ಬಟಾ ಇನ್ನೊಂದು ಅಂಗೈಯಿಂದ ಬೈ ಮ್ಹೊಟೆಸನ ಭುಜವನ್ನು
ತಟ್ಟಿದ, ಸಂತೈಸಲೆಂದು.
ಮೆನ್ನ ಬೈಮ್ ಹೊಟೆಪನ ಕಣ್ಣುಗಳನ್ನು ಪರೀಕ್ಷಿಸಿದ. ದೃಷ್ಟಿಯ ಆಸೆ
ಇಲ್ಲ__ಎಂದು ಕೈ ಸನ್ನೆಯಿಂದ ಬಾನಿಗೆ ತಿಳಿಸಿದ. ದೋಣಿಯನ್ನು ದಂಡೆ
ಗೊಯ್ದರು. ಅಲೆದಾಡಿ ಗಿಡ ಪೊದೆಗಳಲ್ಲಿ ಹುಡುಕಿ, ಔಷಧೀಯ ಎಲೆಗಳನ್ನು
ಮೆನ್ನ ತಂದ. ಎರಡು ಕಲ್ಲುಗಳನ್ನು ಹೊಂದಿಸಿ ಜಜ್ಜಿ ಅರೆದು, ಒಂದೊಂದೇ
ಬಿಂದು ರಸವನ್ನು ನೈಮ್‌ಹೋಟೆಪನ ಕಣ್ಣುಗಳಿಗೆ ಬಿಟ್ಟ. ಸೆಣಬಿನ ವಸ್ತ್ರದ
ಒಂದು ಪಟ್ಟಿಯನ್ನು ಶುಚಿಗೊಳಿಸಿ, ನೊಣಗಳು ಮುತ್ತದಂತೆ ಕಣ್ಣುಗಳಿಗೆ
ಕಟ್ಟಿದ.
ದೋಣಿಯಲ್ಲಿ ಏನಿದೆಯೆಂದು ಲೆಕ್ಕ ಹಾಕಿದರು. ಎರಡು ಮೂರು
ಬರಿದು ಪಾತ್ರೆಗಳಿದ್ದವು. ಬಹಳ ಹಳೆಯದಾದ ಬುತ್ತಿ ಸ್ವಲ್ಪ ಇತ್ತು. ಹಲ್ಲು
ಗಳಿಗೆ ಒಣರೊಟ್ಟಿಯ ತುಣುಕುಗಳನ್ನು ಜಗಿಯುವ ಕೆಲಸ."
ಬಟಾ ಅಂದ :
"ಇವತ್ತಿಗೆ ಸಾಕು, ಅಬ್ಬು ದಾಟೋಣ. ನಾಳೆ ದೆಂದೆರೆಯಲ್ಲೇ
ವೆಸಿಯಲ್ಲೂ ಒಂದಿಷ್ಟು ಆಹಾರ ಸಂಗ್ರಹಿಸ್ಸೇಕು. ರಾಜಧಾನಿಯಲ್ಲಿ
ಸಂಪಾದಿಸಿದ ಎರಡು ಈಟಿಗಳು ಇಲ್ಲಿವೆ. ಒಂದು ಆತ್ಮರಕ್ಷಣೆಗೆ ಇರಲಿ.
ಇನ್ನೊಂದನ್ನು ವಿನಿಮಯವಾಗಿ ಕೊಡಬಹುದು ಎಷ್ಟು ರೊಟ್ಟಿ ಸಿಗ್ತದೋ
ನೋಡೋಣ, ಬಟ್ಟೆಗಳು ದೊಡ್ಡದು ಚಕ್ರವು ಚಿಂದಿ ಇಷ್ಟಿವೆ, ನೆಜಮುಟಕ.
ನಿಮಗೆ ಬೇಕಾದೀತು ನೋಡ್ಕೊಳ್ಳಿ.”
ಪತಿ ಅಂಧನಾದನೆಂದು ಅವನ ಹೆಂಡತಿಗೆ ಯಾತನೆ, ತಬಬುವಾ ಮಗಳ
ಕಿವಿಯಲ್ಲಿ ಉಸುರಿದಳು :
“ ನೀನು ಅಳೋದು ಗಿಳೋದು ಮಾಡಬಾರು. ಧೈರ್ಯವಾಗಿರು.
ಸಮಾಧಾನದಿಂದ ಇದ್ದರೆ ಅವನಿಗೆ ಬೇಗನೆ ಗುಣವಾಗ್ತದೆ.”
ಪುಟ:Mrutyunjaya.pdf/೭೦೦
ಗೋಚರ
ಈ ಪುಟವನ್ನು ಪರಿಶೀಲಿಸಲಾಗಿದೆ
ಮೃತ್ಯುಂಜಯ
೬೮೭
