ಪುಟ:Mysore-University-Encyclopaedia-Vol-1-Part-1.pdf/೧೦೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂತಾರಾಷ್ಟ್ರೀಯ ನ್ಯಾಯಲಯ-ಅಂತಾರಾಷ್ಟ್ರೀಯ ಪುನಾರಚನೆ ಮತ್ತು ಅಭಿವೃದ್ಧಿ ಬ್ಯಾಂಕು ಹೆಸರಿನಲ್ಲಿ ಉಳಿದ ನಾಣ್ಯ ರೂಪದ ಹಣವನ್ನು ಸದಸ್ಯ ರಾಷ್ಟೃಗಳ ಕೇಂದ್ರ ಬ್ಯಾಂಕುಗಲಳಲ್ಲಿ ಇಟ್ಟಿರಲಾಗಿದ್ದು ಅವಶ್ಯವಿದ್ದಾಗ ಆಯಾ ರಾಷ್ಟ್ರಗಳು ತಮ್ಮ ಬ್ಯಾಂಕುಗಲಳಿನ್ದಲೇ ಹಣ ಪದೆಯುವ ಅವಕಾಶವಿದೆ. ಬ್ರೆಟನ್ ವೂಡ್ಸ್ ಸಮಾವೇಶದಲ್ಲಿ ಪ್ರತಿನಿಧಿಸಿದ ಮೂಲ ಸದಸ್ಯ ರಾಷ್ಟ್ರಗಲ್ಲಿ ಭಾರತವೂ ಒಂದು. ಇದು ಈ ಧನಸಂಸ್ಥೆಯಿಂದ ಅತ್ಯಂತ ಹೆಚ್ಚಿನ ಪ್ರಮಾಣದ ನೆರವನ್ನು ಪಡೆದಿರುವ 5ನೆ ರಾಷ್ತಟ್ರವಾಗಿದ್ದು, ಕಾರ್ಯನಿರ್ವಾಹಕ ನಿರ್ದೇಶಕ ಮಂಡಳಿಗೆ ಒಬ್ಬ ನಿರ್ದೇಶಕನನ್ನು ಗೊತ್ತುಮಾಡುವ ಹಕ್ಕನ್ನು ಪಡ್ದಿದೆ. ಈ ಧನ ಸಂಸ್ಥೆಯ ಉದ್ದೇಶಗಳನ್ನು ಮತ್ತು ಕಾರ್ಯಗಳಿಗೆ ಭಾರತ ಇಟ್ಟಿರುವ ದಾಖಲೆ ಉತ್ತಮವಾಗಿದೆ. ಈ ಧನ ಸಂಸ್ಥೆ ನೀದುವ ಸಾಲದ ಅವಕಾಶಗಳನ್ನು ಭಾರತ ಚನ್ನಾಗಿ ಬಳಸಿಕೊಂಡಿದೆ. ಇದುವರೆಗೆ ಧನ ಸಂಸ್ಥೆಯಿಂದ ಹೆಚ್ಚಿಗೆ ಸಹಾಯ ಪಡೆದಿರುವ ದೇಶಗಳಲ್ಲಿ ಬ್ರಿಟನ್ ಮೊದಲನೆಯದಾದರೆ, ಭಾರತವು ಎರಡನೆಯದಾಗಿತ್ತು. 1965ರ ಅಕ್ಟೋಬರ್ ಅಂತ್ಯದ ಹೊತ್ತಿಗೆ ಭಾರತ ಅತ್ಯಂತ ದೊಡ್ಡ ರಾಷ್ಟ್ರವಾಗಿದ್ದು ಅದು ಪಡೆದ ಒಟ್ಟು ಸಹಾಯದ ಮೊತ್ತ 775ದಶಲಕ್ಷ ಡಾಲರುಗಳಪ್ಪಿತ್ತು. ಈ ಮೊತ್ತ ಇತ್ತೀಚಿನ ಸಾಮಾನ್ಯ ಹೆಚ್ಚುಗಾರಿಕೆಯ ಸಲವಾಗಿ ಮತ್ತಷ್ಟು ದಶಲಕ್ಷ ಡಾಲರುಗಳಿಗೆ ಏರಿದೆ. ಅಂತಾರಾಷ್ಟ್ರೀಯ ದ್ರವ್ಯನಿಧಿಯ ರಚನೆಯಲ್ಲಿ ಕೆಲವು ಕೊರತೆಗಳೂ ಅಪೂರ್ಣತೆಗಳೂ ಇದ್ದರೂ ಇದು ಅಂತಾರಾಷ್ಟ್ರೀಯ ಆರ್ಥಿಕ ಚೌಕಟ್ಟಿನ ಮುಖ್ಯ ಕಂಬವಾಗಿದೆ ಎಂದು ಧಾರಾಳವಾಗಿ ಹೇಳಬಹುದು. ಅಂತಾರಾಷ್ಟ್ರೀಯ ನ್ಯಾಯಾಲಯ : ರಾಷ್ಟ್ರರಾಷ್ಟ್ರಗಳ ಮಧ್ಯೆ ಉಂಟಾಗುವ ವಿವಾದಗಳನ್ನು ಯುಧ್ಧ ಮತ್ತು ಪ್ರತಿಕಾರಗಳಿಲ್ಲದೆ ನ್ಯಾಯಬದ್ಧವಾದ ರೀತಿಯಲ್ಲಿ ಪರಿಹರಿಸಿಕೊಳ್ಳುವ ಉಡ್ಡೇಶದಿಂದ 1927ರಲ್ಲಿ ಸ್ಥಾಪಿತವಾದ ರಾಷ್ಟ್ರಗಳ ಒಕ್ಕೂಟ (ಲೀಗ್ ಆಫ್ ನೇಶನ್ಸ್) ಹೇಗ್ ಪಟ್ಟಣದಲ್ಲಿ ಒನ್ದು ವಿಶ್ವ ನ್ಯಾಯಾಲಯವನ್ನು (ವರ್ಲ್ದ್ ಕೋರ್ಟ್) ಸ್ಥಾಪಿಸಿತು. 1946ನೆಯ ಜನವರಿಯಲ್ಲಿ ಎರದನೆಯ ಮಹಾಯುದ್ದ ಮುಗಿದ ಮೇಲೆ ಆ ನ್ಯಾಯಾಲಯ ಪುನಾರಚನೆಗೊಂಡು ವಿಶ್ವಸಂಸ್ಥೆಯ ಒನ್ದು ಪ್ರಧಾನ ಅಂಗವಾಗಿ ಅಂತಾರಾಷ್ಟ್ರೀಯ ನ್ಯಾಯಾಲಯ ಎಂಬ ಹೆಸರಿನಿಂದ ತನ್ನ ಕೆಲಸಕಾರ್ಯಗಳನ್ನಾರಂಭಿಸಿತು. ನ್ಯಾಯಾಲಯದ ಕಚೇರಿಯಿರುವುದು ಹೇಗ್ ನಲ್ಲೇ ಕಚೇರಿಯ ಎಲ್ಲಾ ವೆಚ್ಚವನ್ನು ವಿಶ್ವಸಂಸ್ಥೆ ವಹಿಸುತ್ತದೆ. ಇದರ ಮುಖ್ಯ ಆಡಳಿತಾಧಿಕಾರಿಯನ್ನು ಮಹಾಕಾರ್ಯದರ್ಶಿ ಎನ್ನುತ್ತಾರೆ. ನ್ಯಾಯಾಲಯದಲ್ಲಿ 15 ಜನ ನ್ಯಾಯಾಧೀಶರಿರುತ್ತಾರೆ. ಅವರು ವಿಶ್ವಸಂಸ್ಥೆಯ ಸದಸ್ಯ ರಾಷ್ಟ್ರಗಳಿಂದ ಚುನಾಯಿಸಲ್ಪಡುತ್ತಾರೆ. ಯಾವ ದೆಶದಿನ್ದಲೂ ಒಬ್ಬರಿಗಿಂತ ಹೆಚ್ಚು ನ್ಯಾಯಾಧೀಶರನ್ನು ಆರಿಸುವಂತಿಲ್ಲ. ಅವರು ತಮ್ಮತಮ್ಮ ದೆಶದಲ್ಲಿ ಅತ್ಯುಚ್ಚ ನ್ಯಾಯಾಧೀಶ ಪದವಿಗೆ ಅರ್ಹರಾಗಿರಬೇಕು. ಇಲ್ಲವೆ ಅನ್ತಾರಾಷ್ಟ್ರೀಯ ನ್ಯಾಯಶಾಸ್ತ್ರದಲ್ಲಿ ಪರಿಣತರೆಂದು ಖ್ಯಾತಿವೆತ್ತಿರಬೇಕು. ಅಂಥವರನ್ನು ಒಂಬತ್ತು ವರ್ಶಗಳ ಅವದಿಯವರೆಗೆ ಚುನಾಯಿಸುವರು. ಪ್ರತಿ ಮೂರು ವರ್ಷಕ್ಕೆ ಐವರು ನಿವೃತ್ತಿ ಹೊನ್ದುವರು. ಅವರ ಸ್ಥನದಲ್ಲಿ ಮತ್ತೆ ಐವರನ್ನು ಆರಿಸುವರು. ಚುನಾಯಿಸಲ್ಪಟ್ಟ ನ್ಯಾಯಾಧೀಶ ಆ ಸ್ಥಾನಕ್ಕೆ ಅನರ್ಹನೆಂದು ಉಳಿದ ನ್ಯಾಯಾಧೀಶರಿಗೆ ಮನದಟ್ಟಾದರೆ ಆತನನ್ನು ಆ ಸ್ಥಾನದಿಂದ ತೆಗೆಯಬಹುದು . ಯಾವುದೇ ನ್ಯಾಯವನ್ನು ಇತ್ಯರ್ಥ ಮಾಡಬೇಕಾದರೂ ಒಂಬತ್ತು ಜನ ನ್ಯಾಯಾಧೀಶರು ಏಕಕಾಲಕ್ಕೆ ಕುಳಿತು ವಾದವಿವಾದವನ್ನು ಕೇಳಬೇಕು. ಅಧ್ಯಕ್ಷ ಉಪಾಧ್ಯಕ್ಷರನ್ನು ಮೂರು ವರ್ಷಗಳಿಗೊಮ್ಮೆ ಗುಪ್ತ ಮತದಾನ ಪದ್ಧತಿಯಿಂದ. ಈ ನ್ಯಾಯಾಲಯದ ಅಧಿಕೃತ ಭಾಷೆ ಫ್ರೆಂಚ್ ಮತ್ತು ಇಂಗ್ಲಿಷ್. ಇವೆರಡರಲ್ಲೂ ಪರಿಣತಿಯಿಲ್ಲದ ರಾಷ್ಟ್ರ ತನ್ನ ಭಾಶೆ ಅಥವ ಮತ್ತಾವುದಾದರೊ ಭಾಷೆಯಲ್ಲಿ ವ್ಯವಹಾರ ನಡೆಸಬೇಕೆಂದು ಬೇಡಿ ಅನುಮತಿ ಪಡೆದುಕೊಂಡು ಅಂಥ ಅನ್ಯಭಾಷೆಯಲ್ಲಿ ವ್ಯವಹರಿಸಬಹುದು. ಪ್ರತಿಯೊಂದು ತೀರ್ಪು ಬಹುಮತದಿಂದ ನಿರ್ಣಯವಾಗತಕ್ಕದ್ದು. ನ್ಯಾಯಾಧೀಶರುಗಳಲ್ಲಿ ಸಮ್ಮತವಿದ್ದರೆ, ಅಧ್ಯಕ್ಷರಿಗೆ ಉಪರಿಮತ (ಕ್ಯಾಸ್ಟಿಂಗ್ ವೋಟ್) ಕೊಡುವ ಅಧಿಕಾರವಿದೆ. ಈ ನ್ಯಾಯಾಲಯ ಕೊಡುವ ತೀರ್ಪೇ ಆಖೈರು. ಅದರ ವಿರುದ್ಧ ಯಾವ ಮೇಲ್ಮನವಿಯೂ(ಅಪೀಲ್) ಇಲ್ಲ. ಆದರೆ, ತೀರ್ಪು ಕೊಟ್ಟ 10 ವರ್ಷಗಳಿಗೊಳಗಾಗಿ, ಯಾವುದಾದರೂ ಹೊಸ ನಿರ್ಣಾಯಕ ಸಂಗತಿ ಬೆಳಕಿಗೆ ಬಂದರೆ ಮೊದಲಿನ ತೀರ್ಪನ್ನು ಪುನರ್ ವಿಮರ್ಶೆಮಾಡುವ ಅಧಿಕಾರ ಇದೇ ಕೋರ್ಟಿಗಿದೆ. ಒನ್ದು ವಿವಾದ ಇತ್ಯರ್ಥ ಮಾಡುವಾಗ ಪ್ರತಿಪಕ್ಷಗಳ ರಾಷ್ಟ್ರಗಳ ಒಬ್ಬೊಬ್ಬ ನ್ಯಾಯಾಧೀಶರು ವಿಚಾರಣೆಯ ಕಾಲಕ್ಕೆ ಇತರ ನ್ಯಾಯಾಧೀಶರೊಡನೆ ಕುಳಿತುಕೊಳ್ಳತಕ್ಕದ್ದು. ಒನ್ದು ವೇಳೆ ಚುನಾಯಿಸಲ್ಪಟ್ಟ 15 ನ್ಯಾಯಾಧೀಶರಲ್ಲಿ ಪಕ್ಷಗಾರ ರಾಷ್ಟ್ರಗಳ ಪ್ರತಿನಿಧಿಗಳು ಇಲ್ಲದಿದ್ದರೆ ಅಂಥ ರಾಷ್ಟ್ರಗಳು ಒಬ್ಬೊಬ್ಬ ನ್ಯಾಯಾಧೀಶರನ್ನು ಚುನಾಯಿಸಿಕೊಳ್ಳುವ ಅಧಿಕಾರವಿದೆ. ಹಾಗೆ ಆರಿಸಲ್ಪಟ್ಟ ನ್ಯಾಯಾಧೀಶರಿಗೆ ಇಥರ ನ್ಯಾಯಾಧೀಶರಂತೆ ಸಮಾನಾಧಿಕಾರ ಹೊಂದಿ ತೀರ್ಪುಕೊಡುವ ಹಕ್ಕಿದೆ. ಅನ್ತಾರಾಷ್ಟ್ರೀಯ ಪತ್ರಿಕಾ ಸಂಸ್ಥೆ : ಸುದ್ಧಿಯ ಪ್ರಚಾರ, ಬೆಳೆವಣಿಗೆ ಮತ್ತು ಸುದ್ಧಿಯನ್ನು ತರುವ ಬಗೆ ಇವುಗಳ ವಿಚಾರದಲ್ಲಿ ಸಂಶೋಧನೆ ನಡೆಸಿ ಪ್ರಪಂಚದ ಪತ್ರಿಕಾಲೊಕಕ್ಕೆ ಮಾರ್ಗದರ್ಶನ ಮಾಡುವ ಮುಖ್ಯ್ ಉದ್ದೇಶದಿಂದ ಸ್ಥಾಪಿತವಾದ ಸಂಸ್ಥೆ. ಇದರ ಕೇಂದ್ರ ಕಚೇರಿ ಸ್ವಿಟ್ಜರ್ ಲೆಂಡಿನ ‌‍‍‍‌ಜೂರಿಟ್ ಪಟ್ಟಣದಲ್ಲಿದೆ. ಅನ್ತಾರಾಷ್ಟ್ರೀಯ ಖ್ಯಾತಿಯನ್ನು ಪಡೆದ ಈ ಸಂಸ್ಥೆ ಪ್ರಪಂಚದ ಯಾವ ಸರ್ಕಾರದ ಹಿಡಿತಕ್ಕೂ ಒಳಪಟ್ಟಿಲ್ಲ. ಪತ್ರಿಕಾ ಸ್ವಾತಂತ್ರ್ಯವನ್ನು ರಕ್ಶಣೆ ಮಾಡುವುದು, ನಾನಾ ದೇಶದ ಪತ್ರಿಕೂಧ್ಯಮಗಳಲ್ಲಿ ಪರಸ್ಪರ ಮಧುರ ಬಾಂಧವ್ಯವನ್ನು ಹುಟ್ಟಿಸುವುದು, ಸುದ್ಧಿ ನಿಷ್ಪಕ್ಷಪಾತವಾಗಿ ಯಾರ ಭಯ ಮತ್ತು ದಯಾದಾಕ್ಷಿಣ್ಯಕ್ಕೊಳಗಾಗದೆ ಪ್ರಚುರವಾಗುವಂತೆ ಮಾಡುವುದು, ಪತ್ರಿಕೋಧ್ಯಮದ ವಿವಿಧ ಸಾಧನೆಗಳನ್ನು ಬೆಳೆಸುವುದು -ಇವು ಈ ಸಂಸ್ಥೆ ಮಾಡುತ್ತಿರುವ ಇತರ ಮುಖ್ಯ ಕೆಲಸಗಳು. ಪ್ರಪಂಚದ 45 ದೇಶಗಳಲ್ಲಿರುವ ಪತ್ರಿಕೆಗಳ ಪೈಕಿ 600 ಪತ್ರಿಕೆಗಳ 1300 ಪ್ರತಿನಿಧಿಗಳು ಈ ಸಂಸ್ಥೆಯ ಸದಸ್ಯರು. ಇವರ ಅಂಗಸಂಸ್ಥೆಯೊಂದು ಭಾರತದಲ್ಲೂ ಇದೆ. ಇದು ಪ್ರತಿ ವರ್ಷವೂ ಪತ್ರಿಕೋಧ್ಯಮಿಗಳ ಉಪಯೊಗಕ್ಕಾಗಿ ವಿಚಾರಗೋಷ್ಟಿಗಳನ್ನು, ತರಬೇತಿ ತರಗತಿಗಳನ್ನು, ಪರಸ್ಪರ ವಿನಿಮಯ ಚರ್ಚೆಗಳನ್ನು ಏರ್ಪಡಿಸುತ್ತದೆ. (ಎನ್.ಕೆ) ಅನ್ತಾರಾಷ್ಟ್ರೀಯ ಪುನಾರಚನೆ ಮತ್ತು ಅಭಿವೃದ್ಧಿ ಬ್ಯಾಂಕು : ವಿಶ್ವಬ್ಯಾಂಕು ಎಂದು ಪ್ರಖ್ಯಾತಿ ಪಡೆದಿರುವ ಈ ಸಂಸ್ಥೆ ಅಂತಾರಾಷ್ಟ್ರೀಯ ದ್ರವ್ಯನಿಧಿಯೊಂದಿಗೆ ವಿಶ್ವಸಂಸ್ಥೆಯ ಒಂದು ಅಂಗವಾಗಿ ಸ್ಥಾಪಿತವಾಯಿತು (ಐ.ಬಿ.ಆರ್.ಡಿ). ಇದು ಅಂತರಾಷ್ಟ್ರೀಯಮಟ್ಟದ ಬಂಡವಾಳದ ಸಮಸ್ಯೆಗಳನ್ನು ನಿರ್ವಹಿಸುತ್ತದೆ. 1946ರ ಜೂನ್ ತಿಂಗಳಲ್ಲಿ ತನ್ನ ವ್ಯ್ವಹಾರವನ್ನು ಪ್ರಾರಂಭಿಸಿ ಅರವತ್ತಕ್ಕೂ ಹೆಚ್ಚು ವರ್ಷ ಕೆಲಸ ಮಾಡುತ್ತಿದ್ದು 185 ರಾಷ್ಟ್ರಗಳ ಸದಸ್ಯತ್ವವನ್ನು ಹೊಂದಿದೆ. ವಿತರಣೆ ಸುಮಾರು 9 ಬಿಲಿಯನ್ ಡಾಲರುಗಳು. ಇದರ ಪ್ರಧಾನ ಕಛೇರಿ ವಾಷಿಂಗ್ಟನ್ ನಲ್ಲಿದೆ. ಮೊದಲು ಈ ಬ್ಯಾಂಕಿನ ಆರ್ಥಿಕ ಬಂಡವಾಳ 10 ಬಿಲಿಯನ್ ಡಾಲರುಗಳಷ್ಟಿತ್ತು. ಬೇರೆಬೇರೆ ಘಟ್ಟಗಳಲ್ಲಿ ಬೆಳೆದು ಈಗಿನ ಬಂಡವಾಳ 24 ಬಿಲಿಯನ್ ಡಾಲರುಗಳಾಗಿದೆ. ಪ್ರತಿಯೊಂದು ಸದಸ್ಯ ರಾಷ್ಟ್ರದ ಬಂಡವಾಳ ಈ ಕೆಳಗೆ ಕಂಡ ಅಂಶಗಳ ಆಧಾರದ ಮೇಲೆ ನಿರ್ಣಯವಾಗುತ್ತದೆ. 1.ರಾಷ್ಟ್ರೀಯ ಆದಾಯದ ಶೇ.2 ರಷ್ಟು. 2.ಚಿನ್ನ ಮತ್ತು ಡಾಲರ್ ಉಳಿಕೆಯ ಶೇ.5 ರಷ್ಟು. 3.ಸರಾಸರಿ ಆಮದಿನ ಶೇ.10 ರಷ್ಟು. 4. ರಫ್ತಿನ ಪರಮಾವಧಿ ವ್ಯತ್ಯಾಸದ ಶೇ.10 ರಷ್ಟು. 5. ಮೇಲಿನ ನಾಲ್ಕು ಅಂಶಗಳ ಮೊತ್ತಕ್ಕೆ ಸರಾಸರಿ ರಫ್ತು ವರಮಾನದ ಶೇಕಡ ಪ್ರಮಾಣದಷ್ಟನ್ನು ಕೂಡಿಸಿದಷ್ಟು. ಸದಸ್ಯತ್ವ ಪಡೆಯಲು ಪ್ರತಿಯೊಂದು ರಾಷ್ಟ್ರವೂ ತನ್ನ ಭಾಗದ 20ರಷ್ಟನ್ನು (ಶೇ.2ರಷ್ಟು ಚಿನ್ನ ಅತವ ಅಮೇರಿಕ ಡಾಲರಿನ ರೂಪದಲ್ಲಿ, ಶೇ.18 ರಷ್ಟನ್ನು ತನ್ನ ರಾಷ್ಟ್ರದ ಹಣದ ರೂಪದಲ್ಲಿ ಕೊಟ್ಟು ಉಳಿದ ಶೇ.80 ಭಾಗವನ್ನು ಭರವಸೆಯ ನಿಧಿಗೆ ಕೊಡಬೇಕಾಗುತ್ತದೆ. ತನ್ನ ಜವಾಬ್ದಾರಿಯನ್ನು ಪೂರೈಸಲು ಅನಿವಾರ್ಯವಾದಾಗ ಮಾತ್ರ ಈ ಭರವಸೆಯ ನಿಧಿಯ ಹಣವನ್ನು ಬ್ಯಾಂಕು ಬಳಸಿಕೊಳ್ಳುವ ಅಧಿಕಾರ ಹೊಂದಿದೆ. ಬಂಡವಾಳದ ವಿತರಣೆಗೆ ಅನುಕೂಲವಾಗುವಂತೆ ಒನ್ದು ಮೂಲ ವ್ಯವಸ್ಥೆಯ ರೂಪವನ್ನು ಅಂತಾರಾಷ್ಟ್ರೀಯ ದ್ರವ್ಯನಿಧಿ ಕೊಟ್ಟಿರುವ ಹಾಗೆ ಈ ಬ್ಯಾಂಕು ಯುದ್ಧದ ಪರಿಣಾಮದಿಂದ ಕುಸಿದ ಆರ್ಥಿಕ ವ್ಯವಸ್ಥೆಗೆ ಪುನಾರಚನೆಗೆ ಸಹಾಯ ಮಾಡಿ, ಹಿಂದುಳಿದ ರಾಷ್ಟ್ರಗಳ ಅಭಿವೃದ್ಧಿಗೆ ಉತ್ಪಾದನೆಯ ಉದ್ದೇಶಗಳಿಗೋಸ್ಕರ ಹಣವನ್ನು ಒದಗಿಸಿ, ಸಂಪನ್ಮೂಲಗಳ