ಪುಟ:Mrutyunjaya.pdf/೭೦೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮೮

ಮೃತ್ಯಂಜಯಂ

“ ಏಳು ಹಾಥೋರ್‌ ದೇವತೆಗಳು ಈಗ ಬರ್ತಾವಾ ?” ಎಂದು ಕೇಳಿದ.
“ ಅದೊಂದು ಕಲ್ಪನೆ, ರಾಮೆರಿ.”
“ ನಮಗೆ ಕಾಣಿಸೋದಿಲ್ಲ, ಅಲ್ಲವಾ ?”
« ಊಹೂಂ .”
“ ಹಾಗಾದರೆ ಭವಿಷ್ಯತ್ತಿನಲ್ಲಿ ಮಗು ಏನಾಗದೇಂತ ಹೇಳೋದು
ಯಾರು ?”
“ ಅರ್ಚಕರು. ಆದರೆ ಅವರ ಗುಟ್ಟು ನನಗೆ ಗೊತ್ತು. ಯಾರಿಗೂ
ಹೇಳೋದಿಲ್ಲ ಅಂತ ಮಾತು ಕೊಡು, ತಿಳಿಸ್ತೇನೆ.”
“ ಹೂಂ, ಮಾತುಕೊಟ್ಟಿದ್ದೇನೆ ”
“ ಕೇಳು, ಇದು ಎಷ್ಟು. ಇಲ್ಲಿರೋದು ಹೋರಸ್ ದೇವರು. ಹೋರಸ್
ಯಾರು ಗೊತ್ತಾ ?”
" ಒಸೈರಿಸನ ಮಗ, ತಂದೆ ಆ ಕಥೆ ಹೇಳಿದ್ದಾರೆ.”
" ಹೋರಸ್ ಚಿಕ್ಕವನಾಗಿದ್ದಾಗ ಅವನ ತಂದೆ ಏನ್ಮಾಡ್ತಿದ್ದ ಗೊತ್ತೆ ?”
“ ಇಲ್ಲ. ಅದನ್ನು ಅಪ್ಪ ಹೇಳಿಲ್ಲ.
“ ಹಂ! ಕೇಳು ! ತೀರಿಕೊಂಡ ಮೇಲೆ ಒಸೈರಿಸ್ ನ್ಯಾಯಲೋಕಕ್ಕೆ
ಹೋದನಲ್ಲ ? ಬೆಳೀತಿದ್ದ ಮಗನನ್ನು ನೋಡೋದಕ್ಕೆ ಅವನು ಆಗಾಗ್ಗೆ
ಬರ್ದ್ತಿದ್ದ.”
“ ಹೂಂ .” “ ಬಂದು, ಮಗನನ್ನು ಕೇಳಿದ್ದ : ಒಬ್ಬ ಮನುಷ್ಯ ಮಾಡಬಹು ದಾದಂಥ ಉದಾತ್ತ ಕೆಲಸ ಯಾವುದು, ಹೇಳು ಮಗ... ಮಗ ಉತ್ತರ ಕೊಡ್ತಿದ್ದ : 'ತಂದೆ ತಾಯಿ ಅನುಭವಿಸಿದ ದೌರ್ಜನ್ಯಕ್ಕೆ ಪ್ರತೀಕಾರ ಮಾಡೋದು'....” "ಹೂಂ ,” “ ಸೆತ್ ಸೋತ ಸುದ್ದಿ ತಿಳಿದಾಗ ರಾ ದೇವ ಹೇಳಿದ : “ಶಿಕ್ಷೆ ವಿಧಿ ಸೋದಕ್ಕೆ ಅವನನ್ನು ಹೊರಸ್‌ನ ವಶ ಕೊಡಿ, ಒಸೈರಿಸ್ಗೆ ಸೆತ್ ಏನು ಮಾಡಿದನೋ ಅದನ್ನೇ ಸೆತಗೆ ಹೊರಸಿ ಮಾಡಿ. ಆಗ ಇಡೀ ಗಣ 'ಅದೇ ಸರಿ,' ಎಂದಿತು. ಅದು ತಿಳಿದೊಡನೆ ಹೋರಸ್ ಒರೆಯಿಂದ ಖಡ್ಗ