ಪುಟ:Mrutyunjaya.pdf/೭೦೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೯೦

ಮೃತ್ಯುಂಜಯ

“ಸೊಗಸಾದ ಹಾಡು. ಇದನ್ನು ಬೇರೆ ಬೇರೆ ರೀತಿ ಐಗುಪ್ತದಲ್ಲೆಲ್ಲಾ
ಹಾಡ್ತಾರೆ.”
“ನಾನು ಕೇಳಿದ ಪ್ರಶ್ನೆ”
“ಭವಿಷ್ಯತ್ತಿನಲ್ಲಿ ಮಗು ಏನಾಗ್ತಿದೆ ಅಂತಿ?”
“ಹೌದು.” ಇದೆ
“ನಿಮ್ಮ ತಂದೆ ಈ ಕಾಲದ ಒಸೈರಿಸ್, ನೀನು ನಿನ್ನ ತಮ್ಮ ಇಬ್ಬರೂ
ಒಸೈರಿಸ್ ಸಂತಾನ- ಹೋರಸ್ ವೀರರು.”
ರಾಮೆರಿ ಮೌನ ತಳೆದ, - ಕಂಠ ಉಮ್ಮಳಿಸಿತು.
ಮೆನ್ನ ಕೇಳಿದ :
“ಅತ್ತಿದ್ದೀಯಾ" ?
“ಇಲ್ಲ, ಇಲ್ಲ. ನನಗೆ ಸಂತೋಷವಾಗಿದೆ.”

  • ***

ನೆಜಮುಮ್ ಅಂದಳು :
“ಮಗು ಹಾಲು ಚೀಪಿದೆ. ನೆಫಿಸ್‌ಗೆ ನಿದ್ದೆ ಬಂದಿದೆ. - ದೋಣಿ
ನಿಲ್ಲಿಸೋದು ಬೇಡ. ಹೀಗೆಯೇ ಹೋಗ್ತಾ ಇರಲಿ.” ಎಣ
ರಾ ಕಾಣಿಸಿಕೊಂಡಾಗ ಎಚ್ಚರ, ಹಾಡಲು
ಹೃಷ್ಟ ಪುಷ್ಟ ಮಗು. ಕೆಂಪು ಕೆಂಪು ಬಣ್ಣ. ದೋಣಿ ದಂಡೆ ಮುಟ್ಟಿ
ದಾಗ ನೆಫಿಸ್ ಎದ್ದು ಮಗುವನ್ನೆತ್ತಿಕೊಂಡು ಎರಡು ಹೆಜ್ಜೆ ನಡೆದಳು.
ಮೆನೆಪ್‌ಟಾನ ಮಗನಿಗೆ `ರಾ ದರ್ಶನ ಮಾಡಿಸಿದಳು. ಪತಿ
"ಅಮ್ಮ, ಏಳು ಹಾಥೋರ್ ದೇವತೆಗಳು ಬಂದು ಕತ್ತಲೇಲಿ ಮಗು
ವನ್ನು ಸುತ್ತುಗಟ್ಟಿ ಏನು ಹೇಳಿದುವೂಂತ ನನಗೆ ಗೊತ್ತು.”
“ಏನು ಹೇಳಿದುವಪ್ಪ ?”
ಅವನು ಹೋರಸ್ ಆಗ್ತಾನೆ ಅಂತ. ನನ್ನ ಹಾಗೆಯೇ, ನನ್ನ
ಹಾಗೆಯೇ.
....ಮುಂದೆ ಸೈನೆ. ಎಷ್ಟು ಕಲ್ಲುಗಳು, ಕಲ್ಲು ಹಾಸುಗಳು!
ನೆಖೆನ್ ಆಸೆಯ ದೃಷ್ಟಿಯಿಂದ ಅವನ್ನು ನೋಡಿದ.