ಪುಟ:Mysore-University-Encyclopaedia-Vol-1-Part-1.pdf/೧೩೬

ವಿಕಿಸೋರ್ಸ್ ಇಂದ
Jump to navigation Jump to search
ಈ ಪುಟವನ್ನು ಪರಿಶೀಲಿಸಲಾಗಿಲ್ಲ.


೧೩೬ ಅಕೆಡಮಿಗಳು ವಿಙ್ಯಾನಗಳೂ ಬಳಕೆಗೆ ಬಂದುವಲ್ಲದೆ ಗ್ರೀಸಿನ ಮತ್ತು ಪೂರ್ವ ರಾಷ್ತ್ರಗಳ ವಿದ್ಯಾವಂತರೆಲ್ಲ ಅಲ್ಲಿ ನೆರೆದು ಪ್ರವಚನದಲ್ಲಿ ಭಾಗಿಯಾದರು. ಅಲೆಕ್ಸಾಂದ್ರಿಯದ ಪ್ರಸಿದ್ಧ ಗ್ರಂಥಾಲಯಕ್ಕೆ ಅಂಕುರಾರ್ಪಣವಾದದ್ದು ಅಲ್ಲಿಯೆ.ಅಕೆದಮಿಯ ಪಾಂಟಾನಿಯಾನ: ೧೪೩೩ರಲ್ಲಿ ಆಂಟೋನಿಯ ಬೆಕಡೆಲ್ಲಿ ಎಂಬುವನಿಂದ ಪ್ಲಾರೆನ್ಸಿನಲ್ಲಿ ಸ್ಥಾಪನೆಯಾದ ವಿದ್ಯಾಪೀಠ. ಇದಕ್ಕಿಂತ ಪ್ರದಿದ್ಧವಾದುದೆಂದರೆ ೧೪೪೨ರ ಸುಮಾರಿನಲ್ಲಿ ಸ್ಥಾಪಿತವಾದ ಅಕೆಡಮಿಯ ಪ್ಲೇಟೋನಿಕ ವಿದ್ಯಾಪೀಠ. ಇವು ಪ್ಲೇಟೋವಿನ ಭಾಷೆಯ ಪರಿಷ್ಕರಣಕ್ಕೆ ಯತ್ನಿಸಿದುವು. ಕೀವಲ ಐವತ್ತ್ತು ವರ್ಷಗಲು ಮಾತ್ರ ಜೀವಂತವಾಗಿದ್ದರೂ ಈ ಸಂಸ್ಥೆಗಲು ಮುಂದೆ ಬಂದ ಅನೀಕ ವಿದ್ಯಾಪೀಠಗಳಿಗೆಲ್ಲ ಮಾದರಿಯಾಗಿದ್ದು ಸ್ಪೂರ್ತಿಯನ್ನು ಕೊತ್ತುವು. ವೈಜ್ಞಾನಿಕ ಅಕೆಡಮಿಗಳು: ಈಚೆಗೆ ಯೂರೋಪು ಮತ್ತು ಅಮೆರಿಕಗಆಳಲ್ಲಿ ವಿಜ್ಞಾನ ವಿಷಯಗಳಿಗೆ ಶಂಬಂಧಪಟ್ಟ ಹಲವಾರು ವಿದ್ಯಾಪೀಠಗಲು ಸ್ಥಾಪನೆಯಾಗಿ ಉತ್ತಮ ಸೀವೆಯನ್ನು ಸಲ್ಲಿಸುತ್ತಿವೆ. ಅವುಗಳಲ್ಲಿ ಫ್ರಾನ್ಸಿನ ಫ್ರೆಂಚ್ ಅಕೆಡಮಿ, ಬರ್ಲಿನ್ನಿನ ಅಕೆಡಮಿ ಡರ್ವಿಸ್ಸೆನ್ ಛಾಪ್ಟನ್, ಐರ್ಲೆಂಡಿನ ರಾಯಲ್ ಅಕೆಡಮಿ, ರಷ್ಯದ ಇಂಪೀರಿಯಲ್ ಅಕೆದಮಿ-ಇವು ಪ್ರಸಿದ್ಧವಾದ ಸಂಸ್ಥೆಗಲು.(ಜಿ.ಎಚ್.) ಸಾಹಿತ್ಯ ಅಕೆಡಮಿಗಳು: ಇಟಲಿಯಲ್ಲಿ ಅಕೆಡಮಿಯ ಪಾಂಟಾನಿಯಾನದಂಥ ಇನ್ನೆರಡು ಸಂಸ್ಥೆಗಳು ಉಲ್ಲೀಖನಾರ್ಹವಾಗಿವೆ. ಆರ್ಕೆಡಿ ಅಕೆಡಮಿಯು (೧೬೯೦) ಗ್ರಾಮಜೀವನಕ್ಕೆ ಸಂಬಂಧಿಸಿದ ಕವನಗಳಿಗೆ ಪ್ರೂತ್ಸಾಹವಿತ್ತು ಅವನ್ನು ಗ್ರಂಥರೂಪದಲ್ಲಿ ಪ್ರಚುರಪಡಿಸಿತು. ಇದಕ್ಕೆ ಈಗ ಇಟಾಲಿಯನ್ ಸಾಹಿತ್ಯ ಪರೊಷತ್ತು ಸಾಹಿತ್ಯ ಸ್ಪರ್ಧೆಗಳನ್ನು ಏರ್ಪಡಿಸಿ ಬಹುಮಾನವಿತ್ತು, ಪುರಸ್ಕರಿಸುವ ಕೆಲಸ ಮಾಡುತ್ತಿದೆ. ಇವುಗಳೊಂದಿಗೆ ಮುಖ್ಯವಾಗಿ ಫ್ರಾನ್ಸಿನ ಫ್ರೆಂಚ್ ಅಕೆಡಮಿ, ಜರ್ಮನಿಯ ದಿ ಫ್ರೂಟ್ ಫುಲ್ ಸೊಸೈಟಿ, ಇಟಲಿಯ ಅಕೆಡಮಿಯ ಫ್ಲಾರೆಂಟಿನ, ಸ್ಪೇನಿನ ದ್ ರಿಯಲ್ ಅಕೆಡಮಿಯ ಎಸ್ಟನೋಲ-ಇವನ್ನು ಸೀರಿಸಬಹುದು. (ಎಚ್.ಕೆ.ಆರ್.) ಕಲೆಗೆ ಮೀಸಲಾದ ಅಕೆಡಮಿಗಲು: ಇವು ಈಚಿನವು. ಗಿಲ್ಡುಗಳೆಂದು ಕರೆಯಲಾದ ವ್ಯಾಪಾರ ಸಂಘಗಳು ಹುಟ್ಟಿದ ಅನಂತರ ಕಲೆಗಾರರ ಹಕ್ಕುಬಾಧ್ಯತೆಗಳನ್ನು ಸಂರಕ್ಷಿಸಲು ಅದೇ ಮಾದರಿಯ ಸಂಘಸಂಸ್ಥೆಗಳು ಏರ್ಪಟ್ಟವು. ಕಾಲ ಕ್ರಮೀಣ ಅವು ಕಲೆಯ ಆರಾಧನೆ ಮತ್ತು ಬೋಧನೆಯನ್ನು ಕೈಗೊಂಡು ಕಲಾಕೇಂದ್ರಗಳಾದುವು. ಅವುಗಳಲ್ಲಿ ಮುಖ್ಯಾವಾದ ಕೆಲವನ್ನು ಮಾತ್ರ ಇಲ್ಲಿ ಹೆಸರಿಸಿದೆ: ೧. ಫ್ರಾನ್ಸಿನ ದಿ ಸ್ಕಲ್ಪ್ಚರ್ (೧೬೪೮). ಇದರೊಂದಿಗೆ ೧೬೭೧ರಲ್ಲಿ ಸ್ಥಾಪಿತವಾದ ಅಕೆಡಮಿ ಆಫ್ ಆರ್ಕಿಟೇಕ್ಚರ್ ಸಂಸ್ಥೆ ವಿಲೀನವಾಯಿತು. ೨. ಇಟಲಿಯ ಅಕೆಡಮಿ ಆಫ್ ಪೇಂಟಿಂಗ್ ಆಂಡ್ ಸ್ಕಲ್ಪ್ಚರ್ ಆಫ್ ಟೂತರಿನ್ (೧೭೭೬); ವೆನಿಸ್ ಪ್ಲಾರೆನ್ಸ್ ಮೊದೇನ ಮೊದಲಾದ ಕಡೆಗಳಲ್ಲಿರುವ ದಿ ಅಕೆಡಮಿ ಆಫ್ ಆರ್ಟ್ಸ್ ಸಂಸ್ಥೆಗಳು. ೩. ರಷ್ಯದ ಅಕೆಡಮಿ ಆಫ್ ಸೇಂಟ್ ಪೀಟರ್ಸ್ ಬರ್ಗ್ (೧೮೧೬). ೪. ದಕ್ಷಿಣ ಅಮೆರಿಕದ ಎಸ್ಕೊಲ ನ್ಯಾಷನಲ್ ದಿ ಬೆಲಾಸ್ ಆರ್ಟ್ಸ್ (೧೮೧೬), ೫. ಸ್ಪೇನಿನ ಅಕೆಡಮಿ ದಿ ಬೆಲ್ಲಾಸ್ ಆರ್ಟ್ಶ್ ದಿ ಸ್ಯಾನ್ ಫರ್ನ್ಯಾಂಡೊ ಐದನೆಯ ಫಿಲಿಪ್ಪನಿಂದ ಸ್ಥಾಪಿತವಾದದ್ದು. ೬. ಸ್ವೀಡನ್ನಿನ ಸ್ಟಾಕ್ ಹೋಂನಲ್ಲಿ ಸ್ಥಾಪಿತವಾದ ಅಕೆದಡಮಿ ಆಫ್ ಫೈನ್ ಆರ್ಟ್ಸ್ (೧೭೩೩). ೭. ಅಮೆರಿಕ ಸಂಯುಕ್ತ ಸಂಸ್ಥಾನಗಳಲ್ಲಿರುವ ನ್ಯಾಷನಲ್ ಅಕೆಡಮಿ ಆಫ್ ಡಿಸೈನ್ (೧೮೨೬). ೮. ಬ್ರಿಟನ್ನಿನಲ್ಲಿ-ಲಂಡನ್ನಿನ ರಾಯಲ್ ಅಕೆಡಮಿ ಆಫ್ ಆರ್ಟ್ಸ್ (೧೭೬೮), ದಿ ಅಕೆಡಮಿ ಆಫ್ ಏನ್ ಷಂಟ್ ಮ್ಯೂಸಿಕ್ (೧೭೧೦). ೯. ಟರ್ಕಿಯ ದಿ ಅಕೆಡಮಿ ಆಫ್ ಆರ್ಟ್ಸ್ (೧೯೦೮), ಇವು ಮುಖ್ಯವಾದುವು. (ಪಿ.ಎಸ್.) ರಾಯಲ್ ಅಕೆಡಮಿ ಆಫ್ ಆರ್ಟ್ಸ್: ಚಿತ್ರಕಲೆಯ ಅಭಿವೃದ್ಧಿಗಾಗಿ ಒಂದು ಸಂಘವನ್ನು ಸ್ಥಾಪಿಸುವ ಉದ್ದೇಶದಿಂದ ಗ್ರೇಟ್ ಬ್ರಿಟನ್ನಿನ ಖ್ಯಾತ ಚಿತ್ರಕಾರರು ಮತ್ತು ವಾಸ್ತುಶಿಲ್ಪಕಾರರು ಅಂದಿನ ದೊರೆಯಾಗಿದ್ದ ಮೂರನೆಯ ಜಾರ್ಜ್ಗ ಗೆ ಅರ್ಪಿಸಿದ ಬಿನ್ನವತ್ತಳೆ ಫಲಪ್ರದವಾಗಿ ೧೭೬೮ರಲ್ಲಿ ಲಂಡನ್ನಿನಲ್ಲಿ ಈ ಅಕೆಡಮಿ ಸ್ಥಾಪನೆಗೊಂಡಿತು. ಸಂಘದ ಎರಡು ಮುಖ್ಯ ಉದ್ದೇಶಗಳೆಂದರೆ ಉತ್ತಮವಾಗಿ ನಿಯಂತ್ರಿತವಾದ ಒಂದು ಶಾಲೆಯ ಸ್ಥಾಪನೆ ಮತ್ತು ವಾರ್ಷಿಕ ಪ್ರದರ್ಶನ. ದೊರೆಯೇ ಅಕೆಡಮಿಯ ಪ್ರಧಾನ ಪೋಷಕ. ರಕ್ಶಕ ಮತ್ತು ಬೆಂನಲಿಗ. ಅಕೆಡಮಿಯಲ್ಲಿ ೪೦ ಜನ ಸದಸ್ಯರಿರಬೇಕೆಂದು ತೀರ್ಮಾನಿಸಿ, ಮೊದಲ ೩೪ ಜನರನ್ನು ಸಂಘ ನಾಮಕರಣ ಮಾಡಿತು. ಸಂಘದ ಕಾರ್ಯಕಲಾಪಗಳನ್ನು, ಮಂಡಲಿ ಮತ್ತು ಪ್ರಧಾನಾಡಳಿತ ಮಂಡಲಿಯ ಕೆಲಸಕಾರ್ಯಗಳ ಕಚೇರಿಗಳ ಸ್ಥಾಪನೆ ಹಾಗು ಹೊಸ ಸದಸ್ಯರನ್ನು ಆರಿಸುವ ಕ್ರಮ-ಮುಂತಾದುವುಗಳನ್ನು ಸಭೆಯೊಂದರಲ್ಲಿ ತೀರ್ಮಾನಿಸಲಾಯಿತು. ಅಕೆಡಮಿಯ ವ್ಯವಹಾರದಲ್ಲಿನ ಯಾವುದೇ ವಿಷಯದ ಮೇಲೆ ತೀರ್ಮಾನ, ಅಧ್ಯಕ್ಶರ ಮತ್ತು ಸಬ್ಭಿಂದಿಯ ನೇಮಕ, ಅಥವಾ ಯಾವುದೇ ತಿದ್ದುಪಡಿ ಮೊದಲಾದುವನ್ನು ಮಾಡಬೇಕಾದರೆ ಸಾರ್ವಭೌಮರ ಅನುಮತಿ ಪಡೆಯಬೇಕಾದದ್ದು ಅತ್ಯಗತ್ಯ ಅಧಿಕಾರ ವಹಿಸಿಕೊಅಳ್ಳುವ ೪೦ ಜನ ರಾಯಲ್ ಸದಸ್ಯರು ಮಂಡಳಿಯ ಹಾಗೂ ವಾರ್ಷಿಕ ಪ್ರದರ್ಶನಗಳ ಆಡಳಿತವನ್ನು ಒಂದು ಚಿಕ್ರೀಯ ಕ್ರಮದಲ್ಲಿ ನೋಡಿಕೊಳ್ಳುತ್ತಾರೆ. ೧೭೬೯ ಮತ್ತು ೧೯೧೮ರಲ್ಲಿ ಅಕೆಡಮಿಯಲ್ಲಿ ಎರಡು ಗಮನಾರ್ಹ ಬದಲಾವಣೆಗಳು ಕಂಡುಬಂದವು. ೩೦ಕ್ಕಿನ್ತ ಹೆಚ್ಚಿನ ಮತ್ತು ೩೫ಕ್ಕೆ ಮೀರಿದ ಒಂದು ಸಂಗಡಿಗರ ಕೂಟವೊಂದು ೧೭೬೯ರಲ್ಲಿ ರಚಿತವಾಯಿತು. ಈ ಕೂಟ ಅಕೆಡಮಿಯ ಸದಸ್ಯರನ್ನು ಚುನಾಯಿಸುವ ವಿವಿದ ಸಮಿತಿಗಳನ್ನು ಭಾಗವಹಿಸುತ್ತಿತ್ತು. ೧೯೧೮ರ ಬದಲಾವಂಎಯೆಂದರೆ, ೭೫ ವರ್ಷಕ್ಕೆ ಕಾಲಿಡುವ ಅಕೆಡಮಿಯ ಸದಸ್ಯರನ್ನು ಹಿರಿಯ ಸದಸ್ಯರೆಂದೂ (ಸೀನಿಯರ್ ಅಕೆಡಮಿಷಿಯನ್ಸ್) ಮತ್ತು ಹಿರಿಯ ಸಂಗಡಿಗರೆಂದೂ (ಸೀನಿಯರ್ ಅಸೋಸಿಯೇಟ್ಸ್) ವಿಭಾಗ ಮಾಡಿದ್ದು, ಇಂಥವರು ಯಾವುದೇ ಕಚೇರಿ ಅಥವಾ ಸಮಿತಿಯಲ್ಲಿ ಕೆಲಸ ಮಾಡಲು ಅರ್ಹರಾಗಿಲ್ಲದಿದ್ದರೂ ಅವರು ಜನರಲ್ ಅಸೆಂಬ್ಲಿಯಲ್ಲಿ ತಮ್ಮ ಮತ ಚಲಾಯಿಸುವ ಹಕ್ಕು ಮತ್ತು ಇನ್ನಿತರ ಹಕ್ಕುಗಳನ್ನು ಹೊಂದಿದ್ದವರಾಗಿದ್ದರು. ಇಂಥ ಸದಸ್ಯರಿಂದ ಮತ್ತು ಮರಣಹೊಂದಿದ ಸದಸ್ಯರಿಂದ ತೆರವಾದ ಸ್ಥಾನಕ್ಕೆ ಸರ್ವಸದಸ್ಸ್ಯರ ಸಭೆಯಲ್ಲಿ ಚುನಾವಣೆ ನಡೆದು ಆಯಾ ಸ್ಥಾನಕ್ಕೆ ಆಯ್ಕೆಯನ್ನು ನಡೆಸಲಾಗುತ್ತಿತ್ತು. ಸಾರ್ವಭೌಮರ ಸಹಿ ಹೊಂದಿರುವ ಡಿಪ್ಲೊಮಪ್ರಶಸ್ತಿಯನ್ನು ಸ್ವೀಕರಿಸುವುದಕ್ಕೆ ಮುಂಚಿತವಾಗಿ ಪ್ರತಿಯೊಬ್ಬ ಹೊಸ ರಾಯಲ್ ಸದಸ್ಯನೂ ತನ್ನ ಕಲಾನಿಪುಣತೆಯ ಒಂದು ಮಾದರಿಯನ್ನು ಅಕೆಡಮಿಗೆ ಅರ್ಪಿಸಬೇಕಾಗುತ್ತದೆ. ೧೮೬೮ರಲ್ಲಿ ತನ್ನ ಶತಮಾನೋತ್ಸವವನ್ನಾಚರಿಸಿದ ರಾಯಲ್ ಅಕೆಡಮಿ ಲಂಡನ್ನಿನ ಪಿಕ್ಯಾಡಿಲ್ಲಿಯಲ್ಲಿರುವ ಬರ್ಲಿಂಗ್ ಟನ್ ಹೌಸ್ ನಲ್ಲಿ ಈಗ ತನ್ನ ಕಚೇರಿಯನ್ನು ನಡೆಸುತ್ತಿದೆ. ಅಲ್ಲದೆ ಬರ್ಲಿಂಗ್ ಟನ್ ಹೌಸಿನ ಹೊರಗಡೆ ಸ್ವಮ್ತ ಖರ್ಚಿನಲ್ಲಿಯೇ ಸಭಾಂಗಣವನ್ನೂ ಉದ್ಯಾನವನದ ಒಂದು ಭಾಗದಲ್ಲಿ ಶಾಲೆಗಳನ್ನೂ ನಿರ್ಮಿಸಿದೆ. ಈಗ ಈ ಭವನವನ್ನು ವಿಸ್ತರಿಸಲಾಗಿದೆ. ೧೭೬೯ರಿಂದಲೂ ಈ ಅಕೆಡಮಿ ಜನಪ್ರಿಯವಾದ ತನ್ನ ಕಲಾಪ್ರದರ್ಶನವನ್ನು ನಡೆಸಿಕೊಂಡು ಬರುತ್ತಿದೆ. ಪ್ರತಿಯೊಬ್ಬ ಸದಸ್ಯನೂ ಆರಕ್ಕೆ ಮೀರಿದಂತೆ ತನ್ನ ಕಲಾಕೃತಿಗಳನ್ನು ಕಳುಹಿಸಿಕೊಡಲು ಅವಕಾಶವಿದೆ. ಪ್ರತಿ ವರ್ಷವೂ ೧೦,೦೦೦ ಹೆಚ್ಚು ಕಲಾಕೃತಿಗಳು ಬಂದು ಸುಮಾರು ೧,೫೦೦ನ್ನು ಪ್ರದರ್ಶಿಸಲಾಗುತ್ತದೆ. ಮಾರಾಟವಾದ ಯಾವುದೇ ರೀತಿಯ ಶೇಕಡ ರುಸುವನ್ನು ಸಂಗ್ರಹಿಸಲಾಗುವುದಿಲ್ಲ. ಮುಖ್ಯ ಸಭಾಂಗಣಾದಲ್ಲಿ ನಡೆಯುವ ಚಳಿಗಾಲದ ಪ್ರದರ್ಶನ ೧೮೭೦ರಲ್ಲಿ ಪ್ರಾರಂಭವಾಯಿತು. ಎದರಲ್ಲಿ ಪ್ರಾಚೀನ ಕಾಲನಿಪುಣರ ಅಂತಾರಾಷ್ಟ್ರೀಯ ಖಾತಿಗಳಿಸಿರುವ ಆತ್ಯುತ್ತಮ ಕಲಾಕ್ರುತಿಗಳಾನ್ನು ಪ್ರದರ್ಶಿಸಲಾಗುತ್ತದೆ. ೧೯೫೨ರಿಂದ ಈ ಸಭಾಂಗಣವನ್ನು ವರ್ಷವಿದೀ ವಿಶೇಷ ಎರವಲು ಪಡೆದ ಪ್ರದರ್ಶನಗಳಿಗೋಸ್ಕರವಾಗಿ ಉಪಯೋಗಿಸಲಾಗುತ್ತಿತು. ರಾಯಲ್ ಅಕೆಡಮಿ ನಡೆಸುತ್ತಿರುವ ಶಾಲೆಯ ಶಿಕ್ಶಣವನ್ನು ಕೈಗೊಳ್ಳಲು ಆಸಕ್ತಿಯುಳ್ಳ ಎಲ್ಲ ವಿಧ್ಯಾರ್ಥಿಗಳಿಗೂ ಉಚಿತ ಪ್ರವೇಶವನ್ನು ನೀಡಲಾಗುತ್ತದೆ. ಉತ್ತೀರ್ಣರಾದವರನ್ನು ಚಿತ್ರಕಲೆ ಮತ್ತು ಮೂರ್ತಿಶಿಲ್ಪ ಕಲಾಶಾಲೆಗಳಿಗೆ ಮೂರು ತಿಂಗಳಾ ಅವಧಿಗೆ ಸೇರಿಸಿಕೊಳ್ಳಲಾಗುತ್ತದೆ. ಇದಾದ ನಂತರ ಸಮ್ಮತಿ ದೊರೆತಲ್ಲಿ ಅವರನ್ನು ನಾಲ್ಕು ವರ್ಷದ ವಿದ್ಯಾರ್ಥಿವೇತನಸಹಿತ ಶಿಕ್ಶಣಾಕ್ಕೆ ಕಳುಹಲಾಗುತ್ತದೆ. ವಾಸ್ತುಶಿಲ್ಪದ ಶಾಲೆ ೧೯೪೭ರವರೆಗೂ ಈ ಕ್ರಮದಲ್ಲಿಯೇ, ಮುಂದುವರಿದು ಬಂದು ವರ್ಷ ಅವಧಿಯ ಸ್ನಾತಕೋತ್ತರ ಶಿಕ್ಶಂಆದ ಸೌಲಭ್ಯವನ್ನೂ ಕಲ್ಪಿಸಿದೆ. ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಧನಸಹಾಯವನ್ನು ಎಂದೂ ಈ ಅಕೆಡಮಿ ಸ್ವೀಕರಿಸಿಲ್ಲ. ತನ್ನ ಅಸ್ತಿತ್ವದ ಮೊದಲ ೧೧ ವರ್ಷಗಳಾಲ್ಲಿ ಇದರ ಆರ್ಥಿಕ ಪರಿಸ್ಥಿತಿ ಕದಗೆಟ್ಟು ದೊರೆಯೇ ತನ್ನ ರಾಜಧನದಿಂದ ಇದಕ್ಕೆ ಸಹಾಯಮಾಡಬೇಕಾಗಿ ಬಂದ ಸಂಧರ್ಭವೊಂದನ್ನು ಬಿಟ್ಟರೆ ಆರ್ಥಿಕವಾಗಿ ಇದು ಒಂದು ಸ್ವಾವಲಂಬಿ ಸಂಸ್ಥೆ, ಸಂಸ್ಥೆಯ ಭವನದ ಖರ್ಚು, ಸಾಮಾನ್ಯಾಡಳಿತದ ಖರ್ಚು-ಮುಂತಾದ ಖರ್ಚುಗಳಿಗೆ, ಪ್ರದರ್ಶನಕ್ಕೆ ಸಾರ್ವಜನಿಕರು ನೆರವು ನೀಡುತ್ತಾರೆ. ಇದಲ್ಲದೆ ಈ ಅಕೆಡಮಿ ವಿದ್ಯಾರ್ಥಿವೇತನಗಳನ್ನು ನೀಡಲು ಪ್ರಥಿಭಾವಂತ ಕಲಾನಿಪುಣರ ಕಲಾಕೃತಿಗಳನ್ನು ಕೊಳೃಲೆಂದೇ ಕೆಲವು ದ್ರವ್ಯನಿಧಿ ಸಂಸ್ಥೆಗಳಿಂದ ಧನವನ್ನು ಪಡೆಯುತ್ತಿದೆ. (ಎಸ್.ಆರ್.ಪಿ.) ಪ್ರಾಚೀನ ಭಾರತದ ಅಕೆಡಮಿಗಳು: ಪ್ರಾಚೀನ ಗ್ರೀಸಿನಲ್ಲಿ ಮತ್ತು ಮಧ್ಯಯುಗದ ಯುರೋಪಿನಲ್ಲಿ ಇದ್ದಂತೆ ಭಾರತದಲ್ಲೂ ವೇದಗಳ ಕಾಲದಿಂದಲೂ ಪ್ರಸಿದ್ಧವಾದ ವಿದ್ಯಾಪೀಠಗಳಿದ್ದುವು. ಇವುಗಳಲ್ಲಿ ಬ್ರಾಹ್ಮಣ ವಿದ್ಯಾಪೀಠಗಳು ತುಂಬ ಪ್ರಾಚೀನವಾದುವು. ವಸಿಷ್ಠ, ವಿಶ್ವಾಮಿತ್ರ, ಯಾಜ್ಞವಲ್ಕ್ಯ ಮುಂತಾದ ಋಷಿಗಳು ತಮ್ಮ ಆಶ್ರಮಗಳಲ್ಲಿ ಅನೇಕ ಶಿಷ್ಯರಿಗೆ ವಿದ್ಯೆ ಕಲಿಸುತ್ತಿದರೆಂದೂ ತಿಳಿಯುತ್ತದೆ. ಒಂದೇ ಕಾಲದಲ್ಲಿ ಸಾವಿರ ವಿದ್ಯಾರ್ಥಿಗಳನ್ನು