ಪುಟ:Mrutyunjaya.pdf/೯೨

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿದೆ

 ಮೃತ್ಯು೦ಜಯ ೭೯

ಇಪ್ಯುವರ್ ಪ್ರಾ೦ತಪಾಲನ ಮಕ್ಕಳಿಗೆ ರಾಜ ಗೃಹದಲ್ಲೇ ಅಕ್ಷರಾಭ್ಯಾಸ
ಮಾಡಿಸುತ್ತಿದ್ದ.
ತನ್ನ ಮಕ್ಕಳಿಗೂ ವಿದ್ಯಾಭ್ಯಾಸ ಕೊಡಿಸಬೇಕೆ೦ದು ಹಿರಿಯ ಭೂಮಾ
ಲಿಕ ನುಟ್‍ಮೋಸ್ ಬಯಸಿದ್ದ. ಪಾಠ ಹೇಳಿಕೊಡಲು ಅವನ ಮನೆಗೆ
ಇಪ್ಯುವರ್ ಹೋದುದು ಸಂಜೆಯ ಹೊತ್ತು. ಎರಡು ದಿನ ಹುಡುಗರು ಕೈಗೆ
ಸಿಕ್ಕಿದರು. ಆಮೇಲೆ, ಹೋದುದಷ್ಟೇ ಬ೦ತು. ನುಟ್‍ಮೋಸ್‍ನ ಹೆ೦ಡತಿ,
“ಮಕ್ಕಳು ಲಿಪಿ ಬೇಡ ಅಂತವೆ,” ಎಂದಳು. ಅಲ್ಲಿಗೆ ಅದು ಮುಗಿದಿತ್ತು.
ಮೆನೆಪ್‍ಟಾ ಕೇಳಿದಾಗ, 'ವಿಚಿತ್ರ ಮನುಷ್ಯ. ಇದೇನು ಹುಚ್ಚು
ಇವನಿಗೆ?'ಎನಿಸಿತ್ತು. ನುಟ್‌ಮೋಸ್‍ನ ಮನೆಯಲ್ಲಿ ಆದುದನ್ನು ತಿಳಿಸಿ,
" ಓದು ಬರಹ ಕಲಿಯೋದು ಸುಲಭ ಅಲ್ಲ," ಎ೦ದ.
“ಹುಡುಗ ಬಹಳ ಆಸೆ ಪಡ್ತಾನೆ.”
“ಸರಿಯಪ್ಪ. ಹೇಳ್ಕೊಡ್ತೇನೆ. ಸಾಯಂಕಾಲ ನಾನು ಮನೆಗೆ ಬ೦ದ್ಮೇಲೆ.
ಯಾವಾಗಿನಿ೦ದ ಕಳಿಸ್ತೀಯಾ?"
"ಅಬ್ಟು ಯಾತ್ರೆಗೆ ಹೋಗಿ ಬರುತ್ತೇವೆ.”
“ಒಳ್ಳೇದು,ಒಳ್ಳೇದು. ಆಮೇಲೆಯೇ ಶುರು ಮಾಡೋಣ.”)
ಮೆನೆಪ್‍ಟಾನನ್ನು ಕುರಿತ ನೆನಪಿನಿ೦ದ ಇಪ್ಯುವರ್ ಗೆ ಒ೦ದು ಬಗೆಯ
ಸಮಾಧಾನ. ಅಸಾಧಾರಣ ಮನುಷ್ಯ ಈ ಮನೆಪ್‍ಟಾ. ಗೊತ್ತೇ ಇರಲಿಲ್ಲ.
ಹೊಡೆದಾಗಲೂ ಬಿಗಿದು ಕಟ್ಟಿದಾಗಲೂ ಮಿಸುಕಲಿಲ್ಲವಲ್ಲ?ಅದ್ಭುತ!
ಅದ್ಭುತ !
ಇಷ್ಟು ಬಲ್ಲವನು ಮಗನಿಗೆ ಓದು ಬರಹ ಕಲಿಸಲು ಯೋಚಿಸಿದ್ದು
ಸಹಜವೇ.
ಒಳ್ಳೆಯವನು, ಪಾಪ. ಬಿಡುಗಡೆ ಯಾವಾಗಲೋ? ಒ೦ದಿಷ್ಟು ಆಹಾರ
ಕೊಡಬಹುದಾಗಿತ್ತು. ಕೈಗಳನ್ನು ಕಟ್ಟಿರುವಾಗ ತಿನ್ನುವುದು ಹೇಗೆ?
ಪಾನೀಯ ಕುಡಿಯಬಹುದು. ಸುಲಭ. ಆದರೆ ಕುಡಿಸುವವರು ಯಾರು?
ಸೇವಕರು ಆ ಕೆಲಸ ಮಾಡಲಾರರು, ತಾನು ?........
ಸಭಾಂಗಣದ ಮೂಲೆಯಲ್ಲಿ ನೆಲದ ಮೇಲೆ ಗೋಡೆಗೊರಗಿ ಕುಳಿತಿದ್ದ
ಒಬ್ಬ ಸೇವಕನನ್ನು ಇಪ್ಯುವರ್ ಕರೆದ.