ಪುಟ:Mysore-University-Encyclopaedia-Vol-1-Part-1.pdf/೧೧೦

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


ಅಂತರಾಷ್ಟ್ರೀಯ ರಾಜಕೀಯ - ಅಂತರಾಷ್ಟ್ರೀಯ ವಿಚಾರಸಂಸ್ಥೆ

ಇದು ಪ್ರಪಂಚಕ್ಕೆ ಸಂಬಂಧಿಸಿದ ಹಾಗೂ ರಾಷ್ಟ್ರೀಯ ಸಂಸ್ಥೆಗಳ ವಿಚಾರದಲ್ಲಿ ಒಕ್ಕೂಟಕ್ಕೆ ಅರಿವನ್ನುಂಟುಮಾಡುವುದು. ಏಷ್ಯ ಖಂಡದಲ್ಲಿ ಪ್ರಥಮ ಬಾರಿಗೆ ಭಾರತದಲ್ಲಿ ೨೧ನೆಯ ಅಂತಾರಾಷ್ಟ್ರೀಯ ಭೌಗೋಳಿಕ ಕಾಂಗ್ರೆಸ್ಸಿನ ಅಧಿವೇಶನವನ್ನು ೧೯೬೮ನೆಯ ಇಸವಿಯ ಡಿಸೆಂಬರ್ ಮಾಹೆಯಲ್ಲಿ ನಡೆಸಲಾಯಿತು(ಎಂ.ಎಸ್.ಎಂ.) ಅಂತಾರಾಷ್ಟ್ರೀಯ ರಾಜಕೀಯ: ರಾಜಕೀಯವಾಗಿ ಆಥಿ‍ಕವಾಗಿ ಹಾಗೂ ಸಾಂಸ್ಕೃತಿಕವಾಗಿ ರಾಷ್ಟ್ರಗಳು ಇತರ ರಾಷ್ಟ್ರಗಳೊಡನೆ ಸಂಬಂಧವನ್ನು ಬೆಳಸುತ್ತವೆಯಷ್ಟೆ. ಅಂತಾರಾಷ್ಟ್ರೀಯ ಮಟ್ಟದಲ್ಲಿನ ಅಂಥ ಸಂಬಂಧಗಳ, ವಾದವಿವಾದಗಳ ಹಾಗೂ ಇವುಗಳ ಸೂಕ್ಷಮ ಪರಿಹಾರಗಳ ವಿಚಾರಗಳನ್ನು ಇಲ್ಲಿ ಪ್ರತಿಪಾದಿಸಲಾಗಿದೆ. ವ್ಯವಹಾರ ಅನೇಕ ರೀತಿಯದಾಗಿರಬಹುದು. ಉದಾಹರಣೆಗೆ-ಗಡಿಗಳ ಬಗ್ಗೆ ಅಥವಾ ಅವು ತಮಗೆ ಸೇರಿದೆ ಎಂದು ಹೇಳುವ ಪ್ರದೇಶಗಳ ಬಗ್ಗೆ ಅಥವಾ ಇತರ ರಾಷ್ಟ್ರಗಳು ತಮ್ಮ ಜನರನ್ನು ಆದರಿಸುವ ರೀತಿಗಳ ಬಗ್ಗೆ-ವ್ಯವಹರಿಸಬೇಕಾಗುತ್ತದೆ. ರಾಷ್ಟ್ರಗಳು ವ್ಯಾಪಾರದ ಮೇಲೆ ಹಣ ಹೂಡುತ್ತವೆ. ಅವುಗಳ ನಾಗರಿಕರು, ವಿದ್ಯಾಥಿ‍ಗಳು, ಉಪಾಧ್ಯಾಯರು, ಚಿತ್ರಗಾರರು, ಸಂಗೀತಗಾರರು ಮತ್ತು ಧಮ‍ಪ್ರಚಾರಕರು ಅಧ್ಯಯನಕ್ಕೆ ಬೋಧಿಸುವುದಕ್ಕೆ, ಸಮಾವೇಶಗಳಲ್ಲಿ ಚಚಿ‍ಸುವ ಸಲುವಾಗಿ, ವಿದೇಶಕ್ಕೆ ಹೋಗುತ್ತಾರೆ. ಕೈಗಾರಿಕಾ ಕ್ರಾಂತಿ ಮತ್ತು ಸಾಗಾಣಿಕೆ ಹಾಗೂ ಸಂಪಕ‌ ವ್ಯವಸ್ಥೆಯಲ್ಲಿ ಅಭಿವ್ಋದ್ಧಿಯಾದಾಗಿನಿಂದ ವಿಶೇಷವಾಗಿ ಇಂಥ ಸಂಬಂಧಗಳ ಮಿತಿ ಮತ್ತು ತೀವ್ರತೆಯನ್ನು ವ್ಋದ್ಧಿಪಡಿಸಿಕೊಳ್ಳುತ್ತ ಪ್ರಪಂಚದ ರಾಷ್ಟ್ರಗಳು ಒಂದಕ್ಕೊಂದು ಹತ್ತಿರ ಬಂದಿವೆ. ಸಾಧಾರಣವಾಗಿ ಇಂಥ ಸಂಬಂಧಗಳು ಮೈತ್ರಿಯುತವಾಗಿ ಹಾಗೂ ಕ್ರಾಂತಿಯುತವಾಗಿರುತ್ತವೆ. ಆದರೆ ಕೆಲವು ಸಂದಭ‍ಗಳಲ್ಲಿ ಭಿನ್ನಾಭಿಪ್ರಾಯಗಳು ತಲೆದೋರುತ್ತವೆ. ರಾಷ್ಟ್ರಗಳ ಅವಶ್ಯಕತೆ ಹಾಗೂ ಸಾಮಥ್ಯ‍ಗಳು ಭಿನ್ನವಾಗಿರುವುದೇ ಇದಕ್ಕೆ ಕಾರಣ. ಆದರೂ ಈ ಸಂಬಂಧ ಯಾವಾಗಲೂ ಮತ್ತು ಎಲ್ಲೆಡೆಗಳಲ್ಲಿಯೂ ಸಮರಸವಾಗಿ ನಡೆದುಕೊಂಡು ಹೋಗುತ್ತದೆ ಎಂದು ಭಾವಿಸುವುದು ತ್ಪು. ವಾದವಿವಾದಗಳು ಹಾಗೂ ನಿಧಾ‍ರಗಳು, ಅನೇಕ ವಿಚಾರಗಳನ್ನು ಕ್ರಮಬದ್ಧಗೊಳಿಸಲು ಒಪ್ಪಂದಗಳು, ಯುದ್ಧಗಳು ಇದ್ದೇ ಇರುತ್ತವೆ.

ಅಂತಾರಾಷ್ಟ್ರೀಯ ರಾಜಕೀಯ ೧. ರಾಷ್ಟ್ರಗಳ ನಡುವೆ ಇರುವ ಚಾರಿತ್ರಿಕ ಹಾಗೂ ಸಮಕಾಲೀನ ಸಂಬಂಧಗಳನ್ನು ಯಾವ ಆಧಾರದ ಮೇಲೆ ನಡೆಸಿಕೊಂಡು ಹೋಗಬಹುದು ಎಂಬುದನ್ನು ವಿಶ್ಲೇಷಿಸಲು ೨. ಬಿಕ್ಕಟ್ಟನ್ನು ಯಾವ ಆಧಾರದ ಮೇಲೆ ತಡೆಹಿಡಿಯಬಹುದು ಅಥವಾ ಬಗೆಹರಿಸಬಹುದು ಮತ್ತು ಯಾವ ಆಧಾರದ ಮೇಲೆ ಅಂತಾರಾಷ್ಟ್ರೀಯ ಶಾಂತಿ ಮತ್ತು ಪುರೋಭಿವ್ಋದ್ಧಿಯನ್ನು ಉತ್ತಮಪಡಿಸಲು ಬೇಕಾದ ಸಹಕಾರಕ್ಕೆ ಒಂದು ರಚನಾತ್ಮಕ ರೀತಿಯನ್ನು ಕಂಡುಹಿಡಿಯಬಹುದು ಎಂಬ ವಿಷಯಗಳಿಗೆ ಗಮನಕೊಡುತ್ತದೆ.

ಸಾವ‍ಭೌಮತ್ವವನ್ನು ಹಾಗೂ ಸಮನಾನ ಹಕ್ಕನ್ನು ಬಯಸುವ ರಾಷ್ಟ್ರಗಳಿದ್ದು, ವಿಶ್ವಸಕಾ‍ರ ಇಲ್ಲದಿರುವಾಗ, ಅಂತಾರಾಷ್ಟ್ರೀಯ ರಾಜಕೀಯವೆನ್ನುವುದು ಸಹಜವಾಗಿ ಅಧಿಕಾರದ ಹೋರಾಟವೇ ಹೊರತು ಬೇರೆ ಅಲ್ಲ. ಪ್ರತಿಯೊಂದು ರಾಷ್ಟ್ರವೂ ತನ್ನ ರಾಜಕೀಯ ಭದ್ರತೆಯ ವಿಷಯವಾಗಿ ಅಸ್ಥೆ ಹೊಂದಿರುತ್ತದೆ. ಅಲ್ಲದೆ ತನ್ನ ರಾಜಕೀಯ, ಆಥಿ‍ಕ ಮತ್ತು ಸಾಂಸ್ಕೃತಿಕ ವಿಷಯಗಳಲ್ಲೇ ಆಸಕ್ತಿ ತಳೆದಿರುತ್ತದೆ. ಮುಖ್ಯವಾಗಿ ಪ್ರಭುತ್ವ ಎಂದರೆ ಒಂದು ರಾಷ್ಟ್ರ