ವಿಷಯಕ್ಕೆ ಹೋಗು

ಪುಟ:Mysore-University-Encyclopaedia-Vol-1-Part-1.pdf/೧

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.
ಮೈಸೂರು ವಿಶ್ವವಿದ್ಯಾನಿಲಯ
ಕನ್ನಡ ವಿಶ್ವಕೋಶ


ಸಂಪುಟ ಒಂದು

'ಅ' -- ಈ ಕುರಿತಾದ ಮಾಹಿತಿಯನ್ನು ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ/ಅ ಇಲ್ಲಿಗೆ ವರ್ಗಾಯಿಸಲಾಗಿದೆ.


ಅಂಕಗಣಿತ :

1. ನಾಗರಿಕತೆಯ ಬೆಳವಣಿಗೆಗೆ ಅನಾದಿಕಾಲದಿಂದಲೂ ಅಂಕಗಣಿತ ಅತ್ಯಾವಶ್ಯಕವಾಗಿದ್ದಿತೆಂಬುದು ಸ್ಪಷ್ಟವಾಗಿಯೇ ಇದೆ. ಎಲ್ಲಾ ಜನಾಂಗಗಳ ಪೂರ್ವಿಕರು ಇದಕ್ಕಾಗಿ ಬಹಳ ಶ್ರಮಿಸಿರಬೇಕು. ಅಂಕಗಣಿತದ ತಳಹದಿಯಾಗಿ, ಪದಾರ್ಥಗಳನ್ನು ಎಣಿಸುವ ವಿಧಾನವಾಗಿ, ಸಂಖ್ಯೆಗಳು ಬೆ¼ದೆ. ಬಂದು ಅವುಗಳನ್ನು ಕೂಡುವ, ಕಳೆಯುವ, ಗುಣಿಸುವ ಇತ್ಯಾದಿ ಪರಿಕರ್ಮಗಳು ಹುಟ್ಟಿಕೊಂಡವು . ಈಗ ವಿದ್ಯಾಬ್ಯಾಸದ ಆರಂಭದಲ್ಲಿಯೇ ಪ್ರಾಥಮಿಕ ಶಾಲೆಗೆ ಹೋಗುವ ಬಾಲಕ ಬಾಲಿಕೆಯರು ಇವನ್ನೆಲ್ಲಾ ಕಲಿಯುವುದರಿಂದ ಈ ಶಾಸ್ತ್ರವು ಕೇವಲ ಸ್ವಾಬಾವಿಕವೆಂದು ಸುಲಭವೆಂದು ಭಾವನೆ ಬರಬಹುದು. ಆದರೆ ಪ್ರಾಚೀನ ಕಾಲದಲ್ಲಿ ಸೂಕ್ತವಾದ ಒಂದು ಸಂಖ್ಯಾಕ್ರಮವಿಲ್ಲದೆ ಅನೇಕ ಜನಾಂಗಗಳು ಬಹಳ ಕಷ್ಟಪಟ್ಟುವು ಎಂಬುದು ಚಾರಿತ್ರಿಕ ವಿಷಯ. ಪ್ರಾಚೀನ ಗ್ರೀಕರು I, II, III, IV, V, .... X, L, C ಮುಂತಾದ ಚಿಹ್ನೆಗಳಿಂದಲೇ ಸಂಕಲನ ಗುಣಾಕಾರಗಳನ್ನು ಮಾಡುತ್ತಿದ್ದರು ಎಂದೂ ಅದರ ದೆಸೆಯಿಂದ ಅವರು ಕೆಲವು ಗಣಿತ ಶಾಖೆಗಳಲ್ಲಿ ಬಹಳ ಹಿಂದೆ ಬಿದ್ದಿದ್ದರು ಎಂದೂ ತಿಳಿದುಬಂದಿದೆ. ಸೊನ್ನೆಯ ಕಲ್ಪನೆಯೂ ಅದರ ಚಿಹ್ನೆಯೂ ಅದರ ಉಪಯೋಗವೂ ಸ್ವಲ್ಪ ತಡವಾಗಿಯೇ ಬಂದವು. ಈಗ ಎಲ್ಲೆಲ್ಲಿಯೂ ಬಳಕೆಯಲ್ಲಿರುವ ಸಂಖ್ಯಾಕ್ರಮಕ್ಕೆ ದಾಶಮಿಕ ಸಂಖ್ಯಾಕ್ರಮ ಎಂದು ಹೆ¸ರು. ಯಾವ ಪೂರ್ಣಾಂಕ ಸಂಖ್ಯೆಯನ್ನೇ ಆಗಲಿ ಹತ್ತು ಚಿಹ್ನೆಗಳಿಂದ ಸ್ಪಷ್ಟಪಡಿಸಲಾಗುತದೆ. ಸೊನ್ನೆ, ಒಂದು, ಎರ‌ಡು. . . . .ಒಂಬತ್ತು ಎಂಬ ಹೆಸರುಗಳುಳ್ಳ ಈ ಚಿಹ್ನೆಗಳು ಇದೇ ಹೆಸರಿನ ಸಂಖ್ಯೆಗಳನ್ನು ಸೂಚಿಸುತ್ತವೆ. ಒಂದೇ ಚಿಹ್ನೆಯು ಅದರ ಸ್ಥಾನಕ್ಕನುಗುಣವಾಗಿ ಬೆಲೆಯಲ್ಲಿ ಮಾರ್ಪಾಡು ಹೊಂದುವುದೇ ಈ ಕ್ರಮದಲ್ಲಿರುವ ತತ್ವ. 9999 ಎಂಬ ಸಂಖ್ಯೆಯಲ್ಲಿ 9 ಎಂಬ ಚಿಹ್ನೆಯು ಬಲದಿಂದ ಎಡಕ್ಕೆ ಕ್ರಮವಾಗಿ