ಪುಟ:Mrutyunjaya.pdf/೮೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ "ಪ್ರಾಕಾರದ ಮೇಲೆ ಕಾವಲು ನಿಲ್ಲಿ,” ಎಂದ ಆತ ತನ್ನ ಭಟರಿಗೆ.ಟೆಹುಟಯ ಭಟರೂ ಅಟ್ಟಣಿಕೆಗಳನ್ನೇರಿ. ಪ್ರಾಕಾರದಾಚೆಗೆ ಊರಿನತ್ತ ನೋಡಿದರು. ಬಕಿಲ ಪಾದರಸವಾಗಿ, ಕವಲಿನ ಮೇಲ್ವಿಚಾರಣೆ ವಹಿಸಿಕೊಂಡ, ಟೆಹುಟಿಯ ಅನುಜ್ಞೆ ಇಲ್ಲದೆಯೇ. ಕಂದಾಯದ ಅಧಿಕಾರಿಗೆ ಆಯಾಸವಾಗಿತ್ತು, ಆದರೆ ಅದನ್ನು ತೋರ್ಪಡಿಸದೆ ಅವನು ಎದು ನಿಂತ, ಗೇಬು, ಭೂಮಾಲಿಕರು, ಇಪ್ಯುವರ್ ಎಲ್ಲರೂ ಎದ್ದರು . ಮೆನೆಪ್ ಟಾನತ್ತ ನೋಡದೆಯೇ ಟೆಹುಟಿ. ಗೇಬುವನ್ನು ಕರೆದು ಕೊ೦ಡು ಮಹಡಿಯ ಮೆಟ್ಟಲುಗಳನ್ನೇರಿದ ತನ್ನವರೆಲ್ಲ ಸಣ್ಣ ಪ್ರಮಾಣದ ಗದಾಪ್ರಹಾರಕ್ಕೆ ತುತ್ತಾಗಿ ಹೊರ ಬೀಳುತ್ತಿದ್ದುದನ್ನು ದಿಟ್ಟಸುತ್ತಿದ್ದ ಮೆನೆಪ್ಟಾ ಮಹಾದ್ವಾರಕ್ಕೆ ಕೀಲಿ ಬಿದ್ದೊಡನೆ ನೀಳವಾಗಿ ಉಸಿರು ಬಿಟ್ಟ್. ಕಣ್ಣೆವೆಗಳನ್ನು ಮುಚ್ಚಿದ....ಯಾವ ಯೋಚನೆಯೂ ಸಾಧ್ಯವಾಗದಂತೆ ಮೆದುಳು ಧಿಮಿಗುಡುತ್ತಿತ್ತು. ಬೆಳಗಿನಿ೦ದ ನಡೆದುದೆಲ್ಲವನ್ನೂ ನೆನಪಿಗೆ ತಂದುಕೊಳ್ಳಲು ಯತ್ತಿಸಿದ. ಎಷ್ಟೋ ಮುಖಗಳು, ಮುಖಭಾವಗಳು ಕಣ್ಣೆದುರು ತೇಲಿದುವು. ಆಡಿದ, ಕೇಳಿದ ಮಾತು ಗಳಲ್ಲಿ ಅದೊಂದು ತುಣುಕು ಇದೊಂದು ತುಣುಕು ಮತ್ತೆ ಶಬ್ದಿಸಿ ದ೦ತಾಯಿತು. ಕಟ್ಟಿದ್ದರಲ್ಲ ಕಂಬಕ್ಕೆ? ಕ್ಕೆಗಳನ್ನು ಮೈಯನ್ನು? బವಳಿ బంದರೂ ಬೀಲಲಾರ. ನೆಲ ಕುಸಿಯುತ್ತಿದೆಯಲ್ಲ ? ಕೆಳಗೆ ಬಿದ್ದರೆ ? ಕೆಳಗೆ__ಕೆಳಗೆ.... ಇದು ಯಾವ ಲೋಕ ? (ಇಪ್ಯುವರನ ಧ್ವನಿ : " ಪ್ರಜ್ಞೆ ತಪ್ತು !” ಇನ್ನೊಂದು ಸ್ವರ : "ಸತ್ತೆ ಹೋದನೋ ?”