ಪುಟ:Mrutyunjaya.pdf/೭೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೬ ಮೃತ್ಯುಂಜಯ “ ಅವನು ಮನುಷ್ಯನಲ್ಲ,ಸೆತ್.ಕಂಬಕ್ಕೆ ಕಟ್ಟಿ." ಉದ್ದನೆಯ ಸೆಣಬಿನ ಹಗ್ಗ ಮೆನೆಪ್ಟಾನನ್ನು ಹತ್ತಿರದ ಕಂಬಕ್ಕೆ ಬಿಗಿಯಿತು. ಗದೆಗಳ ಹೊಡೆತ ಸಹಿಸಿಯೂ ತಾಳೆ ಕೊರಡುಗಳನ್ನು ಇದಿರಿಸಿಯಯೂ ಜನ ಮುಂದಕ್ಕೆ ಸರಿಯಲೆತ್ನಿಸಿದರು. ಆದರೆ ಭಟರ ಸಂಘಟಿತ ಪ್ರಯತ್ನ ದೆದುರು ಬರಿಗೈಗಳ ಅವರ బల ಸೋತಿತು. ಮೆನೆಪ್ಟಾಟಾಗೆ ಬವಳಿ ಬಂದಂತಾಯಿತು. ಒಂದು ಧ್ವನಿ. ರಾಮೆರಿಪ್ಟಾ. "ಅಪ್ಪಾ,ಅಪ್ಪಾ." ಮೆನೆಪ್ಟಾ ಶಾಂತ ಸ್ವರದಲ್ಲಿ ಅಂದ: "ರಾಮೆರಿ,ಮನೆಗೆ ಹೋಗು;ಅಮ್ಮನ ಹತ್ರ ಇರು."

ರಾಜಗೃಹದಲ್ಲಿ ನಡೆದುದರ ಬಗೆಗೆ ನೆಫಿಸಳಿಗೆ ಮೊದಲ ಸುದ್ದಿ ದೊರೆ ತುದು ಮಗ ರಾಮೆರಿಪ್ಟಾನಿಂದರೇ.ತಂದೆ 'ಮನೆಗೆ ಹೋಗು;ಅಮ್ಮನ ಹತ್ರ ಇರು' ಎಂದೊಡನೆಯೇ ತನ್ನ ಓರಗೆಯವರೊಡನೆ ಹುಡುಗ ಓಡಿ ಬಂದಿದ್ದ. ಅಸಾಧಾರಣವಾದುದೇನೋ ರಾಜಗೃಹದಲ್ಲಿ ನಡೆಯುತ್ತಿದೆ ಎಂಬ ಸುದ್ದಿ ಹಬ್ಬಿದಂತೆ,ಊರಿನ ಜನ ಒಂಟಿ ಒಂಟಿಯಾಗಿ ಗುಂಪಾಗಿ ಅತ್ತ ಹೊರಟಿದ್ದರು. ಓಡಿ ಬರುತ್ತಿದ್ದ ಮಕ್ಕಳನ್ನು ಅವರು ಕೇಳಿದರು: "ಏನಾಗ್ತಿದೆ?ಏನಾಗ್ತಿದೆ ಅಲ್ಲಿ?" ರಾಮೆರಿಪ್ಟಾನದು ಒತ್ತರಿಸಿದ ಗಂಟಲು, ಮುಖದ ತುಂಬಾ ಹೆಪುo ಗಟ್ಟಿದ್ದ ದುಗುಡ. ಜನ ತಡೆದರೆಂದು ಆತ ನಿಲ್ಲಲಿಲ್ಲ. ಮಾತನಾಡಲೂ ಇಲ್ಲ.