ಪುಟ:Mrutyunjaya.pdf/೭೫

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ

೬೩

ಎಷ್ಟು ಹೊಲಗಳಿಗೆ ಸಾಕು? ಇಷ್ಟಕ್ಕೇ ಮುಗೀಲಿಲ್ಲ. ನಮ್ಮ ಕಷ್ಟ.
ಮುದಿ ಹೋರಿಗೆ ಬದಲು ಹೊಸ ಹೋರಿ ತರ್‍ಬೇಕು. ನೇಗಿಲಿಗೆ ಬೇರೆ ಮೊನೆ
ಹಾಕ್ಬೇಕು. ಇದಕ್ಕೆ ಖರ್ಚಾಗೋದಿಲ್ಲವಾ? ಧಾನ್ಯ ಬೇಡವಾ? ಇನ್ನು
ಇಲಿ, ಹೆಗ್ಗಣ, ಕಾಡುಹಂದಿ, ಹುಳಹುಪ್ಪಟೆ, ಮಿಡತೆ, ಹಕ್ಕಿಗಳ ಕಾಟದ
ವಿಷಯ ಎಷ್ಟು ಹೇಳಿದರೂ ಸ್ವಲ್ಪವೇ. ಕಳ್ಳರೂ ಬರ್ತಾರೆ. ರಾಜಕಣಜಕ್ಕೆ
ಹಿಂದೆ ಹತ್ತರಲ್ಲಿ ಒಂದಂಶ ಸಲ್ಲಿಸ್ತಿದ್ವಿ. ಈಗ ಕಂದಾಯ ಇಮ್ಮಡಿಯಾಗಿದೆ.
ಹತ್ತರಲ್ಲಿ ಒಂದಂಶ ದೇವಮಂದಿರಕ್ಕೂ ಸಲ್ಲಬೇಕಾಗಿದೆ. ಕೈಯಲ್ಲಿದ್ದ ಚೂರು
ಪಾರು ಕಾಳು ಮುಗಿದಾಗ ನಾವು ಏನನ್ನು ತಿನ್ಬೇಕು? ಆಗ ಪೆಪೈರಸ್
ದಂಟಿನ ಬುಡಭಾಗವೇ ನಮ್ಮ ಆಹಾರ. ಇಲ್ಲವೆ ನೀರು ಗಿಡಗಳ ಬೇರುಗಳು,
ಕಡ್ಡಿಗಳು, ಹಸಿಯೋ ಬೇಯಿಸಿಯೋ ಸುಟ್ಟೋ ತಿನ್ಬೇಕು."

ನಡುವೆ ಬಾಯಿ ಹಾಕಿ ಟೆಹುಟಿ ಕಿರಿಚಿದ:

"ಪ್ರವಾಹ ಕಾಲದಲ್ಲಿ_ಬಿತ್ತನೆಗ್ಮುಂಚೆ_ನಿಮಗೆಲ್ಲಾ ಕೆಲಸಕೊಡೋದಿಲ್ಲವಾ?
ಕಲ್ಲು ಒಡೆಯೋದು ಕಲ್ಲು ಸಾಗಿಸೋದು ಕಟ್ಟೋದು
ಕುಟ್ಟೋದು....ಸಹಸ್ರ ಸಹಸ್ರ ಜನರಿಗೆ ದುಡಿಮೆ. ಇದೇನು ಸಾಮಾನ್ಯವೇ?"

"ನಿಜ. ಎಷ್ಟೋ ಸಲ ಇದು ಜೀತ. ಭೂಮಾಲಿಕರ ಮೂಲಕ
ನೀವು ಕಡ್ಡಾಯವಾಗಿ ಪಡೆಯೋದು. ಹದಿನೆಂಟು, ಇಪ್ಪತ್ತು ಜನರ ಗುಂಪು
ಗಳಾಗಿ_"

"ಅಸಂಖ್ಯ ಗುಂಪುಗಳು."

"ಅಂಥ ಅಸಂಖ್ಯ ಗುಂಪುಗಳಾಗಿ ನಾವೂ ದುಡಿದಿದ್ದೇವೆ.ಕೋಲು
ಹಿಡಿದ ಕಾಪೀರು ಕೈಯಲ್ಲಿ ಬಯ್ಗಳು ತಿಂದಿದ್ದೇವೆ. ದಿನಗೆಲಸಕ್ಕೆ ಪ್ರತಿಫಲವಾಗಿ
ನೀವು ಕೊಡಬೇಕಾದ್ದು ರೊಟ್ಟಿ, ಯವೆಸುರೆ, ಅವರೆಕಾಳು, ಈರುಳ್ಳಿ,
ಒಣಮಾಂಸ, ಹುದುಗುಪುಡಿ,ಉಪ್ಪು. ಆದರೆ ವಾಸ್ತವವಾಗಿ ನಮಗೆ
ಸಿಗೋದು ಏನಿರ್‍ತದೋ ಅದು. ಹೊಟ್ಟೆಗೇನಾದರೂ ಹಾಕ್ತೀರಿ- ಶಕ್ತಿ
ಬೇಕಲ್ಲ ಕಲ್ಲಿನ ಕೆಲಸಕ್ಕೆ? ಕಾಲ ಕಾಲಕ್ಕೆ ಹರಳೆಣ್ಣೆಯನ್ನೂ ಕೊಡ್ತೀರಿ_
ನಮ್ಮ ಆರೋಗ್ಯ ಸರಿಯಾಗಿರಲಿ ಅಂತ."

ಕರ್ಕಶ ಕಂಠದಲ್ಲಿ ಟೆಹುಟಿ ಅಂದ:

"ನೆನಪಿಟ್ಕೋ! ಮನುಷ್ಯನಿಗೆ ಅವನ ನಾಲಗೆಯೇ ವೈರಿ! ಆ