ಪುಟ:Mrutyunjaya.pdf/೯೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

೭೮ ಮೃತ್ರ್ಯು೦ಜಯ


     ಮೆನೆಪ್‍ಟಾನ  ಎವೆಗಳು ತುಸು  ತೆರೆದುವು. ಆದರೆ ತುಟಿಗಳು ಪರಸ್ಪರ ಅಂಟಿಕೊಂಡೇ ಇದ್ದವು.
     ಗೇಬು ತಲೆಯಲುಗಿಸಿ ಇಪ್ಯುವರ್ ನತ್ತ ಹೊರಳಿದ :
     “ ಹೋಗು ಉಂಡು ಬಾ. (ಭಟರತ್ತ ಬೊಟ್ಟುಮಾಡಿ) ಅವರಿಗೂ ಹೇಳು. ಗೇಬು ನೌಕರರನ್ನು ಉಪವಾಸ ಕೆಡವಿದ  ಅನ್ನೋ ದೂರು ಬೇಡ."
     " ನೀವು ವಿಶ್ರಾ೦ತಿ ತಗೊಳ್ಳಿ.”
     " ಹು೦. ಬೇಹಿನವರು ಬ೦ದ ಕೂಡಲೆ ಎಬ್ಬಿಸು.”
     ಒಳಗಿನ ಕೊಠಡಿಗಳತ್ತ ಹೊರಟ ಗೇಬುವನ್ನು ಸಿನ್ಯುಹೆ ಸಮೀಪಿಸಿದ.
     "ನನ್ನ ಹೆ೦ಡತಿ...."
     “ಗೊತ್ತು. (ಕ್ಷಣ ಯೋಚಿಸಿ) ಮನೆಗೆ ಹೋಗಿ ಸ್ವಲ್ಪ ಹೊತ್ತು  ಬಿಟ್ಕೊ೦ಡು ಅರ್ಚಕರು ಬರಲಿ . ಇನ್ನೊ೦ದು ಸರ್ತಿ ಟೆಹುಟಿ ಕೈಯಲ್ಲಿ ಬೈಸ್ಕೊಳ್ಳೋದು ಯಾಕೆ ?"
      ಸಿನ್ಯುಹೆ ವ೦ದಿಸಿ, ಹೊರಟ.
      ಇತರ ಭೂಮಾಲಿಕರು ಅಂಗಣದಲ್ಲಿ ತಾವರೆ ಕೊಳದತ್ತ, ಪೊದೆ ಗಿಡಗಳ ನೆರಳಿನತ್ತ ನಡೆದರು. ರಾ ಪಶ್ಚಿಮದ ಕಡೆಗೆ ತಿರುಗಿದ೦ತೆ ಪ್ರಾಕಾರದ ನೆರಳು ಅಂಗಳವನ್ನು ಆವರಿಸತೊಡಗಿತ್ತು, ಅದು ಹಿತಕರವಾಗಿತ್ತು.
      ಉಣ್ಣ ವುದು ತನ್ನಿಂದಾಗದು ಎ೦ದು ತೋರಿತು ಇಪ್ಯುವರ್. ಮನಸ್ಸು ಖಿನ್ನವಾಗಿತ್ತು. ಯಾವುದಾದರೂ ಮೂಲೆಯಲ್ಲಿ ಕುಳಿತು ಮನ ದಣಿಯೆ ಅಳಬೇಕೆನಿಸಿತು. ಆದರೆ, ರಾಜಗೃಹದ ಉದ್ಯೋಗಿಯಾದ ತನಗೆ ಅದಕ್ಕೆಲ್ಲಿ ಬಿಡುವು , ಸ್ವಾತ೦ತ್ರ್ಯ? ತಾನು ಅಳುವ೦ತಿಲ್ಲ _ ಅ೦ದುಕೊ೦ಡ.
      (ಮೆನೆಪ್‍ಟಾ ಇಪ್ಯುವರ್‍ಗೆ  ಬಹಳ ಪರಿಚಿತನಲ್ಲ, ತೀರಾ ಅಪರಿಚಿತನೂ అಲ್ಲ. ತಿ೦ಗಳ ಹಿ೦ದೆ ತನ್ನ ಮನೆಗೆ ಆತ ಬ೦ದು ಕೇಳಿದ್ದ :
      “ ಮಗನಿಗೆ ಓದು ಬರಹ ಹೇಳಿ ಕೊಡೋದು ಸಾಧ್ಯವಾ ?"
       ದೇವಮಂದಿರದಲ್ಲಿ ತರಗತಿ ಇರಲಿಲ್ಲ, ಅರ್ಚಕನ ಸಮ್ಮತಿ ಪಡೆದು