ಪುಟ:Mrutyunjaya.pdf/೮೦

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ೬೭ ಹುಡುಗರಲ್ಲೊಬ್ಬ ಕೀರಲು ಗಂಟಲಲ್ಲಿ ಕಿಂಚುತ್ತ ತನ್ನ ಗೆಳೆಯನನ್ನು ಹಿಂಬಾಲಿಸಿದ: "ಹೊಡೆದ್ರು!ರಾಮೆರಿಪ್ಟಾನ ತಂದೆಗೆ ಹೊಡೆದ್ರು!ಗಲಾಟಿ! ಭಾರೀ ಗಲಾಟಿ!" ರಾಮೆರಿಪ್ಟಾ ಬಾಗಿಲು ತಳ್ಳಿ ಮನೆಯೊಳಕ್ಕೆ ಕಾಲಿರಿಸಿದಾಗ ತಾಯಿ ನೆಫಿಸ್ ಮೂರು ಕಾಲುಗಳ ಪೀಠದ ಮೇಲೆ ಇರಿಸಿದ್ದ ಐಸಿಸ್ ದೇವತಾ ಮೂರ್ತಿಯ ಮುಂದೆ ಮೌನವಾಗಿ ಕುಳಿತಿದ್ದಳು. ರಾಮೆರಿಯ ಗೆಳೆಯರೂ ಮನೆಯೊಳಗೆ ಹೊಕ್ಕು ಅವನ ಬೆನ್ನ ಹಿಂದೆ ಅರ್ಧ ವೃತ್ತಾಕಾರವಾಗಿ ನಿಂತರು. ನೆಫಿಸ್ ತಲೆಯೆತ್ತಿ ಮಕ್ಕಳ ಕಾತರ ತುಂಬಿದ ಮುಖಗಳನ್ನು ನೋಡಿ ದಳು.ಅವಳ ತುಟಿಗಳು ಕಂಪಿಸಿದವು.ಏನಾಯಿತು_ಎಂದು ಕೇಳ ಬೇಕೆನಿಸಿತು. ಆದರೆ ಧ್ವನಿ ಹೊರಡಲಿಲ್ಲ. ರಾಮೆರಿಪ್ಟಾನೇ ನುಡಿದ : "ಮನೆಗೆ ಹೋಗು, ಅಮ್ಮನ ಹತ್ರ ಇರು_ಅಂದ ಅಪ್ಪ." "ಹುಂ." “ಅಪ್ಪ ಸಭಾಂಗಣದಲ್ಲಿ ನಿಂತು, ನಮ್ಮ ಜನರಿಗೆ ಹ್ಯಾಗೆ ಹ್ಯಾಗೆ ಅನ್ಯಾಯ ಆಗ್ತಿದೇಂತ ಹೇಳಿಯೇ ಬಿಟ್ಟ.ಬಹಳ ಹೊತ್ತು ಮಾತಾಡ್ದದ.ಅಧಿಕಾರಿಗೆ ತುಂಬಾ ಸಿಟ್ಟು ಬಂತು.ನಮ್ಮಪ್ಪ ಹೆದರಲೇ ಇಲ್ಲ. ನಮ್ಮವ ರೆಲ್ಲಾ ಬಂದಿದ್ರು.ಸ್ನೊಫ್ರು ಮಾವ, ಸೆಬೆಕ್ಖು ಮಾವ ಎಲ್ಲಾ ಇದ್ರು...." "ಆಮೇಲೆ...." "ಆಮೇಲೆ ಕಟ್ಹಾಕಿದ್ರು." ದ್ರವಿಸತೊಡಗಿದ ದುಗುಡವನ್ನು ಬಿಗಿ ಹಿಡಿಯಲೆತ್ನಿಸುತ್ತ ರಾಮೆರಿಪ್ಟಾ ಅವುಡುಗಚ್ಚಿದ. “ ಹೊಡೆದ್ರಾ?" ಬಿಕ್ಕುತ್ತ ಗಟ್ಟಿಯಾಗಿ ರಾಮೆರಿ ಅಂದ : "ಹ್ಞ.ಆದರೆ ಅಪ್ಪ ಅಳಲಿಲ್ಲ, ಒಂದು ಸರ್ತಿನೂ ಅಳಲಿಲ್ಲ.” ಹಾಗೆ ಹೇಳುತ್ತ, ಸದ್ದಿಲ್ಲದೆ ಕಂಬನಿ ಹರಿಸುತ್ತ, ತಾಯಿಯ ಬಳಿ