“ಹೆವ ಚೀನ ಮೊದಲೇ ದಿನವೇ ಹೊಡೆದು ಸಾಯಿಸಿದ್ರು.” : “ಅಯ್ಯೋ !
ಆಯ್ಯೋ !” (ನಾಯಕರಿಗೆ ಬಿದ್ದ ಕನಸಿನ ನೆನಪು ಬಟಾನೆ.) ಪ್ರಮುಖರೆಲ್ಲ
ರಾಜ ಬಂದಿಗಳು, ಅರಮನೆಯ ಕಾರಾಗೃಹಕ್ಕಂತೆ, ಬಟಾ ಮತ್ತು
ಮೆನ್ನಯ್ಯ ಬೇಕೂಂತ ಬಹಳ ಹುಡುಕಿದ್ರು, ಶವಪೆಟ್ಟಿಗೆ ನಿರ್ಮಿಸಿಕೊಟ್ಟ
ಬಡ ಸೆತ್ ನಾಗಾಗಿ ಶೋಧನೆ ನಡೆಯಿತು. “ಒಳ ನಾಡಿಗೆ ಹೋದೆ.
ಹಳ್ಳಿಯಿಂದ ಹಳ್ಳಿಗೆ ಅಲೆದೆ. ಬಕಿಲನೇ ಪ್ರಾಂತಪಾಲ ಅಂತ ಖಚಿತವಾಲೆ
ತಲೆ ಮರೆಸಿಕೊಂಡು ಪ್ರಾಂತ ಬಿಟ್ಟೆ.” ಗೇಬು ಕುಟುಂಬದ ಆಭರಣ ಇತ್ಯಾದಿ
ಇಲ್ಲವೇ ಇಲ್ಲ ಎಂದು ಬಕಿಲ ಸಾಧಿಸಿ, ಅವನ್ನು ವಶಪಡಿಸಿಕೊಂಡ ಸ್ವಂತಕ್ಕಾಗಿ,
“ಸತೆಕ ನಖ್, ಸೆನಉಸರ್, ಹೆಜಿರೆ__ಎಲ್ಲ ವಾಪಸ್” ಅವರ ಮೆರೆ
ದಾಟವೇ ಮೆರೆದಾಟ, ಅಪೆರ್ಟನದಂತೂ ಭಾರೀ ಆರ್ಭಟ. ಆದರೆ ಇವರೆಲ್ಲ
ಬಕಿಲನಿಗೆ ಹೆದರಾರೆ.” ಮಹಾ ಅರ್ಚಕರು ಒಳನಾಡಿನಲ್ಲಿ ಸಂಚರಿಸಿ,
ಮೊಸಳೆ ಪ್ರಾಂತಕ್ಕೆ ಹೋದರು, ಧರ್ಮದಿಗ್ವಿಜಯಕ್ಕೆ, “ಈ ಸಲ ಸೈನ್ಯಕ್ಕೆ
ಭರ್ತಿ ಆಗಲಿಲ್ಲ. ಆ ಕೆಲಸ ಬಕಿಲ ನಿಧಾನವಾಗಿ ಮಾಡ್ತಾನಂತೆ.” ಊರು
ಸುಡುವುದಕ್ಕೆ ಮುಂಚೆ ಹೊರಗೆ ಅಟ್ಟಿದ್ದ ರಾಸುಗಳಲ್ಲಿ ಕಾಲಂಶ ಭೂಮಾಲಿಕ
ರಿಗೆ ಮುಕ್ಕಾಲಂಶ ರಾಜಗೃಹಕ್ಕೆ,-“ಸ್ಮಾರಕ ಕಂಬ ಸುಟ್ಟು, ಪುನಃ
ರಾಜಗೃಹದ ಸುತ್ತಲೂ ಗೋಡೆ ಎಬ್ಬಿಸಿದ್ದಾರೆ. ಈ ಸಲ ಎರಡಾಳೆ
ತರದ್ದು....” ಬೈ ಹೊಟೆಪ್ ಮತ್ತು ಬಟಾ ಏನಾದರೂಂತ ಬಕಿಲ
ಬಹಳ ಆಕ್ರೋಶ ಮಾಡಿದ ತಪ್ಪಿಸಿಕೊಂಡು ಹೋಗಲು ಸಹಾಯ
ಮಾಡಿರಬಹುದೆಂಬ ಸಂಶಯದ ಮೇಲೆ ಅವರದೇ ಹೇರು ದೋಣಿಯ ನಾವಿ
ಕರು, ಸೇವಕರು, ಸೈನಿಕರಿಗೆಲ್ಲ ನೂರು ನೂರು ಛಡಿ ಏಟು ಬಿತ್ತು. ನೆಫಿಸ್
ತಾಯಿ ಮತ್ತು ಪ್ರಮುಖರ ಪತ್ನಿಯರಿಲ್ಲ ಸುಟ್ಟು ಹೋಗಿರಬೇಕು ಅಂತ
ಅಭಿಪ್ರಾಯ. ಸುಟ್ಟ ಮನೆಗಳಿಗೆ ಹೊಸ ಛಾವಣಿ ಹಾಕುತ್ತಿದ್ದಾರೆ. ಅಂತೂ
ಪುನಃ ಆರಂಭವಾಗುತ್ತಿದೆ ದಾಸ್ಯ ಜೀವನ....
- ***
ಬಡಗಿ ಸೆತ್ನಾ ಆ ಬಳಗದ ಒಬ್ಬನಾದ.
ವರ್ಷಗಳು ಕಳೆದರೂ ಶವಪೆಟ್ಟಿಗೆ ನಿರ್ಮಿಸುವ ಅಗತ್ಯ ಬೀಳಲಿಲ್ಲ.