ಪುಟ:Mrutyunjaya.pdf/೭೪

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೨

ಮೃತ್ಯುಂಜಯ

ಬದುಕು ಸಾಗಿದೆ'___ಅಂದ್ಕೊಳ್ತಾ ಬಂದ್ವಿ. ಮಾನ್ಯ ಅಧಿಕಾರಿಯವರು
ನಮ್ಮೂರು ಮುಟ್ಟಿದ್ದು ನಮಗೆ ಗೊತ್ತೇ ಇರ್ಲಿಲ್ಲ. ಕಂದಾಯ ವಸೂಲಿ
ಅಂದರೆ ಬಡಜನತೆಗೆ ಭಯ. 'ನಮ್ಮ ಸಂಕಟ ತೋಡ್ಕೋ ಬೇಕು' ಅಂದ
ಸ್ನೊಫ್ರು. ತಂದೆ ಪೆರೋ ಕಳಿಸಿರೋ ಅಧಿಕಾರಿ, ನೀವಲ್ಲದೆ ಮಕ್ಕಳ ಸಂಕಟ
ವನ್ನು ತಂದೆಗೆ ಇನ್ನು ಯಾರು ತಾನೆ ತಿಳಿಸ್ತಾರೆ?...."
ಟೆಹುಟಿಯ ಹುಬ್ಬುಗಳು ಒಂದನ್ನೊಂದು ಸಮೀಪಿಸಿದುವು. ಸಿಟ್ಟಿನಿಂದ
ಆತನೆಂದ :
"ಚುಟುಕು ! ಚುಟುಕು ! ಬಾಯಿಯಿಂದ ಹೊರಬಿದ್ದ ಮಾತು
ಪಂಜರ ಬಿಟ್ಟ ಕುರುಡು ಹಕ್ಕಿಯ ಹಾಗೆ; ಯಾವುದಕ್ಕಾದರೂ ಬಡಿದು ರೆಕ್ಕೆ
ಮುರಿದೀತು. ಎಚ್ಚರ!"
"ಕುರುಡು ಹಕ್ಕಿಗೆ ನೋಡೋ ಆಸೆ, ಹಾರೋ ಆಸೆ, ಮಹಾಶಯ.
ತಲೆ ತಲಾಂತರಗಳ ಗೋಳಿನ ಕಥೆ. ತೀರಾ ಚುಟುಕಾಗೋದು ಹ್ಯಾಗೆ
ಸಾಧ್ಯ? ಆದರೂ ಪ್ರಯತ್ನಿಸುತ್ತೇನೆ. ನಿಮ್ಮ ಭೋಜನಕ್ಕೆ ವಿರಾಮಕ್ಕೆ
ಅಡ್ಡಿಯಾಗಬಾರ್ದು...."
"ಭೋಜನ ? ವಿರಾಮ ? ಅಡ್ಡಿಯಾಗೋದು ರಾಜಕಾರ್ಯಕ್ಕೆ
___ಕಂದಾಯ ವಸೂಲಿಗೆ!"
"ಆ ಪಾಪಕಾರ್ಯ ನಾವು ಮಾಡೇವೆ ? ದೇವರು ಕ್ಷಮಿಸಿಯಾನೆ
ನಮ್ಮನ್ನು? "
ಗೇಬು ಕಾತರನಾಗಿ ಟೆಹುಟಿಯತ್ತ ನೋಡಿದ. ಕೋಪದಿಂದ ಅವನ
ಮುಖ ಕೆಂಪಡರಿದುದನ್ನು ಕಂಡ.
"ನಿಲ್ಲಿಸ್ಬೇಡ. ಹೇಳಿ ಮುಗಿಸು!"
"ದಾಖಲೆಯಾಗಿರೋ ಹಾಗೆ ಕಳೆದ ವರ್ಷ 'ಒಳ್ಳೆಯ ನೀಲ'. ಆದರೇ
ನಾಯ್ತು ? ಹಗ್ಗ ಎಳೆಯುವವರು ಎಳೆದರು. ಮೋಜಣಿದಾರರು ನೆಲ
ಅಳೆದರು. ನಾಲೆಗಳ ದುರಸ್ತಿ ಮಾತ್ರ ಆಗಲಿಲ್ಲ. ಕೆರೆಗಳ ಹೂಳು ತೆಗೆದು
ನೀರು ಸಂಗ್ರಹಿಸೋ ಕೆಲಸ ನಡೀಲಿಲ್ಲ. ಇದು ಬಡ ಪ್ರಜೆಗಳಿಂದ ಆಗು
ವಂಥದೆ? ಆಳುವವರಲ್ಲವೆ ಮಾಡಬೇಕಾದ್ದು ? ನಾವು ಷಾಡೂಫ್
ನಡೆಸೇವು. ನದಿಯಿಂದ ನೀರೆತ್ತಿ ಬಾವಿಗೆ ಸುರಿದೇವು. ಆದರೆ ಈ ನೀರು