ಪುಟ:Mrutyunjaya.pdf/೭೦೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೯೩

{gap}}ಇನ್ನೊಂದು ಚಪ್ಪರದ ಕೆಳಗೆ ನೆಖೆನ್ ಕುಳಿತು ಸಣ್ಣ ಸಣ್ಣ ಶಿಲಾ
ಮೂರ್ತಿಗಳನ್ನು ಕೊರೆಯುವ ಕೆಲಸದಲ್ಲಿ ಮಗ್ನನಾಗಿದ್ದ ಹುಲಿ, ಚಿರತೆ,
ಸಿಂಹ, ನೀರಾನೆ, ಕುಳ್ಳ ಮನುಷ್ಯ, ಕುಣಿಯುವ ಹೆಣ್ಣು, ಕರಡಿ....
ಅಲ್ಲೇ ಮೂಲೆಯಲ್ಲಿ ಕುಳಿತು ನೀಳಕಡ್ಡಿಗಳಿಂದ ಒಂದು ತಟಕೆ ಹೆಣೆಯು
ತಿದ್ದಳು ಅನ್ನುವಿನ ವಿಧವೆ. ಇಲ್ಲಿ
ನೆಫರುರಾ ಆಕಾಶದ ಕೆಳಗೊಂದು ಒಲೆ ರಚಿಸಿ, ಕುಟ್ಟಿ ಪುಡಿ ಮಾಡಿದ
ಹಿಟ್ಟನ್ನು ಒಂದು ಹಲಗೆಯಲ್ಲಿ ತಟ್ಟಿ ಕೆಂಡಗಳ ಮೇಲೆ ಅದನ್ನು ಬೇಯಿಸುತ್ತ
ಕುಳಿತಿದ್ದಳು, ಅವರೆಲ್ಲರಿಗಾಗಿ,
ಸುಂಟರಗಾಳಿ ಬೀಸದಂತೆ ಮಣ್ಣಿನ ಗೋಡೆಗಳನ್ನು ರಚಿಸಿ, ತಾಳೆಯ
ಸೋಗೆಗಳಿಂದ ಛಾವಣಿ ರಚಿಸಿದ್ದ ಕೊಠಡಿಯಲ್ಲಿ ನೆಫಿಸ್ ಇದ್ದಳು ಹಸು
ಛ ಗೂಸಿಗೆ ಮೊಲೆಯೂಡಿಸುತ್ತ.
ಅಪರಿಚಿತನೊಬ್ಬ ಬಂದನೆಂದು ಅವರಿಗೆ ಕುತೂಹಲ. ಅವರನ್ನು
ಕಂಡೆನಲ್ಲಾ ಎಂದು ಆತನಿಗೆ ಹರ್ಷ.
"ಬಟಾ! ಖೈಮ್ ! ನೆಜಮುಟ್ ಅಕ್ಕಾ ! ಅಕ್ಕ ತಬಬುವಾ !”
ಧ್ವನಿಯಿಂದ ಗುರುತು ಹಿಡಿದರು : ಬಡಗಿ ಸೆಕ್ನಾ ...
“ಓ ಸೆತ್ ನಾ !”
__ಓ ಓ !”
__ಬಾ ಬಾ೦ಧವ !”
ಬೇರೆ ಬೇರೆ ಉದ್ಘಾರಗಳು. ಎಲ್ಲರೂ ಕೆಲಸ ಬಿಟ್ಟರು. ನೆಖೆನ್ನ
ಚಪ್ಪರಕ್ಕೆ ಬಂದರು. ಒಂದು ಕಲ್ಲು ಸೆಕ್ನಾಗೆ ಪೀಠವಾಯಿತು.
ಬಟಾನಂದ :
“ನಮ್ಮ ಶ್ರೇಷ್ಠ ಬಡಗಿಗೆ ಎಂಥ ಕುರ್ಚಿ ಕೊಡ್ತಿದ್ದೇವೆ ನೋಡು !”
ಸೆತ್ ನಾ ಮುಖಕ್ಕೂ ಪಾದಗಳಿಗೂ ನೀರು ಹನಿಸಿಕೊಂಡ.
“ರಾತ್ರಿ ಎಲ್ಲಿದೆ ?”
"ಒಂದು ಮರದ ಕೆಳಗೆ. ”
ನಾವು ಇಲ್ಲಿರೋದು ಹ್ಯಾಗೆ ಗೊತ್ತಾಯ್ತು ?”