ಪುಟ:Mrutyunjaya.pdf/೭೦೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೩೯೧

ಮೆನ್ನ ಕೇಳಿದ :
“ಚಾಣಗಳನ್ನು ಹೊರಗೆ ತೆಗೀಬೇಕೂಂತ ಆಸೆಯಾಗ್ಯದಾ ?”
“ಹ್ಞ. ಒಂದು ದಿನ ಯಾವತ್ತಾದರೂ ಇಲ್ಲಿಗೆ ಬಂದೇನು, ಅನ್ಪು
ವೀರನ, ಜನನಾಯಕರ ಬೃಹತ್ ಶಿಲ್ಪಗಳನ್ನು ಕಡೆದೇನು.”
"ಆಗ ನಿಮ್ಮ ಚಾಣಗಳನ್ನು ಮಸೆದುಕೊಟ್ಟು ಅವರ ಕತೆ ಬರೀತಾ,
ಹಾಡುಕಟ್ತಾ ನಾನಿಲ್ಲಿ
ಕೂತೇನೆ ನಿಮ್ಮ ಜತೆ.”
....ಇನ್ನೂ ಮುಂದೆ ಹೋದರೆ ನೀಲ ನದಿ ಧುಮ್ಮಿಕ್ಕುವ ಫಿಲೇ ದ್ವೀಪ.
ದೋಣಿ ಪ್ರವಾಸದ ಅಂತ್ಯ.
ಎಡಕಾಲುವೆಯೊಂದನ್ನು ಬಟಾ ಅಂಬಿಗರಿಗೆ ತೋರಿಸಿದ.
“ಈ ಕಡೆ ಹೊರಳೊಣ, ಹಾಯಿ ಬಿಚ್ಚಿ, ಅವಸರವಿಲ್ಲ. ನಿಧಾನ
ವಾಗಿ ಹೋಗೋಣ, ಬೆಳಕು ಹರಿಯುವಾಗ ನಾವು ಮಹಾಪ್ರಭು, ಮಹಾ
ಅರ್ಚಕ__ಅಮಾತ್ಯರ __ಪಾಳೆಯಗಾರರ ದೇಶದಲ್ಲಿರೋದಿಲ್ಲ.
****
ಬೆಳಗಾಯಿತು. ಅದು ನುಬಿಯ.
ಖೈಮ್ ಹೊಟೆಪನ ಕಣ್ಣುಗಳ ಪಟ್ಟಿ ಬಿಚ್ಚಿದರು. ಕುರುಡು. ಆದರೆ
ಗಾಯ ಗುಣವಾಗಿತ್ತು.
ಮತ್ತೂ ಮುಂದೆ ಹೋದರು. ಒಂದು ಹಳ್ಳಿ ಬಂತು...
“ಒಳಕಾಲೂವೆಗಳೂ ಇವೆ. ಕೆಲ ಹಳ್ಳಿಗಳಿವೆ. ಬಳಸುದಾರಿ, ಮರಳು
ಗಾಡನ್ನು ಹೀಗೆಯೇ ನೇರವಾಗಿ ದಾಟಿದರೆ ಹತ್ತಿರ. ಈ ಕಡೆ ನೆಲೆಸ್ಸೇಕೂಂತಿ
ದೀರಾ ?”
“ಬೆಂಕಿ ಹಚ್ಚಿ ನಮ್ಮ ತಂಡದವರೆಲ್ಲಾ ತೀರಿಹೋದ್ರು. ದುಡಿದು
ಬದುಕೋದಕ್ಕೆ ಯಾವ ನೆಲವಾದರೇನು ?”
“ಪಾಪ ! ಪಾಪ ! ಹೊಟ್ಟೆಗೆ ಏನಾದರೂ ಆಗಿದೆಯಾ ? ಹಸು
ಗೂಸು ಬೇರೆ ಇದೆ....”
ಇವರು ಆತಿಥ್ಯ ಸ್ವೀಕರಿಸಿದರು.
“ನಡೆದು ಹೋದರೆ ಹಳ್ಳಿಗಳಿಗೆ ಎಷ್ಟು ದೂರ ?”