ಪುಟ:Mrutyunjaya.pdf/೭೬

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೬೪

ಮೃತ್ಯುಂಜಯ

ನಾಲಗೆಯಿಂದಲೇ ಅವನು ನಾಶವಾಗ್ತಾನೆ. ಗೋದಿಯ ಕಣಜಕ್ಕಿಂತಲೂ
ದೊಡ್ಡದು ಮನುಷ್ಯನ ಹೊಟ್ಟೆ. ಅದರ ತುಂಬಾ ನಾನಾ ಬಗೆಯ ಉತ್ತರ
ಗಳಿರ್ತವೆ! ಉಫ್! ಉಫ್ !"
"ಸಿಟ್ಟಾಗಬೇಡಿ ಮಹಾಶಯ."
"ಸಾಕು ಮಾಡು!"
ಪ್ರತಿಮೆಯಂತಿದ್ದ ಬಕಿಲನ ದೃಷ್ಟಿ ಟೆಹುಟಿಯ ಕಡೆಗೇ ನೆಟ್ಟಿತ್ತು.
ಕುಳಿತವರು ಅಲ್ಲೇ ಕಲ್ಲಾಗಿದ್ದರು. ಉಳಿದವರು ನಿಂತಲ್ಲೇ ಮೂರ್ತಿ
ಗಳಾಗಿದ್ದರು.
"ಮುಗೀತಾ ಬಂತು. ಇನ್ನೊಂದೇ ಮಾತು. ರೈತ ತನ್ನ ಫಸಲಿನ
ಪಶುಪಾಲಕ ತನ್ನ ಮಂದೆಯ, ಕಸಬುದಾರ ತನ್ನ ಕುಶಲ ಕೆಲಸದ, ಬೆಸ್ತ
ತಾನು ಹಿಡಿದ ಮೀನಿನ, ಬೇಡ ತಾನು ಹೊಡೆದ ಮಿಕಗಳ ಹತ್ತರಲ್ಲೆರಡು
ಭಾಗ ತೆರಿಗೆಯಾಗಿ ತೆರಲೇ ಬೇಕು. ಮನುಷ್ಯರ ಮತ್ತು ಪ್ರಾಣಿಗಳ ಗಣತಿ
ನಡೀತಾನೇ ಇರ್ತದೆ. ಗಣತಿಯ ಕಾಲದಲ್ಲಿ ಪ್ರಾಣಿಗಳನ್ನು ರೈತರು ದೂರ
ಓಡಿಸಿ ನಮ್ಮಿಂದ ಮರೆಮಾಡ್ತಾರೆ___ಅಂತ ಗಣತಿಯವರು ದೂರ್ತಾರೆ. ನಮ್ಮ
ಪ್ರಾಂತದ ಅತ್ಯಂತ ದೊಡ್ಡ ಭೂಮಾಲಿಕ ನುಟ್ಮೋಸರ ಹಿತ್ತಲಲ್ಲಿ
ಹದಿನೈದು ನೂರು ರಾಸು ಇವೆ. ಆದರೆ ದಾಖಲೇಲಿ ಇರೋದೆಷ್ಟು?"
"ಎಷ್ಟು?"
"ಪೆಟಾರಿಯಿಂದ ಸುರುಳಿ ತೆಗೆದು ನೋಡಿ."
"ಲಂಚ ತಗೊಂಡು ಸುಳ್ಳು ಲೆಕ್ಕ ಬರೀತಾರೆ ಅಂತ ಆಪಾದಿ
ಸ್ತೀಯಾ ?"
"ನನಗೆ ಗೊತ್ತಿಲ್ಲ. ವಿಚಾರಣೆ ನಡೆಸಬೌದು. ಒಂದು ನಾವೆಯ
ಮುಖ್ಯಸ್ಥ ರಾಜಬೊಕ್ಕಸಕ್ಕೂ ದೇವಮಂದಿರಕ್ಕೂ ಮುಟ್ಟಿಸೋದಕ್ಕೆ ಒಯ್ಯು
ತ್ತಿದ್ದ ಧಾನ್ಯದ ನೂರರಲ್ಲಿ ಎಂಬತ್ತುಪಾಲು ರಾಜಧಾನಿಗೆ ತಲುಪಲೇ ಇಲ್ಲ
ಅಂತ ಕೇಳಿದ್ದೇನೆ."
"ಆಃ! ಬಹಳ ವಿಷಯ ನಿನಗೆ ಗೊತ್ತು. ಅಲ್ಲ?"
"ನಮ್ಮ ಭೂಮಾಲಿಕರೆಲ್ಲ ನಿಗದಿಯಾಗಿರೋ ಕಂದಾಯ ಕೊಡೋ
ದಕ್ಕೆ ಒಪ್ಪಿದ್ದಾರೆ. ನಿಗದಿ ಮಾಡಿರೋದು ಜಾಸ್ತಿ ಅಲ್ವೊ ಏನೋ ?