ಪುಟ:Mrutyunjaya.pdf/೮೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೬೮ ಮೃತ್ಯುಂಜಯ ರಾಮೆರಿಪ್ಟಾ ಕುಸಿಕುಳಿತು, ಆಕೆಯ ಮಡಿಲಲ್ಲಿ ಮುಖವಿರಿಸಿದ. “ರಾಮೆರಿ,ರಾಮೆರಿ,"ಎಂದು ಮಗನ ಮೈದಡವುತ್ತ ನೆಫಿಸ್ ಸಂತೈ ಸಿದಳು,ತಾನೂ ಕಣ್ಣೀರು ಸುರಿಸುತ್ತ. ನಿಂತಿದ್ದ ಹುಡುಗರಿಗೂ ಅಳು ಬಂತು. “ ನೀವೆಲ್ಲ ಮನೆಗೆ ಹೋಗಿ,ಮಕ್ಕಳೇ.” _ನೆಫಿಸ್ ಅಂದಳು. ಹುಡುಗರಲ್ಲೊಬ್ಬ ನುಡಿದ: " ರಾಮೇರಿ ಇಲ್ಲೇ ಇರ್ಲಿ ಅತ್ತೆ.ನಾವು ರಾಜಗೃಹಕ್ಕೆ ಹೋಗ್ತೇವೆ.” ಗೆಳೆಯರು ಹೊರಹೋದೊಡನೆಯೇ ರಾಮೆರಿಪ್ಟಾ ಧ್ವನಿ ತೆಗೆದು ಅತ್ತ.ನೆಫಿಸಳೂ ಅಂದಳು: “ ಐಸಿಸ್ ,ಐಸಿಸ್ ದೇವತೆ,ರಾಮೆರಿಯ ತಂದೆಯನ್ನು ಕಾಯ ಬೇಡವಾ ನೀನು ? ಮನೆಗೆ ಬಂದ ಮೊದಲನೇ ದಿನವೇ ಹೀಗೆ ಮಾಡೋದಾ? ತಪ್ಪು ಮಾಡದವರಿಗೆ ಶಿಕ್ಷೆ ಯಾವ ನ್ಯಾಯ...?"ಒಸೈರಿಸ್ ದೇವನನ್ನೊ ಅವಳು ಸ್ಮರಿಸಿದಳು: “ಓ ಒಸೈರಿಸ್, ಓ ಒಸೈರಿಸ್. ನೀನು ಧರ್ಮಾತ್ಮ. ಸೆತ್ನ ಪಕ್ಷಕ್ಕ ಹ್ಯಾಗೆ ಜಯವಾದೀತು ? ನೋಡು. ಈ ಭೂಮಿಯಲ್ಲಿ ಆಗ್ತಿರೋದನ್ನು ಕಣ್ಣು ಬಿಟ್ಟು ನೋಡು....ನಿನ್ನ ರಾಣಿ ಐಸಿಸಳ ಭಾಗ್ಯವನ್ನು ನನಗೆ ಕರುಣಿಸು.ರಾಮೆರಿಯ ತಂದೆಯ ಕೂದಲು ಕೊಂಕದಿರಲಿ...." ಕೆಲ ನಿಮಿಷಗಳಲ್ಲೆ ಹೊರಗೆ ಜನರ ನಡಿಗೆಯ ಮಾತಿನ ಸದ್ದು ಕೇಳಿಸಿತು.ಸ್ನೊಫ್ರು ಸೆಬೆಕ್ಖು ಒಳಬಂದರು.ಸ್ನೊಫ್ರುವಿನ ಪತ್ನಿ ನೆಜಮುಟಳೂ ಓಡಿಬಂದಳು. ರಾಮೆರಿಪ್ಟಾ ಎದ್ದು ಕುಳಿತ. ನೆಫಿಸ್ ಮುಖವೆತ್ತಿ ನೋಡಿದಳು. ಸ್ನೊಫ್ರುವೆಂದ: “ ನೀನೇನೂ ಚಿಂತಿಸ್ಬೇಡ. ಮೆನೆಪ್ಟಾನ ರಕ್ಷಣೆ ನಮ್ಮ ಜವಾಬ್ದಾರಿ. ಅವನು ನಮ್ಮನಾಯಕ. ಇವತ್ತು ನಮ್ಮೂರಲ್ಲಿ ಆದದ್ದು ಹಿಂದೆಂದೂ ಎಲ್ಲೂ ಆಗಿರದ ಘಟನೆ....” ಸೆಬೆಕ್ಖು ಅಂದ: " ಊರೆಲ್ಲಾ ಸುದ್ದಿಯಾಗಿದೆ. ಇಡೀ ಊರಿಗೆ ಊರೇ ರಾಜಗೃಹಕ್ಕೆ