ಪುಟ:Mrutyunjaya.pdf/೯೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪ್ರಕಟಿಸಲಾಗಿದೆ

ಮೃತ್ಯುಂಜಯ

೮೫

ಜನರೆಲ್ಲ ಮುಖ್ಯ ಬೀದಿಯಲ್ಲಿ ನೆರೆದು ರಾಜಗೃಹದ ಕಡೆಗೆ ಹೊರಟಿದ್ದಾರೆ...."
ಟೆಹುಟಿಯೆಂದ :
"ಕೈಗಳಲ್ಲಿ ತಾಳೆಕೊರಡು, ಬಡಿಗೆ ? ಹೆಂಗಸರು ಮಕ್ಕಳು ?"
"ಬರಿಗೈ. ಗಂಡಸರು ಮಾತ್ರ."
"ಗೇಬು ! ನಮ್ಮನ್ನು ಈ ಹುಚ್ಚು ಜನ ಸೆರೆಹಿಡೀತಾರಾ ?
ಹಹ್ಹಹ್ಹ !"
"ಬಡಪಾಯಿಗಳು,"ಎಂದ ಗೇಬು.
ಅಪೆಟ್ ಮೆಲುದನಿಯಲ್ಲಿ ಹೇಳಿದ  :
"ನನ್ನ ಅಲ್ಪಮತಿಗೆ ಹೀಗೆ ತೋರ್ತದೆ. ಜನ ಹುಲ್ಲಿನ ಬಣವೆ ಇದ್ದ
ಹಾಗೆ. ಮೆತ್ತಗಿದ್ದರೆ ಎತ್ತು ದನ ಕರುಗಳಿಗೆ ಆಹಾರ. ಒಣಗಿದರೆ ಮತಿಗೆಟ್ಟ
ಒಬ್ಬನ ಒಂದು ಕೊಳ್ಳಿ ಸಾಕು. ಬೆಂಕಿ___ಬೂದಿ."
ಟೆಹುಟಿ ಹುಬ್ಬು ಕುಣಿಸಿದ.
"ಅಲ್ಪಮತಿಯಲ್ಲ ಅಪೆಟ್. ನೀವು ಬಲು ಜಾಣ."
"ಇದು ನನ್ನ ಯೋಗ್ಯತೆಗೆ ಮೀರಿದ ಪ್ರಶಂಸೆ, ಮಹಾಶಯ."
"ಠಕ್ಕು ವಿನಯ ಬೇಡ. ಈಗ ಇಲ್ಲಿಗೆ ಸಾಗಿಬರ್ತಿರೋ ಬಣವೇನ
ಮೆತ್ತಗೆ ಮಾಡಿ ನೋಡೋಣ."
ಅಪೆಟ್ ಏನನ್ನೂ ಹೇಳಲಿಲ್ಲ. ಟೆಹುಟಿಯೇ ಅಂದ :
"ಹೆದರಿದಿರಾ ? ಅದು ಅರ್ಥವಾಗ್ಲಿಲ್ಲ ಅಂತ....ಇಲ್ಲಿ ಕೇಳಿ ಅಪೆಟ್.
ಇದು ನಿಮ್ಮ ನಿಷ್ಠೆಯ ಪರೀಕ್ಷೆ. ದೇವರ ಹೆಸರಿನಲ್ಲಿ, ನನ್ನ ಪರವಾಗಿ, ಈ
ಪ್ರಾಂತಪಾಲರ ಪರವಾಗಿ, ಆ ಜನರಿಗೆ ಬುದ್ಧಿಮಾತು ಹೇಳಿ. ಅದು
ಪೆರೋ ಮಹಾಪ್ರಭುವಿಗೆ ಇಷ್ಟವಾಗೋ ಕೆಲಸ. ದೇವರು ಮೆಚ್ಚೋ
ನಿಲುವು."
"ಆಗಲಿ....."
ಮೊದಲು ಅಸ್ಪಷ್ಟ ಸ್ವರಗಳು. ಹತ್ತಿರ ಹತ್ತಿರ ಬರುತ್ತ ಅವು ಬಲ
ವಾದುವು.
ಗೇಬು ಮುಖಮಂಟಪಕ್ಕೆ ಹೋಗಿ, ಮೇಲೇಳುತ್ತಿದ್ದ ಧೂಳನ್ನು