ಪುಟ:Mrutyunjaya.pdf/೮೭

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ ಬಿಡದಿದ್ದರೆ ಜನ ತಣ್ಣಗಾಗುತ್ತಾರೆ ನಾಳೆ ಬೆಳಗಿನಿಂದ ವಸೂಲಿ ಆರಂಭಿಸ ಬಹುದು. ಎರಡು ದಿನಗಳಲ್ಲೇ ಮುಖ್ಯ ಪಟ್ಟಣದಲ್ಲಿ ವಸೂಲಿ ಮುಗಿಸಿ ತಾನು ಹೊರಡಬಹುದು. ಗ್ರಾಮಾಂತರ ಪ್ರದೇಶದಲ್ಲಿ ಆ ಕಾರ್ಯ ಆಮೇಲೆ. ಬೆನ್ನ ಹಿಂದೆ ಗೇಬುವಿನ ಧ್ವನಿ . ಭೋಜನ ಸಿದ್ಧವಾಗಿದೆ !” ಭುಜ ಕುಪ್ಪಳಿಸಿ, ತಿರುಗಿ ನೋಡದೆಯೇ, ಟೆಹುಟಿ ಅಂದ ; * ಉಪಹಾರ ಸಾಕು.”ನಿಮ್ಮಪ್ಪ ... ಭೂಮಾಲಿಕರನ್ನೂ ಮೇಲಕ್ಕೆ ಕರೀಲೇನು ?” ಹುಂ ಚಾಕರಿಗೆ ನಿರ್ದೆಶನಗಳನ್ನು ಗೇಬು ನಿರ್ಗಮಿಸಿದ ಮಹಡಿಯ ಹಜಾರದಿಂದ ಸೇವಕರ ಓಡಾಟದ ಸದ್ದು ಕೇಳಿಸಿತು. ಮೆತ್ತಗೆ ಮೆತ್ತಗೆ ಎಂದಿತು ಮೇಲ್ವಿಚಾರಣೆಯ ಧ್ವನಿ. ಟಿಹುಟಿ ಯೋಚಿಸಿದ: ಇದಿರಾಡುವುದು ಜನರಿಗೆ ರೊಢಿಯಾದರೆ ಇನ್ನು ಮುಂದೆ ಕಂದಾಯ ವಸೂಲಿ ಕಷ್ಟವಾಗುತ್ತದೆ. ನಾಲಾರು ಭಟರಿಂದ ಆ ಕೆಲಸ ಸಾಗದು. ಪ್ರತಿ ಪ್ರಾಂತದಲ್ಲಾ ಪ್ರತ್ಯೇಕ ಪಡೆಯೇ ಬೇಕು. ಈ ಪ್ರಾಂತಪಾಲನ ಕಾವಲುಭಟರು ನಿಶ್ಯಸ್ತ್ರರಾಗಿ ಇರುತ್ತಾರಲ್ಲ.ಆಶ್ಚರ್ಯ ! ಒಳಗೆ ಬರಬೇಕು –ಪುನಃ ಗೇಬುವಿನ ಧ್ವನಿ. ಬೀದಿಯ ಕಡೆಗೆ ಮತ್ತೂಮ್ಮೆ ನೋಡಿ ಟಿಹುಟಿ ಒಳ ಬಂದ ಎರಡು ದೊಡ್ಡ ಪೀಠಗಳು.ಆ ಕಡೆಗೊ ಈ ಕಡೆಗೂ ಅರ್ಧ ವೃತ್ತಾಕಾರದ ಇತರ ಪೀಠಗಳು. ದೊಡ್ಡ ಆಸನಗಳ ಎದುರು, ತಗು ಪೀಠಗಳ ಮೇಲೆ, ಪಾನ ಪಾತ್ರೆಗಳು. ಕುಳಿತುಕೊಳ್ಳುವಂತೆ ಭೂಮಾಲಿಕರಿಗೆ ಟಿಹುಟಿ ಸನ್ನೆಮಾಡಿದ-ತಾನು ಆಸೀನನಾಗುತ್ತ. ನಡುವಸ್ತ್ರವನ್ನಷ್ಟೇ ಉಟ್ಟಿದ್ದ ದಾಸಿಯರು ಪುಟ್ಟ ಬಟ್ಟಲುಗಳು ತಂದರು. ಎಲ್ಲರಿಗೂ ದಾಕ್ಷಿಸುರೆ ಬೇಯಿಸಿದ ಹಂದಿ ಮಾಂಸದ ತುಣುಕು ಗಳು. ಮೆದ್ದು ರೊಟ್ಟಿ ಆದಾದ ಮೇಲೆ ಪಿಷ್ಟಗಡ್ಡೆಗಳಿಂದ ಮಾಡಿದ ಸಿಹಿ.