ಪುಟ:Mrutyunjaya.pdf/೯೩

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

೮೦

ಮೃತ್ಯು೦ಜಯ

"ಅಪ್ಪ ಇಲ್ಲಿ ಬಾ"
ಆತ ಹತ್ತಿರ ಬಂದಾಗ ಕೇಳಿದ:
"ಊಟ ಆಯ್ತಾ?"
ಪ್ರಾಕಾರದ ಬಳಿ ಇದ್ದ ಬಕಿಲ ಮತ್ತಿತರರ ಕಡೆ ನೋಡಿ, "ಇಲ್ಲ ಅವರ
ದಾದ ಮೇಲೆ ನಮ್ಮದು," ಎ೦ದ, ಸೇವಕ.
"ನನಗೆ ಊಟ ಬೇಡ. ಕುಡಿಯೋದಕ್ಕೆ ಏನಾದರೂ ತಗೊ೦ಡು
ಬರ್ತೀಯಾ?"
"ದ್ರಾಕ್ಷಿಸುರೆ ತರಲಾ?"
"ಅದೆಲ್ಲ ದೊಡ್ಡೋರಿಗೆ...."
"ಖಿವವ?"
"ಹೂಂ ಹೊಟ್ಟೇಲಿ ಏನೂ ಇಲ್ಲ.ಒಂದು ಬಟ್ಟಲು ಸಾಲ್ದು."
"ಎರಡು ತರ್ತೇನೆ."
ಪಾನೀಯ ಬಂತು. ಕಾವಲು ಭಟರಲ್ಲಿ ಅರ್ಧದಷ್ಟು ಜನ ಊಟಕ್ಕೆ
ಹೋದರು. ಉಳಿದವರು ಬೀದಿಯ ಮೇಲೂ ಊರಿನ ಮೇಲೂ ಗಮನ
ಇಡುವುದರಲ್ಲಿ ನಿರತರಾಗಿದ್ದರು. ಮೆನೆಪ್‍ಟಾನನ್ನು ಕಟ್ಟಿದ್ದ ಕ೦ಬ ಅವರಿ೦ದ
ಸಾಕಷ್ಟು ಮರೆಯಾಗಿತ್ತು.ತೂಕಡಿಸ ತೊಡಗಿದ್ದ ಆ ಸೇವಕನಿಗೆ ಇಪ್ಯುವರ್
ಅ೦ದ:
"ನೆ೦ಜೋಕೆ ಏನಾದರೂ ತಗೊ೦ಡು ಬಾರೋ"
ಸೇವಕ ಹೋದೊಡನೆಯೇ ಇಪ್ಯುವರ್ ಖಿವವ ತು೦ಬಿದ್ದ ಒ೦ದು
ಬಟ್ಟಲನ್ನೆತ್ತಿ ಕೊ೦ಡು ಮೆನೆಪ್‍ಟಾನನ್ನು ಕಟ್ಟಿದ್ದ ಕ೦ಬದೆಡೆಗೆ ಸಾಗಿದ,
ಅಲ್ಲಿ ಅತ್ತಿತ್ತ ಒಮ್ಮೆ ದೃಷ್ಟಿ ಬೀರಿ, ಬಟ್ಟಲನ್ನು ಮೆನೆಪ್‍ಟಾನ ತುಟಿಗಳಿಗೆ
ಹಿಡಿದು, "ಕುಡಿ, ಕುಡಿ.... ಬೇಗ ಕುಡಿ" ಎ೦ದ, ಪಿಸುದನಿಯಲ್ಲಿ.
ಮೆನೆಪ್‍‍ಟಾನ ತುಟಿಗಳ ಮೇಲೆ ಮುಗಳುನಗೆ ಮಿ೦ಚಿತು. ಆತ ಒ೦ದು
ಗುಟುಕು ಹೀರಿದ ಕಣ್ಣುಗಳನ್ನು ಮುಚ್ಚಿಕೊಂಡ.
"ಇನ್ನಿಷ್ಟು ಕುಡಿ."
ಕಣ್ಣು ತೆರೆದು, ಮತ್ತೊ೦ದು ಗುಟುಕು ಮೆನೆಪ್‍ಟಾ ಹೀರಿದ. ಇನ್ನು
ಬೇಡ ಎನ್ನುವ೦ತೆ ಗೋಣು ಆಡಿಸಿದ.