ಪುಟ:Mrutyunjaya.pdf/೬೯೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೮೩

ಇದೊಂದು ವಿಷಯದಲ್ಲಿ ಸಮಸ್ಯೆ ಜಟಿಲವಾಗಲಿಲ್ಲ. ಎಷ್ಟು ಹತ್ತಿರವಾಗು
ತಿದ್ದಂತೆ ಕತ್ತಲಾಯಿತು. ನೆಫಿಸ್‌ಗೆ ನೋವು ಆರಂಭವಾಯಿತು.
ನೆಜಮುಟ್ “ಎರಡನೇ ಹೆರಿಗೆ ಬಹಳ ತಡವೇನೂ ಆಗುವುದಿಲ್ಲ.” ಎಂದಳು.
ಊರಿನ ಸಹವಾಸ ಬೇಡವೆಂದು ದೋಣಿಯನ್ನು ಎಡಬದಿಯಿಂದ ಮುಂದಕ್ಕೆ
ಒಯ್ದರು.
ಒಬ್ಬ ಅಂಬಿಗನೆಂದ :
“ ಅಗೋ !”
ಬಲದಂಡೆಯಲ್ಲಿ ಕಲ್ಲುಗಳ ನೈಸರ್ಗಿಕ ಕಟ್ಟೆ ಇದ್ದಲ್ಲಿ ಹತ್ತಾರು ದೀಪ ಗಳನ್ನು ಹಚ್ಚಿ ಇಟ್ಟಿದ್ದ ದೊಡ್ಡ ನಾವೆ ಇತ್ತು.
ಕೆಪ್ಟುವಿನ ವರ್ತಕನಾದೆ.
“ ಎಲ್ಲ ನಿಲ್ಲಿಸಬೇಡಿ, ನೇರ ಹೋಗಿ,” ಎಂದ ಬಟಾ.
ನೆಫಿಸಳ ನರಳಾಟ ಹಚ್ಚಿತು. ನೆಜಮುಬ್ ಚಡಪಡಿಸಿದಳು ಆಹೂರಾ
ನೆಫರುರಾ ಕತ್ತಲೆಯಲ್ಲೇ ಆಕೆಗೆ ನೆರವಾದರು.
ಮೆನ್ನ “ ಓ ಒಸೈರಿಸ್ ಓ ಒಸೈರಿಸ್,” ಎಂದ.
ದೋಣಿಯಲ್ಲಿದ್ದವರು ಆ ದೇವನ ಹೆಸರನ್ನು ಉಚ್ಚರಿಸುತ್ತಿದ್ದಂತೆ, ಎಡ್ಫು ದೇವರನ್ನು ನೆನೆಯುತ್ತ, ಮೆನ್ನ “ಓ ಹೋರಸ್‌ ಓ ಹೋರಸ್,” ಎಂದ.
ಇತರರೂ ಅಂದರು :
« ಓ ಹೋರಸ್‌ ಓ ಹೋರಸ್”
ದೋಣಿ ಎಡುವನ್ನು ದಾಟುತ್ತಿದ್ದ ಕೆಲವೇ ಕ್ಷಣಗಳಲ್ಲಿ ನೆಫಿಸ್‌ಗೆ
ಪ್ರಸವವಾಯಿತು. ಮಗು ಅತ್ತಿತ್ತು. ಎಲ್ಲರೂ ಸಮಾಧಾನದ ನಿಟ್ಟುಸಿರು
ಬಿಟ್ಟರು. ನೆಜಮುಟ್ ತಾಯ ಮಾಸು ಎಳೆದು ತೆಗೆಯುತ್ತಿದ್ದಂತೆ ಮಗು
ನನ್ನೆತ್ತಿಕೊಂಡು ನೆಫರುರಾ, ಆ ಕತ್ತಲೆಯಲ್ಲ ಅಗತ್ಯದ ಪರೀಕ್ಷೆ ಮುಗಿಸಿ,
“ ಗಂಡು ಮಗು ! ” ಎಂದಳು.
ತಬಬುವಾ ಅಂದಳು :
“ ರಾಮೆರಿ, ನಿನಗೊಬ್ಬ ತಮ್ಮ ಬಂದ !”
ದೂರ, ದೋಣಿಯ ಮೂತಿಯ ಬಳಿ ಇದ್ದ ನನ್ನ ನಲ್ಲಿಗೆ ರಾಮೆಂಪ್ ಟಾ
ಹೋದ.