ಪುಟ:Mrutyunjaya.pdf/೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

viii

ಆಮೆರಬ್ : ಐಗುಪ್ತದ ಆಮಾತ್ಯ.
ಇನೇನಿ : ರಾಜಧಾನಿಯಲ್ಲಿ ಅರಮನೆಯ ದೇವಮಂದಿರದ ಅರ್ಚಕ.
ಇಪ್ಪುವರ್ : ನೀರಾನೆಪ್ರಾಂತದ ರಾಜಗೃಹದ ಲಿಪಿಕಾರ.
ಉಟೆನ್ : ತಾಮ್ರದ ಕಡ್ಡಿಯ ಸಾಂಕೇತಿಕ ಮೌಲ್ಯಮಾಪಕ.
ಎಡ್ಛು : ದುಷ್ಟ ಸೆತ್‍ನನ್ನು ವೀರ ಹೋರಸ್ ಸಂಹರಿಸಿದ ಸ್ಥಳ.
ಐಗುಪ್ತ : ಪ್ರಸ್ತುತ ಈಜಿಪ್ಟ್.
ಐಸಿಸ್ : ಒಸೈರಿಸ್ ಪತ್ನಿ; ಈಕೆಯೂ ದೇವತೆ.
ಒಸೈರಿಸ್ : ಸೃಷ್ಟಿಕರ್ತ ರಾನ ಪತ್ರ; ರಾ 'ಸಹಸ್ರಾರು' ವರ್ಷ ಆಳಿ ಕಾಲ
ವಾದಮೇಲೆ ಪಟ್ಟಕ್ಕೆ ಬಂದವನು.
ಔಟ : ನೀರಾನೆಪ್ರಾಂತದ 'ಐವತ್ತರ ಶ್ರೇಷ್ಟ'_ಐವತ್ತು ಭಟರ ಮುಖಂಡ;
ನಾಯಕ ಮೆನ್‍ಪ್‍ಟಾನ ಅಂಗರಕ್ಷಕ.
ಕಾಪೀರು : ಮೇಸ್ತ್ರಿ.
ಕಾಫ್‍ರಾ : ಪ್ರಖ್ಯಾತ ಪೆರೋ ; ಐತಿಹಾಸಿಕ ವ್ಯಕ್ತಿ.
ಕೆಫ್ವಿಯು : ಕ್ರೀಟ್ ದ್ವೀಪದ ಹಳೆಯ ಹೆಸರು.
ಕೆಫ್ವು : ಕೆಫ್ವಿಯು ದ್ವೀಪದ ವರ್ತಕ.
ಖೂಫೂ : ಸುಪ್ರಸಿದ್ದ ಪೆರೋ ; ಐತಿಹಾಸಿಕ ವ್ಯಕ್ತಿ.
ಖ್ನೆಮ್ ಹೊಟೆಪ್ : ನೀರಾನೆಪ್ರಾಂತದ ಕಾವಲು ಭಟರ ದಳಪತಿ.
ಖೈಮು : ನೀಲನದಿಯ ದೇವತೆ.
ಖೇಟಾ : ಹಿಟ್ಟೈಟ್ ಜನರು.
ಖೊನ್ಸು : ಐಗುಪ್ತದ ಪ್ರವಾಸಿಗಳ ಅಧಿಕಾರಿ.
ಗೇಬು : ನೀರಾನೆಪ್ರಾಂತದ ಪ್ರಾಂತಪಾಲ.
ಚೊಯಾಕ್ಲೆ : ತಿಂಗಳ ಹೆಸರು.
ಜಜ್‍ಮಂಖ್ : ಗೋರಿ ದರೋಡೆಗಾರ.
ಜೋಸರ್ : ಪ್ರಖ್ಯಾತ ಪೆರೋ; ಐತಿಹಾಸಿಕ ವ್ಯಕ್ತಿ
ಟೆಹುಟ: ಐಗುಪ್ತದ ಒಬ್ಬ ಮುಖ್ಯ ಕಂದಾಯ ಅಧಿಕಾರಿ; ಮಹತ್ಯಾಕಾಂಕ್ಷಿ.
ತಬಬುವಾ : ನೀರಾನೆ ಪ್ರಾಂತದ ಪ್ರಮುಖ ಪ್ರಜೆ ಸೆಬೆಕ್ಖುವಿನ ಪತ್ನಿ.
ಥಾನಿಸ್: ನೀರಾನೆಪ್ರಾಂತದ ಹಿರಿಯರ ಸಮಿತಿಯ ಒಬ್ಬ ಸದಸ್ಯ.