ಪುಟ:Mrutyunjaya.pdf/೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

X

ಫೇರೋ ಎಂದು ಕರೆದರು. ಮುಂದೆ ಅದೇ ಬಳಕೆಗೆ ಬಂತು.
ಪೇಪಿ : ದೀರ್ಘಕಾಲ ಆಳಿದ ಈ ಪೆರೋ ಆ ಹೆಸರಿನ ಎರಡನೆಯ ಅರಸ.
ಫಿಲೇ : ನೀಲ ನದಿಯ ನಡುಗಡ್ಡೆ, ಪವಿತ್ರ ಸ್ಥಳ. ಇಲ್ಲಿಂದ ನದಿ ಐಗುಪ್ತದ
ಬಯಲಿಗೆ ಧುಮುಕುತ್ತದೆ.

ಬಕಿಲ : ರಾಜಭಟರ ಒಬ್ಬ ಮುಖ್ಯಸ್ಥ.
ಬಟಾ : ನೀರಾನೆಪ್ರಾಂತದ ದೋಣಿಕಾರ.
ಬಾಸ್ಟ್ : ಪವಿತ್ರ ಬೆಕ್ಕು ದೇವತೆ.
ಬ್ಯಾಬಿಲನ್ : ವಿದೇಶೀ ನಗರ.
ಬೆಕ್ : ನೀರಾನೆಪ್ರಾಂತದ ಯೋಧಪಡೆಯ 'ಐವತ್ತರ ಶ್ರೇಷ್ಠ' ; ಜನ
ನಾಯಕ ಮೆನಪ್ ಟಾನ ಅಂಗರಕ್ಷಕ.

ಬೆಸ್ : ಪಿಶಾಚಿಗಳನ್ನು ಓಡಿಸುವ ದೇವತೆ ; ಸಂಗೀತ ನೃತ್ಯಗಳ ದೇವತೆ
ಕೂಡಾ.

ಮಹಾ ಹಸುರು ಸಮುದ್ರ : ಭೂಮಧ್ಯ ಸಮುದ್ರ.
ಮಿನೊ : ಭೂಮಧ್ಯ ಸಮುದ್ರದ ಒಂದು ದ್ವೀಪ.
ಮೆಂಕೋರಾ : ಇತಿಹಾಸಕಾಲದ ಪೆರೋ.
ಮೆಂಫಿಸ್ : ಐಗುಪ್ತದ ರಾಜಧಾನಿ.
ಮೆನ್ನ : ಬಂಡಾಯಗಾರ ಯುವಕ ದೇವಸೇವಕ.
ಮೆನೆಪ್‍ಟಾ : ನೀರಾನೆಪ್ರಾಂತದ ಜನನಾಯಕ.
ಮೆನೆಸ್ : ಐಗುಪ್ತದ ಉತ್ತರ ದಕ್ಷಿಣ ಭಾಗಗಳನ್ನು ಒಗ್ಗೂಡಿಸಿದ (ಇತಿಹಾಸ
ಕಾಲಾವಧಿಯ) ಮೊದಲ ಪೆರೋ ; ನಾರ್ಮೆರ್ ಎಂಬ ಹೆಸರೂ
ಇದೆ ; ಮೆಂಫಿಸ್ ನಗರವನ್ನು ಕಟ್ಟಿಸಿದವನು.
ಮೆರಿಕರಾ : ಆಗಿಹೋದ ಒಬ್ಬ ಪೆರೋ.

ರಾ : ಸೂರ್ಯ ; ರಾ, ಪ್‍ಟಾ, ಅಮನ್‍__ಐಗುಪ್ತದ ಮೂವರು ಪರಮ
ಶ್ರೇಷ್ಠ ದೇವರು.