ಪುಟ:Mrutyunjaya.pdf/೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ix ಥೊಎರಿಸ್ : ಬಸಿರಿನ ರಕ್ಷಣೆಯ ಮತ್ತು ಸುಖಪ್ರಸವದ ದೇವತೆ ; ಸ್ತ್ರೀ ದೇಹ_ನೇರಾನೆ ಮುಖ. ಥೋಥ್ : ವಿದಾ ದೇವತೆ ; ತಿಂಗಳ ಹೆಸರು ಕೂಡಾ. ದೆಂದೆರೆ : ಹಾಥೊರ್‍ ದೇವತೆಯ ದೇವಾಲಯವಿರುವ ಊರು. ದೆಬೆನ್ : ಬಂಗಾರದ ತೂಕ: ಎರಡೂವರೆ ಔನ್ಸ್. ನೀರಾನೆಪ್ರಾಂತ : ಪ್ರತಿಪ್ರಾಂತಕ್ಕೂ ಅಲ್ಲಿನ ಬುಡಕಟ್ಟಿನ ರಕ್ಷಕ ಸಂಕೇತದ ಹೆಸರಿಡುತ್ತಿದ್ದರು ; ಈ ಬಗೆಯವು ಮೊಸಳೆಪ್ರಾಂತ, ಜಿಂಕೆಪ್ರಾಂತ, ಟಗರುಪ್ರಾಂತ, ಇತ್ಯಾದಿ. ಪೆರೋನ ವಿರುದ್ಧ ದಂಗೆ ಎದ್ದದ್ದು ನೀರಾನೆಪ್ರಾಂತ. ನೀಲ : ನೈಲ್. ನುಟ್‍ಮೋಸ್‍‍ : ನೀರಾನೆಪ್ರಾಂತದ ಹಿರಿಯ ಭೂಮಾಲಿಕ. ನುಬಿಯ : ಐಗುಪ್ತದ ದಕ್ಷಿಣಕ್ಕಿರುವ ದೇಶ ; ಈಗಿನ ಉಗಾಂಡ. ನೆಖೆನ್‍ : ಹಿರಿಯ ಶಿಲ್ಪಿ. ನೆಜಮುಟ್‍ : ನೀರಾನೆಪ್ರಾಂತದ ಪ್ರಮುಖ ಕುಶಲ ಕರ್ಮಿ ಸ್ನೋಪ್ರುವಿನ ಪತ್ನಿ. ನಿಫರ್‍ ಟೀಮ್ : ಮಹಾರಾಣಿ : ಪೆರೋ ಪೇಪಿಯ ಪಟ್ಟದ ಮಹಿಷಿ. ನೆಫರುರಾ : ದಾಸ್ಯದಿಂದ ಮುಕ್ತಳಾಗುವ ಸ್ತ್ರೀ. ನೆಫಿಸ್‍ : ನೀರಾನೆಪ್ರಾಂತದ ಜನನಾಯಕ ಮೆನೆಫ್‍ಟಾನ ಮಡದಿ. ನೆಬೆತ್‍ ಪೆರ್‍ : ಮನೆಯೊಡತಿ. ನೆಹನವೇಯ್ಟ್ : ಪ್ರಾಂತಪಾಲ ಗೇಬುವಿನ ಪತ್ನಿ. ಪ್‍ಟಾ : ಕುಶಲಕರ್ಮಿಗಳ ದೇವರು. ಅವನೇ ಸೃಷ್ಟಿಕರ್ತ ಎಂದು ಒಂದು ಮತ. ರಾ, ಪ್‍ಟಾ, ಅಮನ್‍_ಐಗುಪ್ತದ ಮೂವರು ಪರಮ ಶ್ರೇಷ್ಟ ದೇವರು. ಪಂಟ್ : ಭಾರತದ ತುಳುನಾಡು. ಪಾವೊಫಿ : ತಿಂಗಳ ಹೆಸರು. ಪರೋ : ಐಗುಪ್ತದ ದೊರೆ, ಸಮ್ರಾಟ. ಪೆರು : ಮಹಾಮನೆ ; ಪರೋ : ಮಹಾಮನೆಯ ನೆವಾಸ ; ಹೀಬ್ರೂ ಭಾಷೆಯಲ್ಲಿ ಪೆರೋನನ್ನು