ಪುಟ:Mrutyunjaya.pdf/೮೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

ಮೃತ್ಯುಂಜಯ " ಹಾಗೋ ? ಎರಡು ಕಾಲಿನ ಪ್ರಾಣಿಗಳು ನಮ್ಮ ಕಡೆ ನುಗ್ಗಿ
ದಾಗ ಆ ಶಸ್ತ್ರಗಳನ್ನು ಬಳಸಬಹುದಲ್ಲ ? ”
" ಈ ಊರಿನ ಜನ ನಮ್ಮ ಮೇಲೆ ಏರಿಬರಬಹುದು ಅಂತೀರಾ ?”
" ಇವರು ನಿಮ್ಮ ಜನ, ನೀವು ಹೇಳ್ಬೇಕು,”
ಗೇಬು ಉಗುಳು ನುಂಗಿದ.
" ಜನ ಕೆರಳಿದ್ದಾರೆ.” ಎಂದ.
“ ನಾನು ಕೆರಳಿಸಿದೆನೆ ? ಜನರಿಗೆ ಸಮಾಧಾನವಾಗಲಿ ಅಂತ ಆ
ಮುಖಂಡನನ್ನು ಬಿಟ್ಟು ಬಿಡ್ಲೇನು?”
'ಕಾವಲು ಭಟರಿಗೆ ಬಿಲ್ಲು ಬಾಣ ಕೊಡ್ತೇನೆ. ಬಹಳ ಇಲ್ಲ. ಇರೋದನ್ನೆಲ್ಲಾ ತಗೊಳ್ಳಿ.”
" ನಿಮ್ಮವರಿಗಲ್ಲ. ನಮ್ಮ ಭಟರಿಗೆ ಕೊಡಿ. ಬಕಿಲನ ವಶ ಒಪ್ಪಿಸಿ.
(ಮೆಟ್ಟಿಲುಗಳತ್ತ ನೋಡಿ) ಬಕಿಲ !”
ಬಕಿಲ ದಡದಡನೆ ಏರಿ ಬಂದ. ಟೆಹುಟಿ ಆಜ್ಞಾಪಿಸಿದ :
“ಶಸ್ತ್ರಾಗಾರದಲ್ಲಿ ಇರೋದನ್ನೆಲ್ಲ ವಶಕ್ಕೆ ತಗೋ.”
"ಅಪ್ಪಣೆ.”
ಬಕಿಲ ಇಳಿದು ಹೋಗುತ್ತಿದ್ದಂತೆ ಟೆಹುಟ ಅಂದ :
" ಇಲ್ಲಿ ನಮ್ಮ ಪ್ರಾಣ ರಕ್ಷಣೆಗೂ ವ್ಯವಸ್ಥೆ ಇಲ್ಲ.”
ಗೇಬುಗೆ ಸಿಟ್ಟು ಬಂತು. ಅದನ್ನು ನುಂಗಿಕೊಳ್ಳಲೆತ್ನಿಸುತ್ತ ಅವನು
ನುಡಿದ :
" ಟೆಹುಟಿ, ನಿಮ್ಮ ಪ್ರಾಣಕ್ಕೆ ನಾನು ಹೊಣೆ.”
"ಹೊಣೆಗಾರರೇ, ಹೊರಗೆ ಈಗ ಏನಾಗ್ತಿದೆ ? ಹೇಳಿ.”
"ಗೂಢಚಾರರನ್ನು ಕಳಿಸ್ತೇನೆ.”
ಇನ್ನು ಕಳಿಸಬೇಕು ಅಲ್ಲ ?”
ಗೇಬು ಕೈ ತಟ್ಟಿದ. ಕಾಣಿಸಿಕೊಂಡ ಸೇವಕನಿಗೆ,
" ಎಲ್ಲಿ ಬೇಹಿನವರು ? ” ಎಂದು ಕೇಳಿದ.
ಅವನು ಉತ್ತರಿಸಿದ :
" ಎಲ್ಲರೂ ಕೆಳಗೆ ಊಟ ಮಾಡ್ತಿದ್ದಾರೆ.”