ಪುಟ:Mysore-University-Encyclopaedia-Vol-1-Part-1.pdf/೧೦೮

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಆಂತಾರಾಷ್ಟ್ರೀಯ ಭಾಷೆ ೧೦೮


ಪೀಡಿಸುತ್ತಿದೆ.ಹಣಸಂದಾಯ ಸ್ಥಿತಿಯ ಅಸಮತೆ ತಾತ್ಕಾಲಿಕವಾಗಿ ಕಂಡುಬರಬಹುದು ಅಥವಾ ಮೂಲಭೂತ ಕಾರಣಗಳಿಂದುಂಟಾಗಿರಬಹುದು, ದೇಶದ ಆರ್ಥಿಕ ಸ್ಥಿತಿಯಲ್ಲಿ ನಿಜವಾದ ಕುಂದುಕೊರತೆಗಳೇನೂ ಇಲ್ಲದಿದ್ದರೂ ಅಂತಾರಾಷ್ಟ್ರೀಯ ವ್ಯಾಪಾರ ವ್ಯವಹಾರದ ಅತಿರೇಕದಿಂದ ದೇಶದ ಹಣ ಸಂದಾಯಾ ಸ್ಥಿತಿಯಲ್ಲಿ ತಾತ್ಕಾಲಿಕವಾಗಿ ಅಸಮತೆ ಕಂಡುಬರಬಹುದು. ಹಾಗಲ್ಲದೆ ದೇಶದ ಆರ್ಥಿಕ ವ್ಯವಸ್ಥೆಯ ನ್ಯೂನಾತಿರೇಕಗಳ ಪರಿಣಾಮವಾಗಿ ಹಣಸಂದಾಯ ಸ್ಥಿತಿಯಲ್ಲಿ ಅನುಮತೆ ಅವಿರಳವಾಗಿ ಉದ್ಭವಿಸಬಹುದು. ಇಂಥ ಮೂಲಭೂತ ಅಸಮತೆ, ಮುಂದುವರಿಯುತ್ತಿರುವ ರಾಷ್ಟ್ರಗಳು ಪದೇಪದೇ ಎದುರಿಸುತ್ತಿರುವ ದೊಡ್ದ ಸಮಸ್ಯೆ . ಇದನ್ನು ನಿವಾರಿಸಲು ದೇಶದ ಆರ್ಥಿಕ ಸ್ತಿತಿಯಲ್ಲಿ ಮೂಲಭೂತ ಬದಲಾವಣೆಗಳನ್ನು ಮಾಡದೆ ಸಾಧ್ಯವಿಲ್ಲ.

ಪ್ರತಿಯೊಂದು ದೇಶಕ್ಕೂ ತನ್ನದೇ ಆದ ವಿವರಣೆ ಇದ್ದರೂ ಮೂಲಭೂತ ಅಸಮತೆಗೆ ಸ್ಥೂಲವಾಗಿ ಮೂರು ಕಾರಣಗಳನ್ನು ತೋರಿಸಬಹುದು: 1.ಮುಂದುವರಿಯುತ್ತಿರುವ ರಾಷ್ತ್ರಗಳು ತಮ್ಮ ಆರ್ಥಿಕಾಭಿವೃದ್ಧಿಗೆ ಮುಂದುವರಿದ ರಾಷ್ಟ್ರಗಳಿಂದ ಸಾಮಾನು ಸಲಕರಣೆಗಳನ್ನು ತಾಂತ್ರಿಕ ಸೇವ ಸೌಕರ್ಯಗಳನ್ನು ಮತ್ತು ವಿಶೇಷವಾಗಿ ಬಂಡವಾಳವನ್ನು ಆಮದು ಮಾಡಿಕೊಳ್ಳದೆ ಬೇರೆ ಮಾರ್ಗವಿಲ್ಲ. 2.ಮುಂದುವರಿಯುತ್ತಿರುವ ದೇಶಗಳ ರಾಫ್ತುಗಳಿಗೆ ಪ್ರಪಂಚದ ಮಾರುಕಟ್ತೆಯಲ್ಲಿರುವ ಅನಾದರ,ಆನಾಸಕ್ತಿ:ಪರಿಣಾಮವಾಗಿ ರಫ್ತುಗಳಿಗೆ ಕಂಡುಬರುವ ಅಸ್ಥಿರತೆ; ಇದಕ್ಕೆ ಕಾರಣವಾಗಿ ಕಂಡುಬರುವ ಮುಂದುವರಿದ ರಾಷ್ಟ್ರಗಳ ಮನೋಭಿಪ್ರಾಯ, 3.ಮುಂದುವರಿದ ರಾಷ್ಟ್ರಗಳು ಮುಂದುವರಿಯುತ್ತಿರುವ ರಾಷ್ಟ್ರಗಳೊಡನೆ ವ್ಯಾಪಾರವನ್ನು ಬೆಳೆಸಲು ಮತ್ತು ಹೆಚ್ಚಿಸಲು ಹಿಂಜರಿಯುತ್ತಿರುವುದು; ತಮ್ಮ ದೇಶದ ವ್ಯಾಪಾರ ವಹಿವಾಟನ್ನು ರಕ್ಷಿಸಲು ವಿಧಿಸಿರುವ ಸುಂಕ, ಸಂಕೋಲೆಗಳನ್ನು ತಗ್ಗಿಸಲು ನಿರುತ್ಸಾಹಿಗಳಾಗಿರುವುದು. ಇದರಿಂದಾಗಿ ಹಿಂದುಳಿದ ರಾಷ್ಟ್ರಗಳು ತಮಗೆ ಬೇಕಾಗಿರುವುದು ವ್ಯಾಪಾರ ವೈಶಾಲ್ಯವೇ ಹೊರತು ನೆರವಲ್ಲ ಎಂಬ ವಾದವನ್ನು ಮುಂದೊಡ್ದಿವೆ.

ಹೀಗಾಗಿ ಅಂತಾರಾಷ್ಟ್ರೀಯ ಹಣಕಾಸಿನ ಸಾಧನ ಸಂಪತ್ತುಗಳು ಅಂತಾರಷ್ಟ್ರೀಯ ವ್ಯಾಪಾರದ ಜೊತೆಗೆ ಹೆಚ್ಚಲು ಸಾಧ್ಯವಿಲ್ಲವಾಗಿದೆ. ವಿಶ್ವದಾದ್ಯಂತ ಕಂಡುಬರುತ್ತಿರುವ ವಿದೇಶಿ ವಿನಿಮಯಗಳ ಕೊರತೆ ಈ ಅವ್ಯವಸ್ಥೆ ಪ್ರತೀಕ. ಹಣ ಸಂದಾಯದಲ್ಲಿ ಕೊರತೆಯನ್ನು ಅನುಭವಿಸುತ್ತಿರುವ ರಾಷ್ಟ್ರಗಳು ಬಯಸುತ್ತಿರುವ ನೆರವು, ಬೇಡುತ್ತಿರುವ ಸಾಲಸೋಲಗಳಿಂತ ಉಳಿತಾಯವನ್ನು ಗಳಿಸಿರುವ ರಾಷ್ಟ್ರಗಳು ನಿಡುತ್ತಿರುವ ನೆರವು ಕೊಡುತ್ತಿರುವ ಸಾಲ ಬಹಳವಾಗಿ ಕಡಿಮೆಯಾಗಿರುವುದರಿಂದ ಹಣಕಾಸಿನ ಸಾಧನೆಗಳಲ್ಲಿ ಕೊರತೆಯುಂಟಾಗಿ ಅಂತಾರಷ್ಟ್ರೀಯ ಹಣಕಾಸಿನ ಮೌಲ್ಯ ಕುಗ್ಗಿಹೋಗಿದೆ.ಅದ್ದರಿಂದಲೇ ವಿಶ್ವದ ಗಿರಾಕಿಗೆ ಅನುಗುಣವಾಗಿ ಮತ್ತು ಸರಿಸಮನಾಗಿ ಅಂತಾರಷ್ಟ್ರೀಯ ಹಣಕಾಸಿನ ಸರಬರಾಜನ್ನು ಹೆಚ್ಚಿಸುವ ಬಗೆ ಹೇಗೆ? ಹೀಗೆ ಹೆಚ್ಚಿಸಿದ ಸರಬರಾಜನ್ನು ಪ್ರಪಂಚದ ರಾಷ್ಟ್ರಗಳ , ಅದರಲ್ಲೂ ಮುಂದುವರಿಯುತ್ತಿರುವ ದೇಶಗಳ ಅವಶ್ಯಕತೆಗನುಗುಣವಾಗಿ ವಿತರಣೆ ಮಾಡುವುದು ಹೇಗೆ? ಈ ಪ್ರಶ್ನೆಗಳು ವಿಶ್ವದ ಹಣಕಾಸಿನ ಎಲ್ಲಾ ಸುಧಾರಣೆಗಳ ಮುಖ್ಯ ಉದ್ದೇಶ.

ಸುಮಾರು ಎರಡು ದಶಕಗಳಿಗೂ ಹಿಂದೆ ಸ್ಥಾಪಿಸಿದ ಆಂತಾರಷ್ಟ್ರೀಯ ದ್ರವ್ಯನಿಧಿ ತಾತ್ಕಾಲಿಕ ಅಸಮತೆಯ ನಿವಾರಣೆಗೆ ಬೇಕಾಗುವ ಅಂತಾರಷ್ಟ್ರೀಯ ಹಣಕಾಸು ಸಾಧನಗಳನ್ನೊದಗಿಸುತ್ತಿದೆ. ಹಾಗೆಯೇ ವಿಶ್ವಬ್ಯಾಂಕು ದೇಶಗಳ ಆರ್ಥಿಕ ಪ್ರಗತಿ ಮತ್ತು ಏಳಿಗೆಗೆ ಬೇಕಾಗುವ ದೀರ್ಫಾವದಿ ಬಂಡವಾಳವನ್ನೊದಗಿಸುತ್ತಿದೆ.ಈ ಎರಡೂ ಸಂಸ್ಥೆಗಳೂ ತಮ್ಮ ಚಟುವಟಿಕೆಗಲ್ಲಿ ಪ್ರಶಂಸನೀಯವಾದ ಪ್ರಗತಿಯನ್ನು ಸಾಧಿಸಿವೆ.ಆದರೆ ವಿಶ್ವದ ಹಣಕಾಸಿನ ಕೊರತೆಯ ಲಕ್ಷಣ ಮತ್ತು ಪರಿಮಾಣ ಈ ಎರಡು ಸಂಸ್ಥೆಗಳ ಶಕ್ತಿ ಸಾಮರ್ಥ್ಯಗಲನ್ನು ಮೀರಿದ್ದರಿಂದ ಅಂತಾರಷ್ಟ್ರೀಯ ಹಣಕಾಸಿನ ವಹಿವಾಟಿನಲ್ಲಿ ಸುಧಾರಣೆ ಅತ್ಯಗತ್ಯವಗಿದೆ. ಇತ್ತೀಚಿನ ಅಂತಾರಷ್ಟ್ರೀಯ ಹಣಕಾಸಿನ ವಾರ್ಷಿಕಾಧಿವೇಶನದಲ್ಲಿ ಅಂಗೀಕೃತವಾದ 'ವಿಶೇಷ ವಾಪಸಾತಿ ಹಕ್ಕುಗಳು' ಎನ್ನುವ 'ಕಾಗದ ಬಂಗಾರ' ಸುಧಾರಣೆ ಮುಖ್ಯವಾದುವು.ಈ ವಿಶೇಷ ವಾಪಸಾತಿ ಹಕ್ಕುಗಳನ್ನು ಚಲಾಯಿನುವುದರ ಮುಖಾಂತರ ಪ್ರತಿಯೊಂದು ದೇಶವೂ ತನ್ನ ಆಂತಾರಷ್ಟ್ರೀಯ ಜಮೆಗಳನ್ನು ನಿರ್ದಿಷ್ಟ ಮತ್ತು ಆಂತಾರಷ್ಟ್ರೀಯ ಹಣಕಾಸಿನ ಮೌಲ್ಯವನ್ನು ಹೆಚ್ಚಿಸಲು ಎದೊಂದು ಉಪಯುಕ್ತ ಸಾಧನವಾಗುವುದರಲ್ಲಿ ಸಂಶಯವಿಲ್ಲ. (ಎಸ್.ಎಸ್)

ಆಂತಾರಷ್ಟ್ರೀಯ ಭಾಷೆ : ಬೇರೆ ಬೇರೆ ರಾಷ್ಟ್ರಗಳಲ್ಲಿ ವಾಸಿಸುತ್ತಿರುವ ಬೇರೆ ಬೇರೆ ಭಾಷೆಗಳನ್ನು ಬಳಸುತ್ತಿರುವ ಜನರೊಳಗೆ ಯೋಗ್ಯವಾದ ಸಂಪರ್ಕ ಬೆಳೆಯಬೇಕಾದರೆ,ಅವರೆಲ್ಲರಿಗೂ ಅರ್ಥವಾಗುವಂಥ ಒಂದು ವಿಶ್ವಭಾಷೆ ಅವಶ್ಯವೆಂಬ ವಿಷಯವನ್ನು ಯಾರೂ ಆಲ್ಲಗಳೆಯಲಾರರು. ಹಲವು ರಾಷ್ಟ್ರಗಲಳಿಮ್ದ ಬಂದ ವಿಜ್ನಾನಿಗಳು ಒಂದೆಡೆ ಸೇರಿ ಯಾವುದಾದರೊಂದು ಸಮಸ್ಯೆಯನ್ನು ಚರ್ಚಿಸತೊಡಗಿದಾಗ, ರಾಜಕೀಯ ಸಮಸ್ಯೆಯೊಂದನ್ನುಚರ್ಚಿಸಲು ವಿಶ್ವ ರಾಜಕಾರಣಿಗಳೂ ಒಂದೆಡೆ ನೆರೆದಾಗ,ವಿವಿಧ ದೇಶಗಳ ವ್ಯಾಪಾರಿಗಳು ಸಮ್ಮೇಳನ ಒಬ್ಬರ ಭಷೆ ಮತ್ತೊಬ್ಬರಿಗೆ ಅರ್ಥವಾಗದೆ ಪೇಚಾಡುತ್ತಾರೆ. ದುಭಷಿಗಳ, ಅನುವಾದಕರ ಸಹಾಯ ಬೆಡುತ್ತಾರೆ.ಇವರೆಲ್ಲ ತಮಗೆದುರಾಗುವ ಈ ಭಾಷಾ ವ ಸಮಸ್ಯೆಯನ್ನು ನೀಗಲು ನಿರಂತರ ಪ್ರಯತ್ನದಲ್ಲಿ ತೊಡಗಿದ್ದಾರೆ.

ಸ್ವಲ್ಪ ಆಳವಾಗಿ ವಿಚಾರಿಸಿ ನೋಡಿದರೆ ಈ ಸಮಸ್ಯೆ ಅಷ್ಟೊಂದು ಸರಳವಾದುದೇ ನಲ್ಲವೆಂಬುದು ವ್ಯಕ್ತವಾದೀತು.

ಆಂತಾರಷ್ಟ್ರೀಯ ಭಾಷೆ ನಾಲ್ಕು ಬಗೆಯಲ್ಲಿರಬಹುದು:

1.ಸಾಂಪ್ರದಾಯಿಕ ಶಬ್ದಾವಳಿ ಮತ್ತು ವ್ಯಾಕರಣಗಳಿಂದ ದೂರವಾಗಿದ್ದು,ತನ್ನದೇ ಆದ ಕೃತಕ ನುಡಿಗಟ್ಟಿನಿಂದ ಕೂಡಿ ಜನತೆಯ ಅಗತ್ಯತೆಗಳ ತಾತ್ವಿಕ ವಿಶ್ಲೇಷಣೆಯನ್ನು ಮೂಲಾಧಾರವಾಗುಳ್ಳ ಒಂದು ಭಾಷೆ. 17ನೆಯ ಶತಮಾನದಲ್ಲಿ ಫ್ರಾನ್ನಿಸ್ ಬೇಕನ್, ಡೆಕರ್ಟ್ ಮತ್ತು ಇತರರು ಇಂಥದೊಂದು ಭಾಷೆಯನ್ನು ರೂಪಿಸಲು ಯತ್ನಿಸಿದರು.ಉನ್ನತ ಬೌದ್ಧಿಕಮಟ್ಟವನ್ನು ಬಯಸುತ್ತಿದ್ದ ಆ ಭಾಷೆ ವೈವಹಾರಕ್ಕೆ ಒಗ್ಗಲಿಲ್ಲವಾಗಿ ಅದು ನಿಲ್ಲಲಿಲ್ಲ.

2. ಲ್ಯಾಟಿನ್ನಿನಂಥ ಮೃತಭಾಷೆಗಳೊಂದನ್ನು ಪರಿಷ್ಕರಿಸಿ ಪುನರುಜ್ಜೀವನಗೊಳಿಸುವುದು, 1913ರಲ್ಲೇ ಪ್ರಾರಂಭವಾದ ಯೋಜನೆ ಕೆಲ ಕಾಲದ ಮೇಲೆ ತಣ್ಣಗಾಯಿತು. ಜೀವಂತ ಭಾಷೆಯಾಗಿರುವ ಸತ್ವ ಮೃತಭಾಷೆಗೆ ಬರಲಾರದೆ,ಒಂದು ವೇಳೇ ಅಂಥ ಭಾಷೆಯನ್ನು ಇಟ್ಟುಕೊಂಡಾಗಲೂ ಆ ಭಾಷೆಗೆ ಎಲ್ಲಾ ಸಾಹಿತ್ಯ ಸಂಪತ್ತನ್ನು ಅನುವಾದ ಮಾಡಾವುದು ಕಷ್ಟ.

3.ಇರುವ ನುಡಿಗಟ್ಟಿನ ಆಧಾರದ ಮೇಲೆ ಹೊಸದಾಗಿ ಕಟ್ಟಿರುವ ಒಂದು ನೂತನ ಭಾಷೆ. ಇಂಥವಲ್ಲ ಎಸ್.ಎಸ್ ಜಮೇನೆ ಹಾಫ್ನಿಂದ ಪ್ರಚುರವಾದ (1887) ಎಸ್ಪರಾಂಟೊ ಬಹು ಮುಖ್ಯವಾದುದು.ಇದಾದ ಮೇಲೆ ಇಡೊ,ಒಲಪೂಕ್,ನೋವಿಯಲ್,ಇಂಟರ್ ಲಿಂಗ್ವಾ ಮುಂತಾದುವು ಬಂದವು . ಇವುಗಳ ಶಬ್ದ ಸಂಪತ್ತು ಲ್ಯಾಟಿನ್ ಮತ್ತು ರೋಮನ್ ಭಾಷೆಗಳಿಂದ ಬಂದಿದ್ದು ವ್ಯಾಕರಣ ಇಂಡೊ ಯೂರೋಪಿಯನ್ ಭಾಷೆಗಳಿಗೆ ಸಂಭಂದಿಸಿದೆ. ಪ್ರಪಂಚದ ಜನಸಂಖ್ಯೆಯಲ್ಲಿ ಬಹುಭಾಗದವರಿಗೆ (ಏಷ್ಯ,ಆಫ್ರಿಕ) ಈ ಶಬ್ದಸಂಪತ್ತಿನ ಹಾಗು ವ್ಯಾಕರಣದ ಪರಚಯವಿಲ್ಲ. ಅಂಥವರಿಗೆ ಈ ಹೊಸ ಭಾಷೆಗಳು ಕಷ್ಟವಾಗಿಯೂ ಅಸಹ್ಯವಾಗಿಯೂ ತೋರಬಹದು.

4. ಪರಿಷ್ಕರಿಸಿದ ಯಾವುದಾದರೂ ಆಧುನಿಕ ಜೀವಂತಭಾಷೆಯನ್ನು ವಿಶ್ವಭಾಷೆಯಾಗಿ ಬಳಸಬಹುದು , ಉದಾ: ಬೇಸಿಕ್ ಇಂಗ್ಲಿಷ್. ಇತ್ತೀಚಿಗೆ ಈ ಕದೆ ಒಲವು ಹೆಚ್ಚಾಗುತ್ತಿರುವ ಸೂಚನೆಗಳು ಕಂಡುಬರುತ್ತಿವೆ, ಬೇಸಿಕ್ ಇಂಗ್ಲಿಷ್ ನೊಂದಿಗೆ ರಷ್ಯನ್ ಭಾಷೆ,ಚೀನೀ ಭಾಷೆಗಳು ಪ್ರತಿಸ್ಪರ್ಧಗಳಾಗಿವೆ. ಇವುಗಾಳಲ್ಲಿ ಯಾವ ಒಂದರಿಂದಲಾದರೂ ವಿಶ್ವಭಾಷಾ ಸಮಸ್ಯೆ ಪರಿಹಾರವಾಗುವುದಾದುರು ಭಾಷೆಗೆ ಅಂಟಿರುವ ರಾಜಕೀಯ ಹಾಗೂ ತಾತ್ತ್ವಿಕ ಸಂಪರ್ಕಗಳಿಂದಾಗಿ ಬೇರೆ ರೀತಿಯ ತೊಂದರೆಗಳು ತಲೆಯೆತ್ತುವ ಸಂಭವಗಳಿವೆ, ಆಯಾ ಜನರ ಮಾತ್ರುಭಾಷೆ,ದೇಶಭಾಷೆಗಳಲ್ಲಿದೆ,ಇಡೀ ಪ್ರಪಂಚಕ್ಕೆ ಸಮ್ಮತವಾಗುವಂಥ


===== ಎರಡುಪ್ಯಾರಾಗ್ರಾಫ್ ಬಾಕಿ