ಪುಟ:Mrutyunjaya.pdf/೬೯೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮೬

ಮೃತ್ಯುಂಜಯ

ಹಾಥೋರ್‌ ದೇವತೆಗಳು ಬಂದು ಮಗುವಿನ ಸುತ್ತಲೂ ಕುಳಿತು ಅದರ ಭವಿಷ್ಯ
ವನ್ನು ನಿರ್ಧರಿಸುತ್ತವೆಂಬುದು ಸಮಾಜದಲ್ಲಿನ ನಂಬಿಕೆ.
ದೇಗುಲಕ್ಕೆ ಹೋದರು. ಖೈಮ್ನನ್ನೂ ಕರೆದೊಯ್ದರು. (ಕಾಲುಗಳಿಗೆ
ಶಕ್ತಿ ಬಂದಿತ್ತು. ಕಣ್ಣಿನ ನೋವು ಕಡಿಮೆಯಾಗಿತ್ತು.)
ನೆಫಿಸ್‌ಗೆ ಹುಟ್ಟಲಿದ್ದ ಮಗುವನ್ನು ನೋಡಿಕೋ ಎಂಬುದೇ ಹಿರಿಯ
ರೆಲ್ಲ ಸಲ್ಲಿಸಿದ ಪ್ರಾರ್ಥನೆ
ರಾಮೆರಿಪ್ಟಾ ಮೆನ್ನನೆಡೆಗೆ ನೋಡಿದ. ಎಲ್ಲರಿಗಿಂತ ಹಿಂದೆ ದೇವಾ
ಲಯದ ಒಂದು ಕಂಬಕ್ಕೊರಗಿ ಅವನು ನಿಂತಿದ್ದ. ಅವನ ತುಟಿಗಳು ಚಲಿಸಿ
ದಂತೆ ತೋರಲಿಲ್ಲ.
....ಮುಂದೆ ಎಡದಂಡೆಯಲ್ಲಿ ವೆಸಿ, ದೊಡ್ಡ ಹಳ್ಳಿಯತಿಂದ್ದ ಊರು.
ಅಮನ್ ದೇವಾಲಯ, ಈಗ ಯಾತ್ರಿಕರ ದೇವರು. ದೋಣಿಕಾರರ ಸಂಗಾತಿ.
ದಂಡಿನಲ್ಲಿ ದುಡಿಯುವ ಬಡ ರೈತರ ಪ್ರೀತಿಪಾತ್ರ....ಎಲ್ಲರೂ ಇಳಿಯುವುದು
ಬೇಡವೆಂದು ಬಟಾ ಮತ್ತು ಅಂಬಿಗರು ಹೋದರು. ದೇಗುಲದ ಹತ್ತಿರವಿದ
ಅಂಗಡಿಯಲ್ಲಿ ಬಾತುಕೋಳಿಗಳನ್ನು ಕೊಟ್ಟು ಹನ್ನೆರಡು ರೊಟ್ಟಿ ಪಡೆದರು.
ಕೆಪ್ಪು ವರ್ತಕನ ನಾವೆ ಎಲ್ಲಿಯೂ ಕಣ್ಣಿಗೆ ಬಿದ್ದಿರಲಿಲ್ಲ. ಎಷ್ಟು
ಸೈನೆಗಳ ಮಧ್ಯೆ ಎಲ್ಲೇ ಇರಬೇಕು ಎಂದು ಬಟಾನ ಊಹೆ. ಆತ ತನ್ನನ್ನು
ನೋಡಬಾರದು, ಮೆಂಫಿಸಿಗೋ ಇನ್ನೆಲ್ಲಿಗೋ ಆತ ಸುದ್ದಿಯ ವಾಹಕನಾಗ
ಬಾರದು ಎಂಬ ಕಾತರ ಬವಾನಿಗೆ, ಈ ವಿಷಯವನ್ನು ಆತ ಅಂಬಿಗರಿಗೆ
ಹೇಳಿದ್ದ, ಮೆನ್ನನಿಗೂ ತಿಳಿಸಿದ್ದ.

  • ***

ಕೆಷ್ಟು ಮೆಂಫಿಸಿನಲ್ಲಿ ಆಡಿದ್ದ ನುಡಿ ಮೆನ್ನನಿಗೆ ನೆನಪಿತ್ತು :
ನಾಯಕರು ನಿಶ್ಚಿಂತೆಯಾಗಿರಿ ಎಲ್ಲ ಸರಿಹೋಗ್ತದೆ.'
ವರ್ತಕನೇನೋ ತನ್ನ ಮಾಟ್ನಂತೆ ವರ್ತಿಸಿದ್ದ. ಆದರೆ ಪರಿಸ್ಥಿತಿ
ಬೇರೆ ರೂಪ ತಳೆದಿತ್ತು. ಮೆನ್ನ ಬಲ್ಲ ; ಈಗ ಕಂಡರೂ ನವುರು ಮಾತನ್ನೇ
ಆಡುತ್ತಾನೆ. ಸಹಾಯವೇನಾದರೂ ಬೇಕೆ ?-ಎಂದು ಕೇಳುತ್ತಾನೆ, ನೀಡು
ತಾನೆ. ಬಳಿಕ ಮೆಂಫಿಸಿಗೆ ಹೋಗಿ “ ಅವರೆಲ್ಲ ಆ ಕಡೆ ಹೋಗಿದ್ರು....”
ಎನ್ನುತ್ತಾನೆ.