ಪುಟ:Mrutyunjaya.pdf/೮೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯುಂಜಯ

ಹೋಗಿ ಮೆನೆಪ್ ಟಾನನ್ನು ಬಿಡಿಸ್ಕೋತದೆ.ನಾವು ಹೆದರಬಾರ್ದು. ಒಗ್ಗಟಾ ಗಿರ್ಬೇಕು. ಬಾ ಸ್ನೂಪ್ರು ಹೋಗೋಣ್. ರಾ ಪಶ್ಚಿಮದ అంజు ಮುಟ್ಟೋಕ್ಮುಂಚೆ ಮೆನೆಪ್ಟಾನನ್ನು ಕರಕೊಂಡು ನಾವೆಲ್ಲ ವಾಪಸಾ ಗ್ವೇಕು.”

" ನಾವೂ ಬರುತ್ತೇವೆ,” ಎಂದಳು ನೆಫಿಸ್.

ವಿನಂತಿಸುವ ಧ್ವನಿಯಲ್ಲಿ ಸ್ನೊಫ್ರು ಆಂದ:

“ ಅಲ್ಲಿರೋದು ಮೃಗಶಕ್ತಿ . ನಾವು ನೋಡ್ಕೋತೇವೆ. ನೀನು ಇಲ್ಲೇ ಇ ರು, ತಂಗಿ. ನೆಜಮುಟ್ ಜತೆಗಿರ್ತಳೆ.”

ಹಸುಳೆಯನ್ನೆತ್ತಿಕೊಂಡು ಒಬ್ಬಳು ಒಳಬಂದಳು. ಅಬ್ಟು ಜಾತ್ರೆಗೆ ಬಂದಿದ್ದಾಕೆ. ಆಹೊರಾ.

ನೆಫಿಸ್ ತಲೆಯಾಡಿಸಿಸಳು, ಬಾ ಎನ್ನುವಂತೆ.

ಅವಳೆಂದಳು :

"ಮೆನೆಪ್ ಟಾ ಅಣ್ಣ ವಾಪಸು ಬರೆಯೋವರೆಗೆ ನಾನೂ ನಿನ್ನಜೊತೆ ಇರ್ರ್ತೇನೆ, ಅಕ್ಕ. ಅಣ್ಣ ಬಂದ್ಮೇಲೆಯೇ ನಾವು ನಮ್ಮ ನಮ್ಮ ಊರಿಗೆ ಹೋಗ್ತೇವೆ.”

ಸ್ನೊಫ್ರುಗೆ ಆಕೆ ಅಪರಿಚಿತೆ. ಆದರೂ, ಯಾತ್ರಿಕರ ತಂಡದವಳಿರ ಬೇಕು ಎಂದು ಊಹಿಸಿಕೊಂಡು" ಆಗಲಿ, ಆಗಲಿ," ಎಂದ.

ಸ್ನೊಫ್ರು ಮತ್ತು ಸೆಬೆಕ್ಖು ಹೊರಸಾಗಿ, "ನಡೀರಿ, ಹೋಗೋణ," ಎಂದು ಜನರಿಗೆ ಹೇಳುತ್ತಿದ್ದಂತೆ, ರಾಮೆರಿಪ್ಟಾ ಎದ್ದು ನಿಂತ. ದೊಡ್ಡವರ ಜತೆ ತಾನೂ ಹೋಗಬೇಕು ಎನಿಸಿತು ಅವನಿಗೆ.

ನೆಫಿಸಳಿಗೂ ಮಗ ತಂದೆಯ ಬಳಿ ಇದ್ದರಾದೀತು ఎందు ಭಾವನೆ.

ಆದರೆ ರಾಮೆರಿಪ್ ಟಾ ರ್ಮನಸ್ಸಿನ ಆಸೆಯನ್ನು ಹತ್ತಿಕ್ಕಿ ಆಂದ:

" ನಾನು ಇಲ್ಲೇ ಇರ್ತೀನೆ, ಅಮ್ಮ. ಅಪ್ಪ ಹೇಳಿದ್ದಾನೆ.


ಮೆನೆಪ್ ಟಾನ ಜತೆಗಿದ್ದವರನ್ನೆಲ್ಲ ಹೊರಕ್ಕಟ್ಟದ ಮೇಲೆ, ಗೇಬುವಿನ ನಿರ್ದೇಶದಂತೆ ಮಹಾದ್ವಾರವನ್ನು ಮುಚ್ಚಿದರು.