ಪುಟ:Mrutyunjaya.pdf/೭೦೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೮೯


ಹಿರಿದು, ಸೆತ್‌ನ ದುರ್ನಾತದ ತಲೇನ ಕತ್ತರಿಸಿದ. ತನ್ನ ತಂದೆಗೆ ಸೆತ್
ಮಾಡಿದ್ದ ಹಾಗೆ,ಅವನ ದೇಹವನ್ನೂ ಹದಿನಾಲ್ಕು ಹೋಳು ಮಾಡಿದ.”
"ಹೂಂ"
"ಆಗ ಎಷ್ಟು ಊರಲ್ಲಿ ಡಂಗುರ ಸಾರಿದ್ರು: ಎಡ್ಡು ನಿವಾಸಿಗಳೇ
ಸಂತೋಷಪಡಿ ! ಸ್ವರ್ಗಗಳ ಅಧಿಪತಿಯಾದ ಮಹಾನ್ ದೇವ ಹೋರಸ್
ಒಸ್ಸೆರಿಸನ ವೈರಿಯನ್ನು ಸಂಹರಿಸಿದ್ದಾರೆ. ತಮ್ಮ ತಂದೆಯ ಕೊಲೆಯ ಸೇಡು
ತೀರಿಸಿದ್ದಾರೆ! ಸತ್ತವನ ಮಾಂಸವನ್ನು ತಿನ್ನಿ, ಆ ಕೆಂಪು ಘಂಡಾಮೃಗದ
ರಕ್ತವನ್ನು ಕುಡೀಗಿ, ಅವನ ಮೂಳೆಗಳನ್ನು ಬೆಂಕಿಯಲ್ಲಿ ಸುಡಿರಿ ! ಹೋಳು
ಗಳನ್ನು ಚೂರು ಚೂರು ಮಾಡಿ ಬೆಕ್ಕುಗಳಿಗೆ ಎಸೀರಿ' ! ಅಮೇಧ್ಯವನ್ನು
ಉರಗಾದಿಗಳು ತಿನ್ನಲಿ !”
“ಹೂಂ .”
"ಆಗ ಜನರು ಜಯಘೋಷ ಮಾಡಿದ್ರು : 'ಸೇಡು ತೀರಿಸಿದ ನೀರ
ಬಾಹು ಹೋರಸ್ ಉಘ' ಅಂತ.”
“ಅಯ್ಯ ”
“ಅಲ್ಲ, ಮನ್ನ”
“ಮೆನ್ನಯ್ಯ, ಇದು ಯಾವಾಗ ನಡೀತು ?”
“ಹತ್ತು ಸಲ ಹತ್ತು ಎಂದರೆ ನೂರು ; ನೂರು ಸಲ ನೂರು ಅಂದರೆ
ಸಾವಿರ....”
“ಇಪ್ಪುವರ್ ಗುರು ಹೇಳ್ಕೊಟ್ಟಿದ್ದಾರೆ.”
“ಹ್ಞ. ಅಂಥ ಎಷ್ಟೋ ಸಾವಿರ ವರ್ಷಗಳ ಹಿಂದೆ.”
"ಇರಬೇಕು. ಎಡ ದೇವಸ್ಥಾನ ಕಟ್ಟೋದಕ್ಕೆ ಹುಡುಗನಾಗಿದ್ದಾಗ
ನನ್ನ ತಂದೆಯೂ ಅವರ ತಂದೆಯೂ ಬಂದಿದ್ರಂತೆ. ಆಗ ಹಾಡುಗಾರರು ಬಂದು
ಒಂದು ಹಾಡು ಹೇಳಿದ್ರಂತೆ.”
“ನೆನಪಿದೆಯಾ ?”
“ಇದೆ.
ವೀರರ ವೀರ ಹೋರಸ್ ಉಘ
ತಂದೆಯ ಕೊಂದವನ ಮಣ್ಣು ಮುಕ್ಕಿಸಿದ ಧೀರ ಉಘೆ.
ದುರುಳನ ತರಿದ ಮಹಾಶೂರ ಉಘ...”