ.”
ದಟ್ಟವಾಗಿದ್ದ ಇರುಳು ಆಗಲೇ ತಿಳಿಯಾಗತೊಡಗಿತ್ತು.
ಖೈಮ್‌ಹೋಪ್ ಎಚ್ಚೆತಿದ್ದ.
ಸಹಿಸಲಾಗದ ನೋವು. “ಬಟಾ ಅಣ್ಣ,” ಎಂದು ಅವನು ಕ್ಷೀಣ ಧ್ವನಿ
ಯಲ್ಲಿ ಕರೆದ.
ಬಟಾ ಮಾವ, ಕರೀತಾರೆ ; ಬನ್ನಿ,” ಎಂದಳು ಖ್ನೆಮ್ನ ಹೆಂಡತಿ,
ತುಸು ಕಾತರದ ಧ್ವನಿಯಲ್ಲಿ.
ಬಟಾ ಹತ್ತಿರ ಬಂದೊಡನೆ ತ್ರೈಮ್ ಹೊಟೆಪನ ಕೈ ಬಟಾನನ್ನು ಮುಟ್ಟಲು
ಯತ್ನಿಸಿತು. ಬಟಾ ಆ ಅಂಗೈಯನ್ನು ಹಿಡಿದುಕೊಂಡ.
ನಿಧಾನವಾಗಿ ಪ್ರೈಮ್ ಕೇಳಿದ :
"ಊರಿನ....ಗತಿ....ಏನಾಯ್ತು?”
“ ಅದರ ಚಿಂತೆ ಈಗ ಬೇಡ ಖೈಮು. ....ನೀನು ವಿಶ್ರಾಂತಿ ತಗೋ.
ಬೆಳಿಗ್ಗೆ ಕಣ್ಣುಗಳಿಗೆ ಔಷಧೋಪಚಾರ ಮಾಡೋಣ.”
“ ನಾವು ತಪ್ಪಿಸಿಕೊಂಡು ಬಂದೆನಾ ?”
“ ಹ್ಞ, ನೆಫಿಸ್ ಅತ್ತಿಗೆ, ರಾಮರಿ, ನೆಜಮುಟ್ ಅನ್ನು, ನಿನ್ನತೆ-
ಹೆಂಡತಿ, ಅಹ್ರಾ , ಮಗು, ನೆಫರುರಾ, ಅನ್ನುವಿನ ಮಕ್ಕಳ ತಾಯಿ, ನನ್ನ
ಹೆಂಡತಿ_ ಇಬ್ಬರು ಮಕ್ಕಳು.....ಮೆನ್ನಯ್ಯ, ನೆಖೆನ್ಮಾನ, ನನ್ನ ಅಂಬಿಗ
ಬಂಧುಗಳು....”
“ ನನಗೆ ಗೊತ್ತು. ನಾವು ಸೋತೆವು. ಹಿರಿಯರನ್ನು ಹಿಡಿದು....
ಗುಲಾಮು ಚಾಕರಿಗಾಗಿ ಜನರನ್ನು ಬಂಧಿಸಿದ್ರು....ಪೈರನ್ನೂ ಮನೆಗಳನ್ನೂ
ಸುಟೇನೊ ? ಆ ಮಹಾ ಅರ್ಚಕ, ನುಟ್ ಮೋಸ್, ಬಕಿಲ ಆ ಮೂವರನ್ನು
ನಾನು ಬಲಿ ತಗೋಬೇಕಾಗಿತ್ತು. ಆಗಲಿಲ್ಲ. ಬಕಿಲನಂತೂ ಸೇಡು ತೀರಿ
ಸೊಂಡ.”
ಮಾತಾಡ್ಬೇಡ.ಆಯಾಸವಾಗ್ತದೆ. ಕಣ್ಣಿನಿಂದ ರಕ್ತಸ್ರಾವವಾಗ್ತದೆ.”
“ ಇಡೀ ಸಮುದಾಯದ ರಕ್ತಪ್ರವಾಹದ ಎದುರಲ್ಲಿ ಇದೇನು ಲೆಕ್ಕ
ಬಟಾ ಅಣ್ಣ ?”