ಪುಟ:Mysore-University-Encyclopaedia-Vol-1-Part-1.pdf/೧೦೯

ವಿಕಿಸೋರ್ಸ್ದಿಂದ
ಈ ಪುಟವನ್ನು ಪರಿಶೀಲಿಸಲಾಗಿಲ್ಲ.

ಕೆಲಸ ಅತ್ಯಂತ ಸುಲಭವಾಗಿರಬೆಕು-ಇಂಥ ಉದಾರ ಧ್ಯೇಯಗಳು ಮುಂದಿತ್ತುಕೊಂಡು ಕ್ರತಕ ಭಾಷೆಗಳ ಸ್ರಷ್ಟಿ ನಡೆಯಿತು. ಹಾಗೆ ಸ್ರಷ್ಟಿಯಾದ ಭಾಷೆಯಲ್ಲಿ ಎಷ್ಟು ಭಾಷೆಗಳು ಈ ಧ್ಯೇಯವನ್ನು ಸಾಧಿಸಿವೆ, ಎಷ್ಟರಮಟ್ಟಿಗೆ ಸಾಧಿಸಿವೆ ಎಂದು ಹೇಳುವುದು ಕಷ್ಟ. ಆದರೆ, ಕಲ್ಪಿತ ಭಾಷೆಗಳು ಪ್ರಾಕ್ರತಿಕ ಭಾಷೆಗಳಿಂದ ಎಷ್ಟೋ ವಿಷಯಗಳಿವೆ ಪ್ರಕ್ರತ ಉದ್ದೇಶಕ್ಕೆ ಯೋಗ್ಯವಾಗಿ ತೋರಿಬರುತ್ತವೆ. ಮಾನವ ನಿರ್ಮಿತಳಾದರಿಂದ, ಅವು ತರ್ಕಬದ್ದವಾಗಿರಲು ಸಾಧ್ಯವಿದೆ; ಅಪವಾದಗಳ್ಳಿಲದ ಸರಳವಾದ ನಿಯಮಗಳನ್ನೊಳಗೊಂಡಿರಲು ಸಾಧ್ಯವಿದ. ಮತ್ತು, ಅವು ಉಪಯೋಗಿಸುವ ಪ್ರತಿಯೊಂದು ಪ್ರತ್ಯಯವು ಅಸಂಖ್ಯರೊಪಗಳನ್ನು ಉತ್ಪಾದಿಸಿ, ಭಾಷೆಯ ಶಬ್ಧಸಂಪತ್ತನ್ನು ಅತ್ಯಂತ ವಿಶಾಲವಾಗುವಂತೆ ಮಾಡಲು ಸಾಧ್ಯವಿದೆ. ಅಂಥ ಭಾಷೆಯನ್ನು ಪ್ರಯೋಗಿಸುವಲ್ಲಿ ಹಲಕೆಲವು ತಪ್ಪುಗಳನ್ನು ಮಾಡಿದರೂ ನ್ಂದಿಸುವವರಾಗಿರಲಿ, ಹಾಸ್ಯಮಾದುವವರಾಗಿರಲಿ ಯಾರೊ ಇಲ್ಲ, ಆದರೆ, ಭಾಷೆ ಕ್ರತಕವೆ ಆದರೊ ಕೆಲವು ವರ್ಷ ಬಳಕೆಯಲಿದ್ದರೆ ಅದಕ್ಕೂ ಸಂಪ್ರದಾಯಿಕ ಕಟ್ಟಪಾದುಗಳು ಅಂಟೀಕೊಳ್ಳಲಾರರೆಂದು ಹೇಳುವುದು ಮಾತ್ರ ಕಷ್ಟ, ಈ ದಿಕ್ಕಿನಲ್ಲಿ ಇನ್ನೂ ಬಹಳಷ್ಟು ಸಂಶೋಧನೆಗಳು ನದೆಯಬೇಕಾಗಿದೆ.ಇದುವರೆಗೆ ನಿರ್ಮಿತವಾದ ಕ್ರತಕ ಭಾಷೆಗಳ ರಚನೆಯನ್ನು ಅಭ್ಯಾಸ ಮಾದಿ ಅವನ್ನು ಇತರ ಪ್ರಾಕ್ರತಿಕ ಭಾಷೆಗಳೊಂದಿಗೆ ಹೋಲಿಸಿ ನೋಡಿ,ನಮ್ಮೆದುರಿಗೆ ಸಮಸ್ಯೆಯ ನಿಜರೊಪವೇನೆಂಬುದನ್ನ್ರಿಯಬೇಕು. ಅನ್ಂತರ,ಅದಕ್ಕೆ ಯೋಗ್ಯವಾದ ಪರಿಹಾರವನ್ನು ಹುಡುಕಬೇಕು. ಇದಕ್ಕೆಲ್ಲ ಹೆಚ್ಚಿನ ಕಾಲವಕಾಶ, ಸೂಕ್ತ ಪರಿಶೀಲನೆ ಅಗತ್ಯ.(ಡಿ.ಎಸ್.ಎಸ್)